ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್‍ಗೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ
ಮೈಸೂರು

ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್‍ಗೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ

May 9, 2020

ಮೈಸೂರು, ಮೇ 8 (ಆರ್‍ಕೆ)- ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ನೆರವು ನೀಡಲು ವಿಶೇಷ ಪ್ಯಾಕೇಜ್ ಘೋಷಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗ ದೀಶ್ ಶೆಟ್ಟರ್ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಕೈಗಾ ರಿಕೆಗಳ ಸಂಘದ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿ ವರು, ಲಾಕ್‍ಡೌನ್‍ನಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.

ರಾಜ್ಯಾದ್ಯಂತ ಕೈಗಾರಿಕಾ ಕ್ಷೇತ್ರದಲ್ಲಿ ಮಾಲೀ ಕರು ಮತ್ತು ಕಾರ್ಮಿಕರು ಅನುಭವಿಸು ತ್ತಿರುವ ತೊಂದರೆ ಬಗ್ಗೆ ಕೈಗಾರಿಕೋದ್ಯಮಿ ಗಳಿಂದ ಹಲವು ಬೇಡಿಕೆಗಳ ಕುರಿತು ಮನವಿ ಪತ್ರ ಬಂದಿವೆ. ಪರಿಸ್ಥಿತಿ ಅರ್ಥ ಮಾಡಿ ಕೊಂಡಿರುವ ತಾವು ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ ನೆರವು ನೀಡುವಂತೆ ತಾವು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದೂ ತಿಳಿಸಿದರು.

ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸ ಲಾಗಿದೆ. ಈ ಸಂಬಂಧ ಸರ್ಕಾರಗಳ ಹಂತದಲ್ಲಿ ಸಮಾಲೋಚನೆ ನಡೆಯು ತ್ತಿದೆ. ಕೇಂದ್ರದಿಂದ ಆರ್ಥಿಕ ನೆರವು ನಿರೀ ಕ್ಷಿಸಿರುವುದರಿಂದ ರಾಜ್ಯ ಸರ್ಕಾರ ಸದ್ಯ ದಲ್ಲೇ ಸಣ್ಣ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸುವ ನಿರೀಕ್ಷೆ ಇದೆ ಎಂದೂ ಜಗ ದೀಶ್ ಶೆಟ್ಟರ್ ಇದೇ ವೇಳೆ ನುಡಿದರು.

ಕಾರ್ಮಿಕರ ಮನವೊಲಿಸಿ: ಕೈಗಾರಿಕೆಗಳು ಕಾರ್ಯಾರಂಭವಾಗಿವೆ. ಕೆಲಸ ಮಾಡಿ. ನಿಮಗೆ ಸುರಕ್ಷತೆ, ಸೌಲಭ್ಯ ಒದಗಿಸುತ್ತೇವೆ ಎಂದು ನೀವು ಕಾರ್ಮಿಕರ ಮನವೊಲಿ ಸುವ ಮೂಲಕ ಅವರನ್ನು ಇಲ್ಲೇ ಉಳಿಸಿ ಕೊಳ್ಳಲು ಪ್ರಯತ್ನಿಸಿ. ನಾವೂ ಸಹ ಜಿಲ್ಲಾಡ ಳಿತದಿಂದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗದಂತೆ ತಡೆಯಲು ಪ್ರಯ ತ್ನಿಸುತ್ತೇವೆ ಎಂದೂ ಜಗದೀಶ್ ಶೆಟ್ಟರ್ ಕೈಗಾರಿಕೋದ್ಯಮಿಗಳಿಗೆ ಸಲಹೆ ನೀಡಿದರು.

ಈಗಾಗಲೇ ಸರ್ಕಾರ ಸಣ್ಣ ಕೈಗಾರಿಕೆ ಗಳ ವಿದ್ಯುತ್ ಶುಲ್ಕದೊಂದಿಗೆ ವಿಧಿಸುತ್ತಿದ್ದ ನಿಶ್ಚಿತ ಠೇವಣಿ ಹಣವನ್ನು 2 ತಿಂಗಳವರೆಗೆ ಮನ್ನಾ ಮಾಡಿದೆ. ಕಾರ್ಖಾನೆಗಳು ಕಾರ್ಯಾ ರಂಭಗೊಂಡರೆ ಕಾರ್ಮಿಕರಿಗೆ ಉದ್ಯೋಗ ಸಿಗುವುದಲ್ಲದೆ, ರಾಜ್ಯದ ಆರ್ಥಿಕ ಪರಿ ಸ್ಥಿತಿಯೂ ಉತ್ತಮವಾಗಲಿದೆ ಎಂದು ಸಚಿವರು ನುಡಿದರು.

