CBSE ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ 11ನೇ ಕ್ಲಾಸ್‍ಗೆ ಯಾವುದೇ ವಿಷಯದ ಕಾಂಬಿನೇಷನ್ ಆಯ್ಕೆಗೆ ಅವಕಾಶ
News

CBSE ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ 11ನೇ ಕ್ಲಾಸ್‍ಗೆ ಯಾವುದೇ ವಿಷಯದ ಕಾಂಬಿನೇಷನ್ ಆಯ್ಕೆಗೆ ಅವಕಾಶ

May 4, 2021

ನವದೆಹಲಿ: 11ನೇ ತರಗತಿ ವಿದ್ಯಾರ್ಥಿಗಳು ಯಾವುದೇ ವಿಷಯದ ಕಾಂಬಿನೇಷನ್ ಆಯ್ಕೆ ಮಾಡಬಹುದು ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‍ಇ) ತಿಳಿಸಿದೆ. ಸಿಬಿಎಸ್‍ಇ ಶಾಲೆಗಳಲ್ಲಿ ಪ್ಲಸ್ 2ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಯಾವುದೇ ಸ್ಟ್ರೀಮ್‍ನಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಕಾಂಬಿನೇಷನ್‍ನಲ್ಲಿ ಯಾವುದೇ ವಿಷಯದ ಸಂಯೋಜನೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಸಿಬಿಎಸ್‍ಇ ತಿಳಿಸಿದೆ. ಮಂಡಳಿಯ ಅಧ್ಯಯನದ ಯೋಜನೆಯ ಪ್ರಕಾರ, ಯಾವುದೇ ಸ್ಟ್ರೀಮಿಂಗ್ ಇಲ್ಲದೆ ವಿದ್ಯಾರ್ಥಿಗಳಿಗೆ ಯಾವುದೇ ವಿಷಯಗಳ ಸಂಯೋಜನೆಯನ್ನು ನೀಡಲು ಅವಕಾಶವಿದೆ. ಶಾಲೆಗಳು ಇದನ್ನು ಅನುಸರಿಸಬೇಕು ಎಂದು ಉಲ್ಲೇಖಿ ಸಲಾಗಿದೆ. ಮಂಡಳಿಯ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಈ ವಿಧಾನ ಹೊಸದೇನಲ್ಲ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾಹಿತಿ ನೀಡಲಾಗಿದೆ. ಸಿಬಿಎಸ್‍ಇ ಮಂಡಳಿ ವಿಷಯಗಳನ್ನು ಸ್ಟ್ರೀಮ್ ಮಾಡುವುದಿಲ್ಲ. ವಿದ್ಯಾರ್ಥಿಯು ಒಂದು ಭಾಷೆಯನ್ನು ಆಯ್ಕೆ ಮಾಡಬಹುದು, ಯಾವುದೇ ಸಂಯೋಜನೆಯಲ್ಲಿ ಯಾವುದೇ ನಾಲ್ಕು ಆಯ್ಕೆಗಳನ್ನು ಶಾಲೆಯಲ್ಲಿ ಕಲಿಸಲಾಗುತ್ತದೆ. ಮಂಡಳಿ ನೀಡುವ ವಿಷಯಗಳಲ್ಲಿ ಹೆಚ್ಚುವರಿಯಾಗಿ ಆರನೇ ವಿಷಯವನ್ನು ನಿಗದಿತ ಪಠ್ಯಕ್ರಮದ ಪ್ರಕಾರ ಸ್ವಂತವಾಗಿ ನೀಡಬಹುದು ಅಥವಾ ಅಧ್ಯಯನ ಮಾಡಬಹುದು ಎಂದು ಹೇಳಲಾಗಿದೆ.

ರದ್ದುಪಡಿಸಲಾಗಿದ್ದ 10 ನೇ ತರಗತಿ ಪರೀಕ್ಷೆಗಳ ಮೌಲ್ಯಮಾಪನ ಮಾನದಂಡವನ್ನು ಮಂಡಳಿ ಬಿಡುಗಡೆ ಮಾಡಿದೆ. ಸಿಬಿಎಸ್‍ಇ ಮೌಲ್ಯಮಾಪನ ಮಾನದಂಡಗಳ ಪ್ರಕಾರ, ಶೈಕ್ಷಣಿಕ ವರ್ಷದಲ್ಲಿ ನಡೆಯುವ ಪರೀಕ್ಷೆಗಳು ಮತ್ತು ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲಾ ಗುತ್ತದೆ. ಪ್ರತಿ ವಿಷಯಕ್ಕೆ ಗರಿಷ್ಠ 100 ಅಂಕಗಳಿಂದ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. 20 ಅಂಕಗಳನ್ನು ಶಾಲೆಗಳು ಆಂತರಿಕ ಮೌಲ್ಯಮಾಪನವಾಗಿ ನೀಡಲಿದ್ದು, ಉಳಿದ 80 ಅಂಕಗಳನ್ನು ಆವರ್ತಕ ಪರೀಕ್ಷೆಗಳು, ಅರ್ಧ ವಾರ್ಷಿಕ ಅಥವಾ ಮಧ್ಯಕಾಲೀನ ಪರೀಕ್ಷೆಗಳು ಮತ್ತು ಪೂರ್ವ ಮಂಡಳಿಯ ಪರೀಕ್ಷೆಗಳಲ್ಲಿ ಅಂಕಗಳನ್ನು ಆಧರಿಸಿ ನೀಡಲಾಗುವುದು ಎಂದು ಮಂಡಳಿ ತಿಳಿಸಿದೆ. 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಜೂನ್ 20 ರಂದು ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.

Translate »