ಕೇವಲ ಒಂದೂವರೆ ವರ್ಷದಲ್ಲಿ ಮೈಸೂರಲ್ಲಿ  2150 ಸೈಬರ್ ಕ್ರೈಂ ದಾಖಲು
ಮೈಸೂರು

ಕೇವಲ ಒಂದೂವರೆ ವರ್ಷದಲ್ಲಿ ಮೈಸೂರಲ್ಲಿ 2150 ಸೈಬರ್ ಕ್ರೈಂ ದಾಖಲು

June 29, 2021

ಮೈಸೂರು,ಜೂ.28-ಕೊರೊನಾ ಲಾಕ್‍ಡೌನ್ ನಡುವೆ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಮೈಸೂರು ನಗರದಲ್ಲಿಯೇ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 2,150 ಸೈಬರ್ ಕ್ರೈಂ ಸಂಬಂಧಿತ ದೂರು ದಾಖಲಾಗಿವೆ.

2020ರಲ್ಲಿ 1300 ಹಾಗೂ 2021ರ ಇಲ್ಲಿಯವರೆಗೆ 850 ಆನ್‍ಲೈನ್ ವಂಚನೆ ಸಂಬಂಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದು, ಶೇ.40ರಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಲಾಕ್‍ಡೌನ್ ಸನ್ನಿವೇಶವನ್ನೇ ಬಂಡವಾಳ ಮಾಡಿಕೊಂಡಿ ರುವ ಆನ್‍ಲೈನ್ ವಂಚಕರು ಇಲ್ಲ-ಸಲ್ಲದ ಆಸೆ, ಆಮಿಷ ಗಳನ್ನೊಡ್ಡಿ ಹಣ ದೋಚುವ ಪ್ರಕರಣಗಳು ಜಾಸ್ತಿಯಾಗಿವೆ. ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸಾಪ್, ಓಎಲ್‍ಎಕ್ಸ್(ಔಐಘಿ), ಎಟಿಎಂ, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ವಂಚನೆ, ಬಹುಮಾನದ ಹೆಸರಿನಲ್ಲಿ ದೋಖಾ, ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಹಾಗೂ ಮಹಿಳೆಯರ ಕುರಿತ ಅಶ್ಲೀಲ ವಿಡಿಯೋ-ಫೆÇೀಟೋ ಅಪ್‍ಲೋಡ್, ಅವಹೇಳನಕಾರಿ ಬರಹ, ಹ್ಯಾಕಿಂಗ್ ಮುಂತಾದ ಮಾರ್ಗ ಗಳ ಮೂಲಕ ಸಾರ್ವಜನಿಕರನ್ನು ವಂಚಿಸಲಾಗುತ್ತಿದೆ.

ಆರ್ಮಿ ಹೆಸರು ಬಳಕೆ: ಓಎಲ್‍ಎಕ್ಸ್‍ನಲ್ಲಿ ಕಾರು, ಬೈಕ್, ಸೈಟ್ ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡುವವರು ನಾನು ಆರ್ಮಿಯಲ್ಲಿದ್ದೆ. ಈಗ ಮನೆ ಬದಲಾವಣೆ ಮಾಡು ತ್ತಿದ್ದೇನೆ. ಕಡಿಮೆ ಬೆಲೆಗೆ ನಮ್ಮಲಿನ ಕೆಲ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇನೆ ಎಂದು ನಂಬಿಸಿ ಮೋಸ ಮಾಡು ವವರ ಸಂಖ್ಯೆ ಹೆಚ್ಚಾಗಿದೆ. ಮಾರಾಟ ಮಾಡುವ ವಸ್ತು ವಿನ ಜೊತೆಗೆ ಆರ್ಮಿ ಡ್ರೆಸ್‍ನಲ್ಲಿನಲ್ಲಿರುವಂತಹ ಫೋಟೊ, ನಕಲಿ ಐಡಿ ಕಾರ್ಡ್ ಮತ್ತು ಸಂಬಂಧಿತ ದಾಖಲೆಗಳನ್ನು ಅಪ್‍ಲೋಡ್ ಮಾಡಿ ವಂಚಿಸುತ್ತಿದ್ದಾರೆ. ಆರ್ಮಿಯಲ್ಲಿ ದ್ದವರು ಎಂದು ನಂಬಿ ಮೋಸ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಮೈಸೂರು ಸೈಬರ್ ಕ್ರೈಂ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಜಿ.ಶೇಖರ್ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.
ಗಿಫ್ಟ್: ಸಾಮಾಜಿಕ ಜಾಲತಾಣಗಳಲ್ಲಿ ಪರಿಚಿತರಾ ದವರು, ನಾನು ವಿದೇಶದಲ್ಲಿದ್ದೇನೆ ನಿನಗಾಗಿ ಇಂತಿಷ್ಟು ಚಿನ್ನ, ಹಣ ಹಾಗೂ ಇತರೆ ಬೆಲೆಬಾಳುವ ವಸ್ತುವನ್ನು ಗಿಫ್ಟ್ ಎಂದು ಕಳುಹಿಸುತ್ತಿದ್ದೇನೆ ಎಂದು ಹೇಳಿದ ಬಳಿಕ ತಾವೇ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿ ನಿಮಗೆ ಒಂದು ಗಿಫ್ಟ್ ಇದೆ. ನಿಮ್ಮ ಮನೆಗೆ ತಲುಪಿಸಲು ಟ್ರಾನ್ಸ್‍ಪೋರ್ಟ್ ತೆರಿಗೆ, ಜಿಎಸ್‍ಟಿ ಇನ್ನಿತರೆ ತೆರಿಗೆ ರೂಪದಲ್ಲಿ ಇಷ್ಟು ಹಣ ಕಟ್ಟ ಬೇಕು ಎಂದು ಆನ್‍ಲೈನ್ ಮೂಲಕ ಹಣ ಕಟ್ಟಿಸಿಕೊಂಡು ವಂಚನೆ ಮಾಡುತ್ತಾರೆ. ಹಾಗೆಯೇ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಅಶ್ಲಿಲ ವಿಡಿಯೋಗಳ ರೆಕಾರ್ಡ್ ಮಾಡಿ ಕೊಂಡು ಹಣ ನೀಡುವಂತೆ ಮತ್ತು ಹಣ ಕೊಡದಿದ್ದರೆ ಜಾಲತಾಣಗಳಿಗೆ ಅಪಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದರು.