ಟ್ರಕ್ ಸಂಚಾರಕ್ಕೆ ಅನುವು: ಕೈಗಾರಿಕೆಗಳು ಆರಂಭವಾಗಿರುವುದರಿಂದ ಸಂಬಂಧಿ ಸಿದ ಸಾಮಗ್ರಿಗಳನ್ನು ಸಾಗಿಸಲು ಟ್ರಕ್‍ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನೀವು ಕೇಳಿರುವ ಎಲ್ಲಾ ಬೇಡಿಕೆಗಳನ್ನು ಸರ್ಕಾ ರದ ಮಟ್ಟದಲ್ಲಿ ಚರ್ಚಿಸಿ ಹಂತ ಹಂತ ವಾಗಿ ಈಡೇರಿಸಲು ಪ್ರಯತ್ನಿಸುತ್ತೇವೆ. ಸರ್ಕಾರ ಸದಾ ನಿಮ್ಮೊಂದಿಗಿದೆ. ಆತಂಕಪಡ ಬೇಡಿ ಎಂದ ಜಗದೀಶ್‍ಶೆಟ್ಟರ್, ಕಾರ್ಮಿ ಕರು ಮತ್ತು ಮಾಲೀಕರ ಹಿತ ಕಾಪಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಕೈಗಾ ರಿಕೋದ್ಯಮಿಗಳಿಗೆ ಅಭಯ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸು, ಕಾರ್ಯದರ್ಶಿ ಸುರೇಶ್‍ಕುಮಾರ್ ಜೈನ್, ಸಿಐಐ ಅಧ್ಯಕ್ಷ ಮುತ್ತುಕುಮಾರ್, ಸೂಕ್ಷ್ಮ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಜಯಂತ್, ನಂಜನಗೂಡು ಕೈಗಾರಿಕೆಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಹಲವು ಕೈಗಾರಿಕಾ ಸಂಘಗಳ ಪದಾಧಿಕಾರಿ ಗಳು ಸಚಿವರಿಗೆ ತಮ್ಮ ಬೇಡಿಕೆಗಳ ಕುರಿತು ಮನವಿ ಪತ್ರ ಸಲ್ಲಿಸಿದರು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಬಿ.ಹರ್ಷವರ್ಧನ್, ನಿರಂಜನಕುಮಾರ್, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗ ರಾಜ್, ಆರ್.ಧರ್ಮಸೇನಾ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಎಸ್ಪಿ ಸಿ.ಬಿ. ರಿಷ್ಯಂತ್, ನಗರಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ, ಮುಡಾ ಆಯುಕ್ತ ಡಾ.ಡಿ.ಬಿ. ನಟೇಶ್ ಸೇರಿದಂತೆ ಹಲವು ಅಧಿಕಾರಿ ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿದೇಶಿ ಉದ್ಯಮಗಳು ಬಂದರೆ  ರಾಜ್ಯದಲ್ಲಿ ಮೂಲ ಸೌಲಭ್ಯಕ್ಕೆ ಆದ್ಯತೆ
ಮೈಸೂರು, ಮೇ 8(ಆರ್‍ಕೆ)- ಚೈನಾ, ಅಮೇರಿಕಾ ಸೇರಿದಂತೆ ವಿದೇಶಿ ಉದ್ಯಮಿಗಳು ಬರುವುದಾದರೆ ರಾಜ್ಯದ ಟಯರ್-2 ನಗರಗಳಲ್ಲಿ ಕೈಗಾರಿಕೆ ಸ್ಥಾಪಿಸಲು ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್‍ಶೆಟ್ಟರ್ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಬಾಂಗಣದಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡು ತ್ತಿದ್ದ ಅವರು, ಐದಾರು ತಿಂಗಳಲ್ಲಿ ಕೈಗಾರಿಕಾ ಕ್ಷೇತ್ರದ ದಿಕ್ಕೇ ಬದಲಾಗಲಿದೆ. ಜಪಾನ್, ಅಮೇರಿಕಾ ಸೇರಿದಂತೆ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳು ಚೈನಾ ತೊರೆದು ನಮ್ಮ ದೇಶಕ್ಕೆ ಬರುವ ಸಾಧ್ಯತೆ ಇದೆ ಎಂದು ನುಡಿದರು.

