ಅಕ್ರಮ ಮರಳು ಸಾಗಣೆ: ವಾಹನ ವಶ
ಮೈಸೂರು

ಅಕ್ರಮ ಮರಳು ಸಾಗಣೆ: ವಾಹನ ವಶ

May 18, 2020

ಸೋಮವಾರಪೇಟೆ, ಮೇ 17- ಸಮೀ ಪದ ಕಾಗಡಿಕಟ್ಟೆ ಸೇತುವೆಯ ಕೆಳಭಾಗ ದಲ್ಲಿ ಹರಿಯುವ ಹೊಳೆಯಿಂದ ಮರ ಳನ್ನು ತೆಗೆದು ಅಕ್ರಮ ವಾಗಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣ ವನ್ನು ಪತ್ತೆಹಚ್ಚಿರುವ ಪೊಲೀಸರು, ಮರಳು ಸಹಿತ ಪಿಕ್‍ಅಪ್ ವಾಹನ (ಕೆ.ಎ.18 ಎ. 9835) ವಶಪಡಿಸಿಕೊಂಡಿದ್ದಾರೆ. ಕಾಗಡಿಕಟ್ಟೆ ಸೇತುವೆಯ ಕೆಳಭಾಗದಲ್ಲಿ ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಮೂಟೆ ಗಳನ್ನು ಸಾಗಾಟಗೊಳಿಸಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದು, ಆರೋಪಿ ಗಳು ಪರಾರಿಯಾಗಿದ್ದಾರೆ. ಕಾರ್ಯಾಚರಣೆ ಯಲ್ಲಿ ಠಾಣಾಧಿಕಾರಿ ಶಿವಶಂಕರ್, ಮುಖ್ಯಪೇದೆ ನವೀನ್, ಸಿಬ್ಬಂದಿಗಳಾದ ವಸಂತ್, ಕುಮಾರ್ ಭಾಗವಹಿಸಿದ್ದರು.

Translate »