ಜೆಎಸ್‍ಎಸ್ ವೈದ್ಯಕೀಯ ಸಂಶೋಧನಾ ಸಂಸ್ಥೆಯಿಂದ ಕಡಿಮೆ ಬೆಲೆಯ ಅಮೂಲ್ಯ ವೈದ್ಯಕೀಯ ಉಪಕರಣ ಆವಿಷ್ಕಾರ
ಮೈಸೂರು

ಜೆಎಸ್‍ಎಸ್ ವೈದ್ಯಕೀಯ ಸಂಶೋಧನಾ ಸಂಸ್ಥೆಯಿಂದ ಕಡಿಮೆ ಬೆಲೆಯ ಅಮೂಲ್ಯ ವೈದ್ಯಕೀಯ ಉಪಕರಣ ಆವಿಷ್ಕಾರ

May 9, 2020

ಮೈಸೂರು,ಮೇ 8(ಎಂಟಿವೈ)- ಕೊರೊನಾ ಸೋಂಕು ಹರಡುವು ದನ್ನು ತಡೆಗಟ್ಟಲು ವಿವಿಧ ದೇಶಗಳಲ್ಲಿ ಹಲವು ವೈದ್ಯಕೀಯ ಸಲಕರಣೆಗಳ ಆವಿಷ್ಕಾರ ನಡೆಯುತ್ತಿರುವ ಬೆನ್ನ ಹಿಂದೆಯೇ ಮೈಸೂರು ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಎಚ್‍ಇಅರ್), ಐಡಿಯಾಸ್ ಅನ್‍ಲಿಮಿಟೆಡ್ ಸಂಸ್ಥೆ ಜತೆಗೂಡಿ ಕಡಿಮೆ ಬೆಲೆಯ ಬಹುಪ ಯೋಗಿ ವೈಜ್ಞಾನಿಕ ಉಪ ಕರಣ ಗಳನ್ನು ಅಭಿವೃದ್ಧಿಪಡಿಸಿದೆ.

`ಜೆಎಎಚ್‍ಇಅರ್’ಯು ಗಾಲಿಗಳ ಮೇಲಿನ ತುರ್ತು ಚಿಕಿತ್ಸಾ ಘಟಕ (ಐಸಿಯು), ಕಡಿಮೆ ವೆಚ್ಚದ ವೆಂಟಿ ಲೇಟರ್, ಡೆಂಟಿ ಸೇಫ್ ಕುರ್ಚಿ, ಯುವಿ ಸರ್ಫೇಸ್ ಸ್ಯಾನಿಟೈಸರ್ ಪರಿಕರಗಳನ್ನು ಅಭಿವೃದ್ಧಿಪಡಿಸಿದೆ. ಆ ಮೂಲಕ ವೈದ್ಯ ಕೀಯ ಕ್ಷೇತ್ರದಲ್ಲಿ ತುರ್ತು ಸಂದರ್ಭ ಗಳಲ್ಲಿ ಬಳಸಬಹುದಾದ ವೈಜ್ಞಾನಿಕ ಸಾಧನಗಳನ್ನು ತಯಾರಿಸುವ ಸಾಮಥ್ರ್ಯ ತಮ್ಮಲ್ಲಿಯೂ ಇದೆ ಎಂಬು ದನ್ನು ಸಾಬೀತುಪಡಿಸಿದೆ.

ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಶುಕ್ರವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಜೆಎಎಚ್ ಇಅರ್ ಹೊಸದಾಗಿ ಆವಿಷ್ಕರಿಸಿದ 5 ವೈದ್ಯಕೀಯ ಪರಿಕರಗಳನ್ನು ಲೋಕಾರ್ಪಣೆಗೊಳಿಸಿದರು.