ಲಾಕ್‍ಡೌನ್: ಕೊರೊನಾ ಲಾಕ್‍ಡೌನ್ ಜಾರಿಯಲ್ಲಿರುವು ದರಿಂದ ಬಹುತೇಕ ಜನರು ಮೊಬೈಲ್ ಬಳಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಶಾಪಿಂಗ್, ಹಣ ವರ್ಗಾವಣೆ ಸೇರಿದಂತೆ ಹೆಚ್ಚಿನ ಕೆಲಸಗಳನ್ನು ಆನ್‍ಲೈನ್ ಮೂಲಕವೇ ನಡೆಯುತ್ತವೆ. ಇಂತಹ ಪರಿಸ್ಥಿತಿಯನ್ನೇ ಬಳಕೆ ಮಾಡಿ ಕೊಂಡು ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದಾರೆ. ಲಾಕ್‍ಡೌನ್ ಆರಂಭವಾದಾಗಿನಿಂದ ನಿತ್ಯ 5ರಿಂದ 10 ಆನ್‍ಲೈನ್ ವಂಚನೆ ಸಂಬಂಧ ದೂರುಗಳು ಬರುತ್ತಲೇ ಇವೆ ಎಂದರು. ನೀವು ಲಕ್ಷ ಲಕ್ಷ ಬಹುಮಾನ ಗೆದ್ದಿದ್ದೀರಿ, ನಿಮ್ಮ ಖಾತೆಗೆ ಹಣ ಜಮಾ ಮಾಡಬೇಕಾಗಿದ್ದು, ಬ್ಯಾಂಕ್ ಅಕೌಂಟ್ ನಂಬರ್, ಐಎಫ್‍ಎಸ್‍ಸಿ ಕೋಡ್, ಪಾಸ್‍ವರ್ಡ್ ಜೊತೆಗೆ ಓಟಿಪಿ ನೀಡುವಂತೆ ನಯವಾಗಿ ಮಾತನಾಡು ತ್ತಾರೆ. ನಿತ್ಯ ಅಪರಿಚಿತರಿಂದ ಸಂದೇಶಗಳು ಬರುತ್ತಿರುತ್ತವೆ. ಆದರೆ, ಇಂತಹ ಅಪರಿಚಿತ ಕರೆ ಮತ್ತು ಸಂದೇಶಗಳಿಗೆ ಗಮನಹರಿಸಬಾರದು. ಟ್ರೂ ಕಾಲರ್ ಆ್ಯಪ್‍ನಲ್ಲಿ ಬ್ಯಾಂಕ್ ಮ್ಯಾನೇಜರ್, ಇತರೆ ಅಧಿಕಾರಿ ಎಂದೆಲ್ಲಾ ಹಾಕಿಕೊಂಡು ಕರೆ ಮಾಡುತ್ತಾರೆ. ಈ ವೇಳೆ ಎಚ್ಚರಿಕೆಯಿಂದ ಇರಬೇಕಾ ಗುತ್ತದೆ. ದೂರವಾಣಿ ಮೂಲಕ ಪರಿಚಿತರಲ್ಲದ ಯಾರೇ ಮಾತನಾಡಿ, ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿ ಮಾಹಿತಿ ಕೇಳಿದರೆ ಕೊಡಬಾರದು ಎಂದು ಎಚ್ಚರಿಸಿದರು.

Translate »