ಮೇಟಗಳ್ಳಿ ಸರ್ಕಾರಿ ಜಾಗದಲ್ಲಿದ್ದ ಅಕ್ರಮ ಕಟ್ಟಡ ತೆರವು
ಮೈಸೂರು

ಮೇಟಗಳ್ಳಿ ಸರ್ಕಾರಿ ಜಾಗದಲ್ಲಿದ್ದ ಅಕ್ರಮ ಕಟ್ಟಡ ತೆರವು

December 2, 2020

ಮೈಸೂರು, ಡಿ.1(ಎಸ್‍ಪಿಎನ್)- ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿ ಸಿದ್ದ ಕಟ್ಟಡವನ್ನು ಮೈಸೂರು ತಹಸೀ ಲ್ದಾರ್ ಟಿ.ಎಸ್.ರಕ್ಷಿತ್ ಅವರ ಆದೇಶದ ಮೇರೆಗೆ ಸೋಮವಾರ ಬೆಳಗ್ಗೆ ಕಾರ್ಯಾ ಚರಣೆ ನಡೆಸಿ ಜೆಸಿಬಿ ಮೂಲಕ ತೆರವು ಗೊಳಿಸಿ, ಜಾಗವನ್ನು ತಾಲೂಕು ಆಡಳಿತ ತನ್ನ ವಶಕ್ಕೆ ಪಡೆದುಕೊಂಡಿತು.

ಮೈಸೂರಿನ ಮೇಟಗಳ್ಳಿ ಸರ್ವೆ ನಂ.1 ಮತ್ತು 2ರ ನಡುವೆ ರಾಜಕಾಲುವೆ ಪಕ್ಕ ದಲ್ಲಿ ಇರುವ 100 ಅಡಿ ಉದ್ದ-50 ಅಡಿ ಅಗಲದ ಸರ್ಕಾರಿ ಜಾಗವನ್ನು ಜಯ ಚಂದ್ರ ಎಂಬಾತ ವಲಯ ಕಚೇರಿ 5ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ತನ್ನದಾಗಿಸಿ ಕೊಂಡಿದ್ದ. 10 ವರ್ಷಗಳ ಹಿಂದೆ ರಾಜು ಪಾಂಡಿ ಎಂಬಾತ ಜಯಚಂದ್ರನಿಂದ ಈ ನಿವೇಶನ ಖರೀದಿಸಿ ಕಟ್ಟಡ ನಿರ್ಮಿ ಸಿದ್ದ. ಈ ಅಕ್ರಮ ಕಟ್ಟಡವನ್ನು ತೆರವು ಗೊಳಿಸುವಂತೆ ಮೇಟಗಳ್ಳಿ ಗ್ರಾಮಸ್ಥರು ತಹಸಿಲ್ದಾರ್ ಟಿ.ಎಸ್.ರಕ್ಷಿತ್ ಅವರಿಗೆ ಹಲವು ದಿನಗಳ ಹಿಂದೆ ದೂರು ನೀಡಿದ್ದರು ಎಂದು ಕಂದಾಯ ನಿರೀಕ್ಷಕ ಶಿವಕುಮಾರ್ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಈ ಕುರಿತು ದಾಖಲೆಗಳನ್ನು ಪರಿ ಶೀಲಿಸಿದ ತಹಿಸೀಲ್ದಾರ್ ರಕ್ಷಿತ್, ಈ ಜಾಗವನ್ನು ವಶಕ್ಕೆ ಪಡೆಯುವಂತೆ ಆದೇಶಿಸಿದ್ದರು. ಮೇಟಗಳ್ಳಿ ಪೊಲೀಸರ ಬಿಗಿ ಭದ್ರತೆಯಲ್ಲಿ ಜೆಸಿಬಿ ಮೂಲಕ ಕಟ್ಟಡವನ್ನು ತೆರವುಗೊಳಿಸಿ ಸರ್ಕಾರಿ ಜಾಗವನ್ನು ತಾಲೂಕು ಆಡಳಿತದ ವಶಕ್ಕೆ ಪಡೆಯಲಾಗಿದೆ.

ಪೊಲೀಸರಿಗೆ ಶೀಘ್ರ ದೂರು: ಈ ಜಾಗದ ಮೌಲ್ಯ ಅಂದಾಜು 5 ಕೋಟಿ ರೂ. ಇದೆ. ಸರ್ಕಾರಿ ಭೂಮಿ ಅತಿಕ್ರಮಿಸಿ ರುವ ತಪ್ಪಿಸ್ಥರ ವಿರುದ್ಧ 2-3 ದಿನದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲಾಗು ವುದು ಎಂದು ಶಿವಕುಮಾರ್ ವಿವರಿಸಿ ದರು. ಈ ಸಂದರ್ಭ ಸರ್ವೆಯರ್ ಬಸವರಾಜು ಸ್ಥಳದಲ್ಲಿ ಹಾಜರಿದ್ದರು.

 

 

Translate »