ನಂಜನಗೂಡು ಉಪಚುನಾವಣೆಯಲ್ಲಿ  ಸಿದ್ದರಾಮಯ್ಯ ಅತೀವ ನೋವು ಕೊಟ್ಟರು
ಮೈಸೂರು

ನಂಜನಗೂಡು ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅತೀವ ನೋವು ಕೊಟ್ಟರು

October 26, 2021

ಮೈಸೂರು, ಅ.25(ಆರ್‍ಕೆಬಿ)- ನನ್ನ 14 ಚುನಾವಣೆಗಳ ರಾಜಕೀಯ ಜೀವನ ದಲ್ಲಿ 13ನೇ ಚುನಾವಣೆಯಲ್ಲಿ ನನಗೆ ತುಂಬಾ ನೋವಾಗಿತ್ತು. ನಾನು ಅನುಭವಿಸಿದ ನೋವು ಹೇಳತೀರದು. ಅದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿ ವಾಸಪ್ರಸಾದ್ ಇಂದಿಲ್ಲಿ ಕಿಡಿ ಕಾರಿದರು.

ನಾನು ಅನೇಕ ಏಳು ಬೀಳುಗಳನ್ನು ಕಂಡಿ ದ್ದೇನೆ. ಐದು ಬಾರಿ ಸಂಸದನಾಗಿ, 2 ಬಾರಿ ಶಾಸಕನಾಗಿ, ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವನಾಗಿ ಅನುಭವ ಹೊಂದಿದ್ದೇನೆ. ಆದರೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನನಗಾದ ನೋವು, ಹಿಂದಿನ ಯಾವ ಚುನಾವಣೆಗಳಲ್ಲಿ ಗೆದ್ದಾಗಲೂ, ಸೋತಾಗಲೂ ಉಂಟಾಗಿರಲಿಲ್ಲ. ಅಷ್ಟೊಂದು ನೋವು, ತೊಂದರೆಯನ್ನು ನೀಡಿದರು ಎಂದು ಸೋಮವಾರ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಆಡಳಿತ ಪಕ್ಷವಾದ ಕಾಂಗ್ರೆಸ್‍ಗೆ 10 ದಿನವಾದರೂ ಅಭ್ಯರ್ಥಿಗಳೇ ಇರಲಿಲ್ಲ. ಕೊನೆಗೆ ಹೆಚ್.ಡಿ.ಕುಮಾರಸ್ವಾಮಿಯೊಂ ದಿಗೆ ಒಳಸಂಚು ನಡೆಸಿ, ಜೆಡಿಎಸ್‍ನ ತಾಲೂಕು ಅಧ್ಯಕ್ಷನಾಗಿದ್ದ ಕೇಶವಮೂರ್ತಿಯನ್ನು ನನ್ನ ವಿರುದ್ಧ ನಿಲ್ಲಿಸಿದರು. ಅಧಿಕಾರ ದುರುಪ ಯೋಗ ಮಾಡಿಕೊಂಡರು. ಕೆಂಪಯ್ಯನವ ರನ್ನು ಉಪಯೋಗಿಸಿಕೊಂಡು ಚುನಾವಣೆ ದಿನ ಪೊಲೀಸರ ಎದುರಿಗೆ ಒಂದರಿಂದ ಎರಡು ಸಾವಿರದವರೆಗೂ ಹಣ ಹಂಚಿ ದರು ಎಂದು ನೋವಿನಿಂದ ನುಡಿದರು.

