ಶ್ರೀರಂಗಪಟ್ಟಣ ಬಳಿ ಕುಡಿಯುವ ನೀರು ಪೈಪ್‍ಲೈನ್ ಒಡೆದ ಪರಿಣಾಮ ಕಾಲುವೆಯಂತಾದ ಮೈಸೂರು-ಬೆಂಗಳೂರು ಹೆದ್ದಾರಿ
ಮಂಡ್ಯ

ಶ್ರೀರಂಗಪಟ್ಟಣ ಬಳಿ ಕುಡಿಯುವ ನೀರು ಪೈಪ್‍ಲೈನ್ ಒಡೆದ ಪರಿಣಾಮ ಕಾಲುವೆಯಂತಾದ ಮೈಸೂರು-ಬೆಂಗಳೂರು ಹೆದ್ದಾರಿ

August 21, 2021

ಶ್ರೀರಂಗಪಟ್ಟಣ, ಆ.20(ವಿನಯ್ ಕಾರೇಕುರ)- ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ರಸ್ತೆ ಕಾಲುವಂತಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು.

ಶ್ರೀರಂಗಪಟ್ಟಣ ತಾಲೂಕಿನ ಬಾಬು ರಾಯನಕೊಪ್ಪಲು ಗ್ರಾಮದ ಬಳಿ ಶುಕ್ರವಾರ ಪೈಪ್‍ಲೈನ್ ಒಡೆದು ನೀರು ಬುಗ್ಗೆ ರೀತಿ ಚಿಮ್ಮುತ್ತಿತ್ತು.
ಬಾಬುರಾಯನಕೊಪ್ಪಲು ಗ್ರಾಮದ ಲೋಕಪಾವನಿ ಸೇತುವೆ ಬಳಿ ಮಂಡ್ಯಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‍ಲೈನ್ ಹಾದುಹೋಗಿತ್ತು. ಈ ಪೈಪ್ ಒಡೆದು ಅಪಾರ ಪ್ರಮಾಣದ ಕುಡಿಯುವ ಕಾವೇರಿ ನೀರು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಹರಿಯಲಾರಂಭಿಸಿತು. ಹೆದ್ದಾರಿ ಸೇತುವೆ ಮೇಲೆ ಮಂಡಿಯುದ್ದ ನೀರು ನಿಂತು ಹೆದ್ದಾರಿ ಇಡೀ ರಸ್ತೆ ಕಾಲುವೆ ಯಂತಾಗಿದೆ. ಇದೇ ನೀರಿನ ಹೆದ್ದಾರಿ ಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಬೈಕ್ ಮತ್ತು ಸಣ್ಣಪುಟ್ಟ ವಾಹನಗಳ ಸವಾರರು ಪರದಾಡುತ್ತಿದ್ದರು. ರಸ್ತೆಗೆ ಪೈಪ್‍ಲೈನ್ ನೀರು ಹರಿಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಯವರು ಇತ್ತ ಬಾರದೆ ನಿರ್ಲಕ್ಷ್ಯ ವಹಿಸಿ ದ್ದರಿಂದ ಸಂಜೆವರೆಗೂ ಅಪಾರ ಪ್ರಮಾ ಣದ ನೀರು ಪೋಲಾಯಿತು. ನಂತರ ನಾಗರಿಕರು ದೂರಿದ ಮೇಲೆ ಸಂಜೆ 6 ಗಂಟೆಯ ನಂತರ ಪೈಪ್ ದುರಸ್ತಿಪಡಿಸಿದರು.

Translate »