5 ತಾಂತ್ರಿಕ ಉತ್ಪನ್ನ: ಈ ವೇಳೆ ಜೆಎಎ ಚ್‍ಇಅರ್ ಕುಲಪತಿ ಡಾ.ಸುರಿಂದರ್ ಸಿಂಗ್ ಮಾತನಾಡಿ, ಕೊರೊನಾ ಪಿಡುಗು ಹರಡ ದಂತೆ ತಡೆಯುವಲ್ಲಿ 3 ತಂತ್ರಗಳನ್ನು ಅನುಸರಿಸುವ ಪ್ರಯತ್ನ ಮಾಡಲಾಗಿದೆ. ರೋಗ ಹರಡುವಿಕೆ ತಡೆಗಟ್ಟುವಲ್ಲಿ ತಂತ್ರ e್ಞÁನದ ಪ್ರಗತಿ, ಹೊಸ ಔಷಧಿಗಳ ಸಂಶೋ ಧÀನೆ ಮತ್ತು ಮಾದರಿಗಳ ಅಧ್ಯಯನ ಮೂಲಕ ಪಿಡುಗು ವ್ಯಾಪಿಸುವುದನ್ನು ನಿಯಂತ್ರಿಸುವ ತಂತ್ರ ಅನುಸರಿಸಲಾಗಿದೆ. ಅಲ್ಲದೆ, ಐದು ತಾಂತ್ರಿಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಗಾಲಿಗಳ ಮೇಲಿನ ತುರ್ತು ಚಿಕಿತ್ಸಾ ಘಟಕ: ಇದನ್ನು ಯಾವುದೇ ವಿಪತ್ತು, ಪಿಡುಗು ಕಾಣಿಸಿಕೊಂಡಾಗಲೂ, ಎಂತಹ ಸ್ಥಳವಾಗಿ ದ್ದರೂ ಅಲ್ಲಿಗೆ ಕೊಂಡೊಯ್ಯಬಹುದಾಗಿದೆ. ತುರ್ತು ಸಂದರ್ಭದಲ್ಲಿ ರೋಗಿಗೆ ಸುವರ್ಣ ಸಮಯ(ಗೋಲ್ಡನ್ ಅವರ್) ದಲ್ಲಿ ಚಿಕಿತ್ಸೆ ನೀಡಲು ಸಹಾಯಕವಾಗಿದೆ. ಈ ಉಪಕರಣ ಬಳಕೆಯಿಂದ ತುರ್ತು ಚಿಕಿತ್ಸಾ ವೆಚ್ಚವೂ ತಗ್ಗಲಿದೆ. ರೋಗಿಗೆ ಮನೆಯಲ್ಲಿಯೂ ಚಿಕಿತ್ಸಾ ಸೌಲಭ್ಯ ಒದಗಿಸಲು ಸಾಧ್ಯವಾಗಿಸುತ್ತದೆ. ಈ ಉಪಕರಣದ ಮೌಲ್ಯ 4 ಲಕ್ಷ ರೂ.ಗಳು. ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಿದಾಗ ವೆಚ್ಚ ಕಡಿಮೆಯಾಗಬಹುದು ಎಂದರು.

ಕಡಿಮೆ ವೆಚ್ಚದ ವೆಂಟಿಲೇಟರ್: ಬಹಳ ಕಡಿಮೆ ವೆಚ್ಚದಲ್ಲಿ ವೆಂಟಿಲೇಟರ್ ಸಹ ತಯಾ ರಿಸಲಾಗಿದೆ. ಇದನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸುಲಭವಾಗಿ ಸಾಗಿಸಬಹು ದಾಗಿದೆ. ಮರುಬಳಕೆ ಮಾಡದಂತಹ ಎಎಂಬಿಯು ಚೀಲ ಮತ್ತು ಉಸಿರಾಟಕ್ಕೆ ಬೇಕಾಗುವಷ್ಟು ಸರಿ ಹೊಂದಿಸಬಹುದಾದ ಉಬ್ಬರವಿಳಿತದ ಪ್ರಮಾಣ ಮತ್ತು ಇತರೆ ವೆಂಟಿಲೇ ಟರ್‍ಗಳಲ್ಲಿ ಇರದ ಧನಾತ್ಮಕ ಸಾಧನ ಅಳವಡಿಸಲಾಗಿದೆ. ಇದರ ಬೆಲೆ 30 ಸಾವಿರ ರೂ. ಎಂದು ತಿಳಿಸಿದರು.