ಅದೇ ಮಾದರಿಯನ್ನು ಈಗ ಸಿಂದÀಗಿ ಮತ್ತು ಹಾನಗಲ್ ಉಪ ಚುನಾವಣೆಯಲ್ಲೂ ಅನುಸರಿಸಿದ್ದಾರೆ. ವಿರೋಧ ಪಕ್ಷದ ನಾಯಕ ರಾಗಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಬೇಕು. ಬೆಲೆ ಏರಿಕೆಯ ಬಗ್ಗೆ ಮಾತ ನಾಡಬೇಕು. ಅದನ್ನು ಬಿಟ್ಟು, ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ, ರಾಜ್ಯ ಬಿಜೆಪಿ ನಾಯಕರ ಬಗ್ಗೆ ಏಕವಚನ ಬಳಸಿ ಮಾತ ನಾಡುತ್ತಿದ್ದಾರೆ. 40 ವರ್ಷಗಳ ರಾಜಕೀಯ ಅನುಭವ ಇದ್ದವರು. ಆದರೆ ಅವರ ಇತ್ತೀ ಚಿನ ಹೇಳಿಕೆಗಳು ಬಹಳ ಅಸಹ್ಯವೆನಿಸು ತ್ತಿದೆ. ವಿಪಕ್ಷ ನಾಯಕರಾಗಿ ನಿಮ್ಮ ಮಾತು ಇತಿಮಿತಿಯಲ್ಲಿರಬೇಕು. ನಿಮ್ಮ ಮಾತಿನ ವೇಗ ಅಪಘಾತಕ್ಕೂ ಕಾರಣವಾಗಬಹುದು ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

1984ರಲ್ಲಿ ರಾಜೀವ್‍ಗಾಂಧಿ ನೇತೃತ್ವ ದಲ್ಲಿ ಸ್ಪಷ್ಟ ಬಹುಮತದ ಕಾಂಗ್ರೆಸ್ ಸರ್ಕಾರ ವಿತ್ತು. ಕಾಂಗ್ರೆಸ್ ಹೊರತುಪಡಿಸಿದರೆ ಸ್ಪಷ್ಟ ಬಹುಮತದಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸಿ ದವರೆಂದರೆ ನರೇಂದ್ರ ಮೋದಿ ಒಬ್ಬರೇ. ಎರಡು ಬಾರಿ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಇಡೀ ವಿಶ್ವವೇ ಮೋದಿ ಯವರನ್ನು ಕೊಂಡಾಡುತ್ತಿದೆ ಎಂದರು.

ಅಂತಹ ನಾಯಕರ ಬಗ್ಗೆ ಸಿದ್ದರಾಮಯ್ಯ ಇತ್ತೀಚೆಗೆ ಏಕವಚನದಲ್ಲಿ ಮಾತನಾಡುತ್ತಿ ರುವುದು ಬಹಳಷ್ಟು ಬೇಸರ ತಂದಿದೆ. ಈ ನಡುವೆ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿಂದÀಗಿ, ಹಾನಗಲ್‍ನಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡುವುದನ್ನು ಬಿಟ್ಟು, ಮೈಸೂರು ಪ್ರವಾಸ ಮಾಡಿದ್ದಾರೆ. ಜೆಡಿಎಸ್ ರಾಜ್ಯ ದಲ್ಲಿ 2ನೇ ಸ್ಥಾನಕ್ಕೇ ಬಂದಿಲ್ಲ. ಒಮ್ಮೆ ಬಿಜೆಪಿ ಜೊತೆಗೆ, ಮತ್ತೊಮ್ಮೆ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಸಿಎಂ ಆಗಿದ್ದವರು. ಜೆಡಿಎಸ್ ಒಂದು ಕಂಪನಿ ಇದ್ದಂತೆ. ಅವರ ಕುಟುಂಬದ ಈ ಕಂಪನಿಯಲ್ಲಿ ಎಚ್.ಡಿ. ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಇನ್ನಿತ ರರಿದ್ದರೆ ಸಾಕು ಎಂದು ವ್ಯಂಗ್ಯವಾಗಿ ಹೇಳಿದರು. ಜೆಡಿಎಸ್ ಮತ್ತಷ್ಟು ದುರ್ಬಲ ವಾಗಿದೆ. ಬಿಜೆಪಿ ಶಕ್ತಿ ಹೆಚ್ಚು ಸುಧಾರಿಸಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲದ ಜೆಡಿಎಸ್ ಬಗ್ಗೆ ನಾನು ಮಾತನಾಡಲು ಅಷ್ಟಾಗಿ ಇಷ್ಟ ಪಡುವುದಿಲ್ಲ ಎಂದರು.