ವಿದೇಶೀ ಉದ್ಯಮಿಗಳು ಬರುವುದಾದರೆ, ಮೈಸೂರು ಸೇರಿ ದಂತೆ ರಾಜ್ಯದ ಟಯರ್-2 ನಗರಗಳಲ್ಲಿ ಕೈಗಾರಿಕೆ ಸ್ಥಾಪಿಸಲು ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದು. ಅದೇ ರೀತಿ ಚೈನಾ ಉದ್ಯಮಿಗಳು ಆಸಕ್ತಿ ತೋರಿ ಬಂದರೆ ಅವರಿಗೆ ಅವಾರ್ಡ್ ನೀಡಿ ಪ್ರೋತ್ಸಾಹಿಸುತ್ತೇವೆ ಎಂದು ಅವರು ತಿಳಿಸಿದರು.

ವಿದೇಶಿ ಕಂಪನಿಗಳು ಬಂದರೆ ಉದ್ಯೋಗ ಸೃಷ್ಟಿಯಾಗುವ ಜತೆಗೆ ರಾಜ್ಯ, ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ. ಆಮದು- ರಫ್ತು ವಹಿವಾಟು ವೃದ್ಧಿಗೊಂಡು ಅದರಿಂದ ಅಂತ ರಾಷ್ಟ್ರೀಯ ಬಾಂಧವ್ಯವೂ ಚೆನ್ನಾಗಿರುತ್ತದೆ ಎಂದು ನುಡಿದರು.
ಬೆಂಗಳೂರು ಹೊರತುಪಡಿಸಿದರೆ ಮೈಸೂರು ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿರುವುದರಿಂದ ಮುಂದಿನ ದಿನಗಳಲ್ಲಿ ಸಾಂಸ್ಕøತಿಕ ನಗರಿಯಲ್ಲಿ ಕೈಗಾರಿಕಾ ಸಮ್ಮೇಳನ ನಡೆಸಲುದ್ದೇಶಿಸ ಲಾಗಿದ್ದು, ಕೈಗಾರಿಕಾ ಬಂಡವಾಳ ಹೂಡುವವರನ್ನು ಒಟ್ಟಿಗೆ ಸೇರಿಸಲು ಪ್ರಕ್ರಿಯೆ ನಡೆಯುತ್ತಿವೆ ಎಂದೂ ಜಗದೀಶ್‍ಶೆಟ್ಟರ್ ನುಡಿದರು.

ಅದಕ್ಕಾಗಿ ರಾಜ್ಯ ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿ ರಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳೊಂದಿಗೆ ಮಾತ ನಾಡಿ ಟಾಸ್ಕ್‍ಫೋರ್ಸ್ ರಚಿಸಲು ಕ್ರಮವಹಿಸಲಾಗುವುದು ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮಾತನಾಡಿ, ಮೇ 2ರಂದು ಜಿಲ್ಲಾಧಿಕಾರಿ ಗಳ ಸಮ್ಮುಖದಲ್ಲಿ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಹಲವು ನ್ಯೂನತೆ ಹಾಗೂ ತೊಂದರೆಗಳಿರುವುದು ಗಮನಕ್ಕೆ ಬಂದಿತು. ನಂತರ ಜಗದೀಶ್ ಶೆಟ್ಟರ್‍ರೊಂದಿಗೆ ಮಾತನಾಡಿದಾಗ ಅವರು ಸ್ಪಂದಿಸಿ ಇಂದು ಇಲ್ಲಿಗೆ ಬಂದು ಸಮಸ್ಯೆಗಳನ್ನು ಆಲಿಸಿದ್ದಾರೆ ಎಂದರು.

Translate »