ಬಾಯಲ್ಲಿ ಜಾತ್ಯತೀತವಾದ, ಆದರೆ  ಮಾಡುವುದು ಬರೀ ಜಾತಿ ಸಮಾವೇಶ
ಮೈಸೂರು

ಬಾಯಲ್ಲಿ ಜಾತ್ಯತೀತವಾದ, ಆದರೆ ಮಾಡುವುದು ಬರೀ ಜಾತಿ ಸಮಾವೇಶ

October 26, 2021

ಮೈಸೂರು, ಅ.25(ಆರ್‍ಕೆಬಿ)- ಬಾಯಲ್ಲಿ ಜಾತ್ಯತೀತವಾದ ಹೇಳುವ ಸಿದ್ದರಾಮಯ್ಯ ಸಿಂದಗಿಯಲ್ಲಿ ತಳವಾರ, ಕುರುಬ, ಕೋಳಿ ಸಮಾಜದ ಪ್ರತ್ಯೇಕ ಸಮಾವೇಶಗಳನ್ನು ನಡೆಸಿದ್ದಾರೆ. ಇದು ಯಾವ ಜಾತ್ಯತೀತತೆ? ಜಾತಿಯನ್ನು ಸೃಷ್ಟಿ ಮಾಡುತ್ತಿರುವವರೇ ಸಿದ್ದರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿಂದಗಿ ಮತ್ತು ಹಾನ ಗಲ್ ಉಪಚುನಾವಣೆಯಲ್ಲಿ ಜೆಡಿಎಸ್ ಸೋಲಿಸಿ, ಬಿಜೆಪಿಯನ್ನು ಗೆಲ್ಲಿಸಲೆಂದೇ ಸಿದ್ದರಾಮಯ್ಯ ಮತ್ತು ಸಂಗಡಿಗರು ಅಲ್ಲಿ ಬೀಡು ಬಿಟ್ಟಿದ್ದಾರೆ. ಜಾತ್ಯತೀತ ಎಂದು ಹೆಸ ರಿಟ್ಟುಕೊಂಡಿರುವ ಜೆಡಿಎಸ್‍ನದು ಯಾವ ಜಾತ್ಯತೀತವಾದ ಎಂದು ಅವರು ಹೇಳುತ್ತಿ ರುತ್ತಾರೆ. ಆದರೆ ಅವರೇ ಉಪ ಚುನಾವಣೆ ಯಲ್ಲಿ ಪ್ರತ್ಯೇಕ ಜಾತಿ ಸಮಾವೇಶಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು.

ಜಾತಿ ಹೋಗಬೇಕು ಎಂದು ಹೇಳಿಕೆ ನೀಡುವ ಸಿದ್ದರಾಮಯ್ಯ ಜಾತಿ ಸಮಾ ವೇಶಗಳನ್ನು ಏಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಚುನಾವಣೆಯಲ್ಲಿ ಮತ ಪಡೆಯುವುದಷ್ಟೇ ಅಲ್ಲವೇ ಅವರ ಜಾತಿ ರಾಜಕೀಯ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯನವರ ಮಾತಿನಲ್ಲಿ ಹುರು ಳಿಲ್ಲ. ಜಾತಿ-ಜಾತಿಯ ನಡುವೆ ಕಂದಕ ಸೃಷ್ಟಿ ಮಾಡುತ್ತಿದ್ದಾರೆ. ಅದೇ ಅವರ ನಡ ವಳಿಕೆ. ಮೊದಲು ಅವರ ನಡವಳಿಕೆ ಏನು ಎಂಬುದನ್ನು ಸ್ಪಷ್ಪಪಡಿಸಬೇಕು. ಗಾಜಿನ ಮನೆ ಯಲ್ಲಿ ಕುಳಿತು ಇನ್ನೊಂದು ಪಕ್ಷದ ಮೇಲೆ ಕಲ್ಲು ಹೊಡೆಯುತ್ತಿದ್ದಾರೆ ಎಂದು ಟೀಕಿಸಿದರು.

ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆಯೇ ಹೋರಾಟ ವಿದೆ. ಅಲ್ಲಿ 20 ವರ್ಷದಿಂದಲೂ ನಿರಂ ತರವಾಗಿ ನಡೆದ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆದಿದೆ. ಕಳೆದ ಬಾರಿಯೂ ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲಿ ಹೋರಾಟ ಮಾಡಿ ಕೇವಲ 18 ಸಾವಿರ ಮತಗಳನ್ನು ಪಡೆದಿತ್ತು ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಮೇಯರ್ ಎಂ.ಜೆ.ರವಿಕುಮಾರ್ ಇನ್ನಿತರರಿದ್ದರು.

Translate »