ಮೈಸೂರು, ಜು.15- ಪಿರಿಯಾಪಟ್ಟಣ ತಾಲ್ಲೂಕಿನ ಚಾಮುಂ ಡೇಶ್ವÀರಿ ವಿದ್ಯುತ್ ಸರಬರಾಜು ನಿಗಮ ನಿಯ ಮಿತ ವತಿಯಿಂದ ಜು.16ರಿಂದ ಜು.26ರವರೆಗೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಗುಳ್ಳೇದಹಳ್ಳ, ಲಾಮಾಕ್ಯಾಂಪ್, ಬೈಲಕುಪ್ಪ ಫೀಡರ್ ಮಾರ್ಗ ಮುಕ್ತತೆಯಲ್ಲಿರುತ್ತದೆ. ಆದ್ದರಿಂದ ಹುಣಸವಾಡಿ, ನವಿಲೂರು, ಪುನಾಡಹಳ್ಳಿ ಹಾಗೂ ಬೈಲಕುಪ್ಪ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುವ ಎಲ್ಲಾ ಗ್ರಾಮಗಳಿಗೆ ಜು.16ರಿಂದ 26ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಜು.17ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆವರೆಗೆ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿ ಕೊಳ್ಳಲಾಗಿದೆ. ಕಡಕೊಳ, ಸಿಂಧುವಳ್ಳಿ, ದಡದಹಳ್ಳಿ, ಚಿಕ್ಕಕಾನ್ಯ, ದೊಡ್ಡಕಾನ್ಯ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಪ್ರಕಟಣೆ ತಿಳಿಸಿದೆ.