ಡೆಂಟಿ ಸೇಫ್: ಈ ಸಾಧನದಿಂದ ದಂತ ವೈದ್ಯರು ಮತ್ತು ರೋಗಿಗೆ ಸುರಕ್ಷೆ ದೊರಕುತ್ತದೆ. ಈ ಉಪಕರಣವನ್ನು ವೈe್ಞÁನಿಕವಾಗಿ ಸಂಚಾರಿ ಡಿವೈಸ್‍ನಂತೆ ರೂಪಿಸಲಾಗಿದೆ. ಪೇಷಂಟ್ ಕುರ್ಚಿ, ಚಿಕಿತ್ಸೆ ನೀಡಿದ ಜಾಗವನ್ನು 20 ನಿಮಿ ಷಕ್ಕೂ ಕಡಿಮೆ ಅವಧಿಯಲ್ಲಿ ರಾಸಾಯ ನಿಕ ರಹಿತವಾಗಿ ಕ್ರಿಮಿನಾಶಗೊಳಿಸು ವಂತೆ ವ್ಯವಸ್ಥೆ ಮಾಡಲಾಗಿದೆ. ಇದನ್ನು ದಂತ ವೈದ್ಯಕೀಯ ಆಸ್ಪತ್ರೆಯಲ್ಲಿ, ಹೊರ ಗಡೆ ಉಪಯೋಗಿಸಿದರೂ ರೋಗಿ ಗಳಿಗೆ ಮತ್ತು ವೈದ್ಯರಿಗೆ ಸುರಕ್ಷತೆ ನೀಡು ತ್ತದೆ. ಇದರ ಮೌಲ್ಯ 30 ಸಾವಿರ ರೂ. ಗಳು. ಉತ್ಪಾದನೆ ಪ್ರಮಾಣ ಹೆಚ್ಚಿಸಿದರೆ ವೆಚ್ಚ ತಗ್ಗಿಸಬಹುದಾಗಿದೆ ಎಂದರು.

ಮಲ್ಟಿಮೋಡ್ ಏರ್ ಸ್ಯಾನಿಟೈಸರ್: ಇದರಲ್ಲಿ 3 ಹಂತದ ಸ್ಯಾನಿಟೆಜೇಷನ್ ವ್ಯವಸ್ಥೆಗಳಿವೆ. ಒಂದು ನಿರ್ದಿಷ್ಟವಾದ ಯುವಿ ಚಿಕಿತ್ಸೆಗಳ
ತರಂಗಾಂತರಗಳ ಮೂಲಕ ವೈರಸ್ ನಿಷ್ಕ್ರಿಯಗೊಳಿಸಬಹುದು. ಇದರಲ್ಲಿ ಹೆಚ್‍ಇಪಿಎ ಫಿಲ್ಟರ್ ಇದ್ದು, ಗಾಳಿಯಲ್ಲಿನ ಕಣಗಳನ್ನು ಕಡಿಮೆಗೊಳಿಸಬಹುದು. ಇದರ ಮೌಲ್ಯ 4500 ರೂ. ಎಂದು ಅವರು ವಿವರಿಸಿದರು.

ಹ್ಯಾಂಡ್ ಹೆಲ್ಡ್ ಯುವಿ ಸರ್ಫೇಸ್ ಸ್ಯಾನಿಟೈಸರ್: ಲೀಥಿಯಂ ಐಯೋನ್ ಬ್ಯಾಟರಿ ಆಧರಿಸಿದ ಈ ಸಾಧನವನ್ನು ಮೊಬೈಲ್ ಬ್ಯಾಟರಿ ಚಾರ್ಜರ್‍ನಿಂದಲೂ ಚಾರ್ಜ್ ಮಾಡಬಹುದು. ಬಟನ್, ಕಿಬೋರ್ಡ್ ಮೂಲಕ ಸ್ಯಾನಿಟೈಸಿಂಗ್ ಮಾಡಬಹುದಾಗಿದೆ. ಸುಲಭವಾಗಿ ಜೇಬಿನಲ್ಲಿಯೇ ಇರಿಸಿಕೊಳ್ಳಬಹುದು. ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಸುರಕ್ಷತೆಗಾಗಿ ಬಳಸಬಹುದು. ಇದರ ಮೌಲ್ಯವು 1250 ರೂ. ಎಂದರು. ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಅಕಾಡೆಮಿಯ ಸಮ ಕುಲಾಧಿಪತಿ ಡಾ.ಬಿ.ಸುರೇಶ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಎಸ್.ಬಾಲಸುಬ್ರಮಣ್ಯಂ, ಡಾ.ಹೆಚ್.ಬಸವನಗೌಡ, ಡಾ.ಎಸ್.ರವೀಂದ್ರ, ಡಾ.ಶ್ರೀನಿವಾಸ ಮೂರ್ತಿ, ಡಾ.ಬಿ.ನಂದಲಾಲ್, ಡಾ.ಬಿ.ಮಂಜುನಾಥ ನೇತೃತ್ವದ ಸಂಶೋಧÀನಾ ತಂಡವು ಮೈಸೂರಿನ ಐಡಿಯಾಸ್ ಅನ್‍ಲಿಮಿಟೆಡ್ ಸಹಭಾಗಿತ್ವದಲ್ಲಿ ಈ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಿದೆ. ಅಕಾಡೆಮಿಯ ಸಂಶೋಧನಾ ಅಭಿವೃದ್ಧಿ ನಿಧಿಯಿಂದ ಹಣ ಒದಗಿಸಲಾಗಿದೆ.

Translate »