ರೈತರಿಗೆ ಪ್ಯಾಕೇಜ್ ನೀಡಿದ ಪ್ರಧಾನಿ: ರೈತರು ಪ್ರತಿಭಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಸಾದ್, ಕೃಷಿ ಕಾಯಿದೆ ಯನ್ನು ರೈತರು ವಿರೋಧ ಮಾಡುತ್ತಿದ್ದಾ ರಷ್ಟೆ. ಪಂಜಾಜ್‍ನ ರೈತರು ಮಾತ್ರ ಪ್ರತಿ ಭಟನೆ ಮಾಡುತ್ತಿದ್ದಾರೆ. ರೈತರ ಪರವಾಗಿ ಪ್ರಧಾನಮಂತ್ರಿಯವರೇ ಮಾತನಾಡಬೇಕೆಂ ದೇನೂ ಇಲ್ಲ. ಅದಕ್ಕಾಗಿ ಕೃಷಿ ಸಚಿವರೇ ಮಾತನಾಡಿದ್ದಾರೆ. ರೈತರ ಬಗ್ಗೆ ಅಗತ್ಯವಾದ ಪ್ಯಾಕೇಜ್ ಅನ್ನು ಪ್ರಧಾನಿ ಮೋದಿ ನೀಡಿ ದ್ದಾರೆ. ಲಖ್ಖಿಂಪುರ ಘಟನೆಯಲ್ಲಿ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಬಂಧಿಸ ಲ್ಪಟ್ಟಿದ್ದಾರೆ. ಪರಿಹಾರ ಸಹ ನೀಡಲಾಗಿದೆ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಮುಖ್ಯಮಂತ್ರಿ ಗಳಿದ್ದಾಗಲೂ ಇಂತಹ ದೌರ್ಜನ್ಯಗಳು ನಡೆದಿರಲಿಲ್ಲವೇ? ಎಂದರು.

ರಾಜ್ಯದಲ್ಲಿ ಮಳೆಯಿಂದ ಅಪಾರ ಆಸ್ತಿ, ಪಾಸ್ತಿ ಹಾನಿಯಾಗುತ್ತಿದ್ದರೂ ಮಂತ್ರಿಗಳು ಉಪಚುನಾವಣೆಯಲ್ಲಿ ನಿರತರಾಗಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವನೊಬ್ಬನನ್ನೇ ದೂಷಿಸು ವುದು ಎಷ್ಟು ಸರಿ. ಅಧಿಕಾರಿಗಳು, ಜಿಲ್ಲಾಡ ಳಿತ ಕಣ್ಣು ಮುಚ್ಚಿ ಕುಳಿತಿಲ್ಲ ಎಂದರು.

ಎಂಎಲ್‍ಸಿ ಚುನಾವಣೆಯಲ್ಲಿ ಬಸವೇ ಗೌಡರಿಗೆ ಟಿಕೆಟ್ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಅವರಿಗೆ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ನಾನು ಹೇಳುತ್ತೇನೆ. ಉಳಿದದ್ದು ವರಿಷ್ಠರಿಗೆ ಬಿಟ್ಟಿದ್ದು ಎಂದರು. ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಿ.ಬಸವೇಗೌಡ, ಶಿವ ಕುಮಾರ್, ಮಾಂಬಳ್ಳಿ ನಂಜುಂಡಸ್ವಾಮಿ, ಭರತ್ ರಾಮಸ್ವಾಮಿ ಉಪಸ್ಥಿತರಿದ್ದರು.

Translate »