ಸಾಧಕರೊಂದಿಗೆ ಸಂವಾದದಲ್ಲಿ ಯುವ ಪ್ರತಿಭೆಗಳಿಗೆ ಸನ್ಮಾನ
ಮೈಸೂರು

ಸಾಧಕರೊಂದಿಗೆ ಸಂವಾದದಲ್ಲಿ ಯುವ ಪ್ರತಿಭೆಗಳಿಗೆ ಸನ್ಮಾನ

November 15, 2020

ಮೈಸೂರು, ನ.14-ಮೈಸೂರು ಆರ್ಟ್ ಗ್ಯಾಲರಿ ಒಂದಲ್ಲ ಒಂದು ಕಾರ್ಯಕ್ರಮ ಗಳ ಮೂಲಕ ಪ್ರತಿಯೊಬ್ಬರಿಗೂ ಉಚಿತ ವೇದಿಕೆಯನ್ನು  ಒದಗಿಸುತ್ತಿದೆ. ಸಾಧಕ ರೊಂದಿಗೆ ಸಂವಾದ ಕಾರ್ಯಕ್ರಮ ಹೆಸ ರಿಗೆ ತಕ್ಕಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕ ರನ್ನು ಗುರುತಿಸಿ, ಅವರನ್ನು ಸನ್ಮಾನಿಸಿ ಅವ ರೊಂದಿಗಿನ ಮುಕ್ತ ಸಂವಾದ ಕಾರ್ಯ ಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ.

ಆರ್ಟ್ ಗ್ಯಾಲರಿಯಲ್ಲಿ 53ನೇ ಸಾಧಕ ರೊಂದಿಗೆ ಸಂವಾದ ಕಾರ್ಯಕ್ರಮ ವಿಶೇಷ ವಾಗಿತ್ತು. ಮಕ್ಕಳ ದಿನಾಚರಣೆಯ ಪ್ರಯುಕ್ತ ಮೂವರು ಯುವಪ್ರತಿಭೆಗಳನ್ನು ಗುರುತಿಸಿ ಅವರೊಂದಿಗಿನ ಮಾತುಕತೆ, ಅವರ ಅನಿ ಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಯಿತು.

ಆರ್ಟ್ ಗ್ಯಾಲರಿ ಆವರಣದಲ್ಲಿ ಕಲಾ ಪ್ರದರ್ಶನವನ್ನು ಹಿರಿಯ ರಂಗಕರ್ಮಿ ಗಳು ಮತ್ತು ವಸ್ತ್ರಾಲಂಕಾರ ಪರಿಣಿತರಾದ ಬಿ.ಎಂ.ರಾಮಚಂದ್ರ ಉದ್ಘಾಟಿಸಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಮೂವರು ಸಾಧನೆಯ ಮೆಟ್ಟಿಲು ಏರುತ್ತಿದ್ದಾರೆ. ಇಂಥವರನ್ನು ಗುರು ತಿಸುವ ಕಾರ್ಯ ಮಾಡುತ್ತಿರುವ ಆರ್ಟ್ ಗ್ಯಾಲರಿಗೆ ಹಾಗೂ ಮೂವರು ಪ್ರತಿಭೆ ಗಳನ್ನು ಅಭಿನಂದಿಸಿದರು. ಮತ್ತಷ್ಟು ಸಾಧನೆ ಮಾಡಿ ಎಂದು ಆಶೀರ್ವದಿಸಿದರು.

ಸನ್ಮಾನಿತರಾಗಿ ಸಂವಾದದಲ್ಲಿ ಬಹು ಮುಖ ಪ್ರತಿಭೆ ಶ್ರೇಷ್ಠ ಎಸ್.ಜುಪ್ತಿ ಮಠ್ ಮಾತನಾಡುತ್ತಾ, ಕಿರುತೆರೆ, ಹಿರಿತೆರೆಯಲ್ಲಿನ ಸಾಧನೆಯ ಬಗ್ಗೆ ತಿಳಿಸಿ, ತಮ್ಮ ಗುರುಗಳ ನ್ನೆಲ್ಲ ನೆನಪಿಸಿಕೊಂಡರು. ಓದಿನ ಜೊತೆಗೆ ಸ್ವಲ್ಪ ಸಮಯ ಮೀಸಲಿಟ್ಟು ಯಾವ ಸಾಧನೆಯನ್ನಾದರೂ ಮಾಡಬಹುದು ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಡ್ರಾಮಾ ಜೂನಿಯರ್  ಕಿರುತೆರೆಯಲ್ಲಿ ಪ್ರಸಿದ್ಧರಾಗಿರುವ ಮಹೇಂದ್ರ ಪ್ರಸಾದ್ ಮಾತನಾಡಿ, ಟಿವಿ ಕಾರ್ಯಕ್ರಮಗಳಿಗೆ ತಮ್ಮ ಆಯ್ಕೆ ಪ್ರಕ್ರಿಯೆ ಕುರಿತು ಮಾತನಾಡುತ್ತಾ, ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ನಾನು ಉಪಯೋಗಿಸಿಕೊಂಡಿದ್ದೇನೆ ಎಂದರು.

ಸಾಧಕರೊಂದಿಗೆ ಸಂವಾದ ಕಾರ್ಯ ಕ್ರಮ 53ನೇಯದಾಗಿದ್ದು ಇದುವರೆಗೂ ಹಿರಿಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿ ಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಯುವ ಪ್ರತಿಭೆಗಳನ್ನು ಸನ್ಮಾನ ಮಾಡಿದ್ದು, ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿ ದ್ದರು. ಇದೇ ವೇದಿಕೆಯಲ್ಲಿ ಹೆಚ್ಚಿನ ಅಂಕ ಪಡೆದ ಸರ್ಕಾರಿ ಶಾಲೆಯ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಣೆ ಮಾಡಿದರು. ನಂದೀಶ್ ಅವರು ರಚಿಸಿರುವ ಚಿತ್ರಗಳ ಪ್ರದರ್ಶನವು ನ.15ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವೀಕ್ಷಿಸಬಹುದು.

ಕಾರ್ಯಕ್ರಮದಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕøತರಾದ ಸಾಧ್ವಿ ಪತ್ರಿಕೆಯ ಸಂಪಾದಕ ಮಹೇಶ್ವರನ್, ಮೈಸೂರು ಆರ್ಟ್ ಗ್ಯಾಲರಿಯ ಸಂಸ್ಥಾಪಕ ಎಲ್.ಶಿವಲಿಂಗಪ್ಪ, ಕಾರ್ಯದರ್ಶಿ ಡಾ.  ಜಮುನಾರಾಣಿ ಮಿರ್ಲೆ, ರಾಜಶೇಖರ ಕದಂಬ, ಚಂದ್ರಶೇಖರ್, ನಿವೃತ್ತ ಶಿಕ್ಷಕ ಸಂಗಪ್ಪ, ಆಟ್ರ್ಸ್ ಗ್ಯಾಲರಿ ಸಂಚಾಲಕ ಶ್ರೀಕಂಠ ಮೂರ್ತಿ, ಮುನಿರಾವ್ ಮಾನೆ ಇದ್ದರು.