ರೈತರ ಅನುಕೂಲಕ್ಕಾಗಿ ಕ್ಸಾರ್ವಿಯೋ  ಸ್ಕೌಟಿಂಗ್ ಚಾಟ್‍ಬಾಟ್ ಸೇವೆ ಆರಂಭ
ಮೈಸೂರು

ರೈತರ ಅನುಕೂಲಕ್ಕಾಗಿ ಕ್ಸಾರ್ವಿಯೋ ಸ್ಕೌಟಿಂಗ್ ಚಾಟ್‍ಬಾಟ್ ಸೇವೆ ಆರಂಭ

October 26, 2021

ಮೈಸೂರು,ಅ.25-ಭಾರತದ ಖ್ಯಾತ ಕೃಷಿ ಕಂಪನಿ ಬಿಎಎಸ್‍ಎಫ್ ಡಿಜಿಟಲ್ ಫಾರ್ಮಿಂಗ್ ಜಿಎಂಬಿಹೆಚ್, ಭಾರ ತದ ರೈತರು ಮತ್ತು ಕೃಷಿ ಸಲಹೆ ಗಾರರ ಅನುಕೂಲಕ್ಕಾಗಿ ಉಚಿತ ವಾಗಿ ಕ್ಸಾರ್ವಿಯೋ ಸ್ಕೌಟಿಂಗ್ ಚಾಟ್‍ಬಾಟ್ ಸೇವೆ ಆರಂಭಿಸಿದೆ.

ಈ ಚಾಟ್‍ಬಾಟ್ ಸೇವೆಯು ಕೃಷಿ ಮಾರುಕಟ್ಟೆಯ ಮುಂಚೂಣಿ ಸ್ಮಾರ್ಟ್‍ಫೆÇೀನ್ ಆಪ್ ‘ಕ್ಸಾರ್ವಿಯೋ ಸ್ಕೌಟಿಂಗ್’ಗೆ ಪೂರಕವಾಗಿ ಕೆಲಸ ಮಾಡಲಿದೆ. ಈ ಸ್ಮಾರ್ಟ್‍ಫೆÇೀನ್ ಆಪ್, ಗೊತ್ತಿಲ್ಲದ ಕಳೆ ಮತ್ತು ರೋಗಗಳನ್ನು ಗುರುತಿಸಲು, ನೈಟ್ರೋಜನ್ ಹೀರುವಿಕೆಯನ್ನು ವಿಶ್ಲೇಷಿಸಲು ಹಾಗೂ ಎಲೆಗೆ ಆದ ಹಾನಿ, ಬೆಳೆಯ ಬೆಳವಣಿಗೆ ಹಾಗೂ ಕೀಟಬಾಧೆಯ ಕುರಿತು ತಿಳಿಯಲು ನೆರವಾಗುತ್ತದೆ. ಭಾರತದಲ್ಲಿ ಈ ಚಾಟ್‍ಬಾಟ್ ಸೇವೆಯನ್ನು ಸ್ಥಳೀಯ ಕೃಷಿ ಪರಿಸ್ಥಿತಿ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಮಾರ್ಪಡಿಸಲಾಗಿದೆ. ಇದು ಭತ್ತ ಮತ್ತು ಆಲೂಗಡ್ಡೆ ಸೇರಿದಂತೆ 15 ಆಯ್ದ ಬೆಳೆಗಳಲ್ಲಿ ಕಳೆ ಮತ್ತು ರೋಗಗಳನ್ನು ಗುರುತಿಸುವ ಮೂಲಕ, ರೈತರು ಮತ್ತು ಕೃಷಿ ಸಲಹೆಗಾರರಿಗೆ ಸಮಯಕ್ಕೆ ಸರಿಯಾಗಿ ಹತೋಟಿ ಕ್ರಮ ಕೈಗೊಳ್ಳಲು ಬೇಕಾಗುವ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ ಎಂದು ಬಿಎಎಸ್‍ಎಫ್ ಅಗ್ರಿಕಲ್ಚರಲ್ ಸಲ್ಯೂ ಷನ್ಸ್ ಇಂಡಿಯಾದ ನಿರ್ದೇಶಕ ರಾಜೇಂದ್ರ ವೆಲಗಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »