ಖ್ಯಾತ ವೈದ್ಯರು ಸೇರಿ 10 ಸಾಧಕರಿಗೆ `ಸ್ವಾಸ್ಥ್ಯ ಮಿತ್ರ’ ಪ್ರಶಸ್ತಿ ಪ್ರದಾನ
ಮೈಸೂರು

ಖ್ಯಾತ ವೈದ್ಯರು ಸೇರಿ 10 ಸಾಧಕರಿಗೆ `ಸ್ವಾಸ್ಥ್ಯ ಮಿತ್ರ’ ಪ್ರಶಸ್ತಿ ಪ್ರದಾನ

December 2, 2020

ಮೈಸೂರು, ಡಿ.1(ವೈಡಿಎಸ್)- ಮೈಸೂರು ಕುವೆಂಪು ನಗರದ ಆರೋಗ್ಯ ಭಾರತಿ ಕಚೇರಿ ಸಭಾಂಗಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಮಂದಿ ಸಾಧಕರಿಗೆ `ಸ್ವಾಸ್ಥ್ಯ ಮಿತ್ರ-2020’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆರೋಗ್ಯ ಭಾರತಿ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೈಸೂರು ಗ್ರಾಹಕ ಪರಿಷತ್‍ನ ಡಾ.ಎಸ್.ಪಿ.ತಿರುಮಲ ರಾವ್, ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್, ಖ್ಯಾತ ಮಕ್ಕಳ ತಜ್ಞ ಡಾ.ವಾಮನರಾವ್ ಬಾಪಟ್, ಮೂತ್ರಪಿಂಡ ತಜ್ಞ ಡಾ. ಪ್ರಕಾಶ್ ಪ್ರಭು, ನಗರ ಸಂಚಾರ ವಿಭಾ ಗದ ಡಿಸಿಪಿ ಗೀತಾ ಪ್ರಸನ್ನ, ಖ್ಯಾತ ಆಯುರ್ವೇದ ತಜ್ಞ ಡಾ.ಗುರು ಬಸವ ರಾಜು, ಸರ್ಕಾರಿ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಗಜಾನನ ಹೆಗಡೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮಿನಾರಾಯಣ ಶೆಣೈ, ಜಿಲ್ಲಾ ಕಣ್ಣಿನ ಆಸ್ಪತ್ರೆ ಹಿರಿಯ ನೇತ್ರ ಚಿಕಿತ್ಸಕ ಡಾ. ಚೇತನ್‍ಕುಮಾರ್, ಜನಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನಗೌಡ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದಜಿ ಮಹಾರಾಜ್ ದಿವ್ಯ ಸಾನಿಧ್ಯ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ.ಎ.ಎಸ್.ಚಂದ್ರ ಶೇಖರ್, ಮೈಸೂರು ಸಿಟಿ ಕೋ ಆಪರೇ ಟಿವ್ ಬ್ಯಾಂಕ್ ಅಧ್ಯಕ್ಷ ಉಮಾಶಂಕರ್, ಯುವರಾಜ ಕಾಲೇಜು ಸಹಾಯಕ ಪ್ರಾಧ್ಯಾ ಪಕ ಮಹೇಶ್, ಆರೋಗ್ಯ ಭಾರತಿ ಅಧ್ಯಕ್ಷೆ ಡಾ.ಆಶಾ, ಉಪಾಧ್ಯಕ್ಷ ದಿನಕರ್, ವಿಭಾ ಗೀಯ ಸಂಯೋಜಕ ಅರುಣಾ ಚಲಂ, ಮುರುಳಿ, ಸಂಚಾಲಕ ಎಸ್.ಬಿ.ಎಂ ಪ್ರಸನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »