ಮೇಯರ್ ಸುನಂದಾ ಪಾಲನೇತ್ರರಿಗೆ ಸನ್ಮಾನ
ಮೈಸೂರು

ಮೇಯರ್ ಸುನಂದಾ ಪಾಲನೇತ್ರರಿಗೆ ಸನ್ಮಾನ

October 26, 2021

ಮೈಸೂರು, ಅ.25(ಎಸ್‍ಪಿಎನ್)- ಹನ್ನೆರಡನೇ ಶತಮಾನದ ಸ್ತ್ರೀ ಸಮಾಜದ ಅಸಮಾನತೆಯನ್ನು ಬಗೆಹರಿಸುವಲ್ಲಿ ಶರಣರ ಪಾತ್ರ ಹಿರಿದು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಮಲೆಯೂರು ಗುರುಸ್ವಾಮಿ ಅಭಿಪ್ರಾಯಪಟ್ಟರು.

ಮೈಸೂರು ಜೆ.ಪಿ.ನಗರದ ಅಕ್ಕಮಹದೇವಿ ರಸ್ತೆಯಲ್ಲಿರುವ ಅಕ್ಕಮಹಾದೇವಿ ಪ್ರತಿಮಾ ಮಂದಿರ ಆವರಣದಲ್ಲಿ ಜೆ.ಪಿ.ನಗರ ಶರಣರ ವೇದಿಕೆ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ನೂತನ ಮೇಯರ್ ಸುನಂದಾ ಪಾಲನೇತ್ರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗಂಡು ಮತ್ತು ಹೆಣ್ಣು ಸಮಾನರು ಎಂಬ ಭಾವನೆಯನ್ನು ತರಲು ಶರಣರು, ವಚನಕಾರರ ಶ್ರಮ ಸಾಕಷ್ಟಿದೆ. ವಚನ ಸಾಹಿತ್ಯದಲ್ಲಿ ಗುರುತಿಸಿಕೊಂಡ ಅಕ್ಕ ಮಹಾದೇವಿ ಮೊದಲ ಮಹಿಳೆಯೂ ಹೌದು. ಭಾರತೀಯ ಸಂಸ್ಕøತಿ ಮತ್ತು ಪರಂಪರೆಯಲ್ಲಿ ಹೆಣ್ಣು ಮಾಯೆ ಅಲ್ಲ, ಕಣ್ಣು ಎಂಬ ಭಾವನೆ ಜನರ ಮನಸ್ಸಿನಲ್ಲಿ ಮೂಡಿಸುವಲ್ಲಿ ವಚನ ಚಳವಳಿ ಪಾತ್ರವೂ ಸೇರಿದೆ ಎಂದು ಹೇಳಿದರು.

ಅಕ್ಕ ಮಹಾದೇವಿ ರಾಜಸಂಸ್ಕøತಿ ಧಿಕ್ಕರಿಸಿದ ಧೀರ ಮಹಿಳೆ. ಲೌಕಿಕ ಬದುಕಿನಿಂದ ಆಧ್ಯಾತ್ಮಿಕ ಬದುಕಿತ್ತ ಮನಸ್ಸು ಬದಲಿಸಿ, ಹೆಣ್ಣು ದೈವತ್ವಕ್ಕೆ ಜಾರುವ ಅಂಶಗಳು ವಚನ ಸಾಹಿತ್ಯದಲ್ಲಿ ಪ್ರಮುಖವಾಗಿ ಉಲ್ಲೇಖವಾಗಿದೆ ಎಂದರು. ಈ ವೇಳೆ ಮೇಯರ್ ಸುನಂದಾ ಪಾಲನೇತ್ರ ಅವರನ್ನು ಅಭಿನಂದಿಸಲಾಯಿತು. ಪಾಲಿಕೆ ಸದಸ್ಯರಾದ ಶಾಂತಮ್ಮ ವಡಿವೇಲು, ಶಾರದಮ್ಮ ಈಶ್ವರ್, ಜೆ.ಪಿ.ನಗರ ಶರಣ ವೇದಿಕೆ ಅಧ್ಯಕ್ಷ ಎಸ್.ಪುಟ್ಟ ರಾಜಪ್ಪ, ಕಾರ್ಯದರ್ಶಿ ಜೆ.ನಾಗೇಂದ್ರಕುಮಾರ್, ಸಂಚಾಲಕ ಎಸ್.ನಂದೀಶ್, ಉಪಾ ಧ್ಯಕ್ಷ ಎಸ್.ಎಂ.ಶಿವಪ್ರಕಾಶ್, ಸಹ ಕಾರ್ಯದರ್ಶಿ ಬಿ.ಮಹದೇವಸ್ವಾಮಿ, ಖಜಾಂಚಿÀ ಸದಾಶಿವು, ನಿರ್ದೇಶಕರಾದ ಸುಧಾಕರ್, ಸತ್ಯೇಂದ್ರ ಮೂರ್ತಿ, ಪರಮೇಶ್ವರಪ್ಪ, ನಾಗರಾಜು, ಇಂಡಾಲ್ ಮಹದೇವಸ್ವಾಮಿ ಹಾಗೂ ಹೆಚ್.ವಿ.ಚಂದ್ರಶೇಖರ್ ಹಾಜರಿದ್ದರು.

Translate »