ಮೈಸೂರಲ್ಲೀಗ ಐದೇ ಜನ ಕೊರೊನಾ ಸೋಂಕಿತರು
ಮೈಸೂರು

ಮೈಸೂರಲ್ಲೀಗ ಐದೇ ಜನ ಕೊರೊನಾ ಸೋಂಕಿತರು

May 9, 2020

ಮೈಸೂರು, ಮೇ 8(ಎಂಟಿವೈ)- ಸಾಂಸ್ಕೃತಿಕ ನಗರಿ ಮೈಸೂರಲ್ಲಿ 7ನೇ ದಿನವೂ ಕೊರೊನಾ ಸೋಂಕಿತ ಹೊಸ ಪ್ರಕರಣ ಪತ್ತೆಯಾಗಿಲ್ಲ. ಶುಕ್ರವಾರ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಕ್ರಿಯ ಪ್ರಕರಣ ಕೇವಲ 5ಕ್ಕೆ ಕುಸಿದಿದ್ದರೆ, ಬಿಡುಗಡೆಯಾದವರ ಸಂಖ್ಯೆ 85ಕ್ಕೆ ಏರಿಕೆಯಾದಂತಾಗಿದೆ.

ಜಿಲ್ಲೆಯಲ್ಲಿ ಕಳೆದ 1 ವಾರದಿಂದ ಹೊಸ ಪ್ರಕರಣ ಪತ್ತೆಯಾಗದೇ ಇರುವುದು ಜಿಲ್ಲೆಯ ಜನರಲ್ಲಿ ಸಮಾಧಾನ ತಂದಿದೆ. 90ರ ಗಡಿ ಮುಟ್ಟಿದ್ದ ಸೋಂಕಿತರ ಸಂಖ್ಯೆ ಕೇವಲ 5ಕ್ಕೆ ಕುಸಿತ ಕಂಡಿದೆ. ಈ ಐದು ಮಂದಿ ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಮೂಲಕ ಕೊರೊನಾ ಮುಕ್ತ ಜಿಲ್ಲೆ ಯತ್ತ ಮೈಸೂರು ಹೆಚ್ಚೆ ಹಾಕುತ್ತಿದೆ. ಕಳೆದ 3 ದಿನದಿಂದ ಕ್ವಾರಂಟೈನ್‍ನಲ್ಲಿ ಕೇವಲ ಒಬ್ಬರು ಮಾತ್ರ ಇದ್ದರು. ಇಂದು ಹೊರ ರಾಜ್ಯಗಳಿಂದ ಜಿಲ್ಲೆ ಪ್ರವೇಶಿಸಿದ ಒಟ್ಟು 145 ಮಂದಿಯನ್ನು ಫೆಸಿಲೆಟೆಡ್ ಕ್ವಾರಂಟೈನ್(ಲಾಡ್ಜ್‍ಗಳಲ್ಲಿ) ಮಾಡಲಾಗಿದೆ. ಇದರಿಂದ ಕ್ವಾರಂಟೈನ್‍ನಲ್ಲಿರು ವವರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ. ಇದುವರೆಗೂ 4907 ಮಂದಿ ಮೇಲೆ ನಿಗಾ ಇಡ ಲಾಗಿತ್ತು. 4756 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. 4966 ಮಂದಿ ಯಿಂದ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. 4876 ಮಂದಿ ಸ್ಯಾಂಪಲ್ ನೆಗೆಟಿವ್ ಆಗಿ ಬಂದಿದೆ.

Translate »