ಪಾಲಿಕೆ ಸಭೆಯಲ್ಲಿ ಪ್ರತಿಧ್ವನಿಸಿದ ಮಳೆ ಅಬ್ಬರ
ಮೈಸೂರು

ಪಾಲಿಕೆ ಸಭೆಯಲ್ಲಿ ಪ್ರತಿಧ್ವನಿಸಿದ ಮಳೆ ಅಬ್ಬರ

October 27, 2021

ಮೈಸೂರು,ಅ.26(ಎಂಟಿವೈ)- ಕಳೆದ ಕೆಲವು ದಿನ ಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮೈಸೂರು ನಗರದಲ್ಲಿ ಅನಾಹುತ ಮತ್ತು ಅವಾಂತರ ಗಳು ಸಂಭವಿಸಿದ್ದು, ಮುಂದಿನ ದಿನಗಳಲ್ಲಿ ಇದು ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದರು.

ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣ ರಾಜ ಒಡೆಯರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಮುಂದುವರೆದ ಕೌನ್ಸಿಲ್ ಸಭೆಯಲ್ಲಿ ಮೈಸೂರು ನಗರದಲ್ಲಿ ಮಳೆಯಿಂದಾದ ಅನಾಹುತಗಳೇ ಪ್ರತಿಧ್ವನಿ ಸಿದವು. ಕಳೆದ ಒಂದು ವಾರದಿಂದ ನಗರದಲ್ಲಿ ಸುರಿದ ಮಳೆಯಿಂದ ತೊಂದರೆಗೊಳಗಾದ ತಮ್ಮ ವಾರ್ಡ್ ನಿವಾಸಿಗಳ ಪರವಾಗಿ ಎಲ್ಲಾ ಸದಸ್ಯರು, ಪಕ್ಷ ಭೇದ ಮರೆತು ದನಿಯೆತ್ತಿದರಲ್ಲದೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಮ್ಮಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಫೀಲ್ಡ್‍ಗೆ ಇಳಿದು ಕೆಲಸ ಮಾಡಬೇಕು. ಕೆಲಸ ಮಾಡದ ಅಧಿಕಾರಿಗಳನ್ನು ಮನೆಗೆ ವಾಪಸ್ ಕಳುಹಿಸಿ ಎಂದು ಎಚ್ಚರಿಸಿದ ಎಲ್ಲಾ ಸದಸ್ಯರೂ ಸತತ ನಾಲ್ಕು ಗಂಟೆಗಳ ಕಾಲ ಮಳೆ ಮತ್ತು ಅನಾಹುತಗಳ ಬಗ್ಗೆಯೇ ಚರ್ಚೆ ನಡೆಸಿ, ತುರ್ತು ಕ್ರಮಕ್ಕೆ ಆಗ್ರಹಿಸಿದರು.

ಮಳೆಯಿಂದಾಗಿ ಚರಂಡಿಗಳು ಉಕ್ಕಿ ಹರಿಯು ತ್ತಿವೆ. ಒಳಚರಂಡಿಗಳು ಬ್ಲಾಕ್ ಆಗಿದೆ. ತಗ್ಗು ಪ್ರದೇ ಶದ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡು ತ್ತಿದ್ದಾರೆ. ವೃದ್ಧರೊಬ್ಬರು ಮಳೆ ನೀರಲ್ಲಿ ಕೊಚ್ಚಿಕೊಂಡು ಹೋಗಿ, ಬಲಿಯಾಗಿದ್ದಾರೆ. ಅಧಿಕಾರಿಗಳು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡದೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕೆಲಸ ಮಾಡದ ಅಧಿಕಾರಿ ಗಳಿಂದ ಮೈಸೂರಿನ ಜನತೆಗೆ ಏನೂ ಪ್ರಯೋಜನ ವಿಲ್ಲ. ಇಂಥ ಅಧಿಕಾರಿಗಳಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕೆಲಸ ಮಾಡಲು ಇಷ್ಟವಿಲ್ಲದ, ಜನರ ಸಂಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳನ್ನು ವಾಪಸ್ ಮನೆಗೆ ಕಳುಹಿಸುವುದೇ ಉತ್ತಮ ಎಂದು ಸರ್ವ ಪಕ್ಷಗಳ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.

ಹೆಚ್ಚುವರಿ ಸಿಬ್ಬಂದಿ ನಿಯೋಜನೆ: ಇದೇ ವೇಳೆ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಮಳೆ ಅವಾಂತರದ ಪರಿಸ್ಥಿತಿ ನಿಭಾಯಿಸಲು ಪ್ರತಿ ವಾರ್ಡ್‍ಗೆ 8ರಿಂದ 10 ಮಂದಿ ಸಿಬ್ಬಂದಿ ನಿಯೋ ಜನೆ ಮಾಡಲಾಗಿದ್ದು, ವಲಯ ವ್ಯಾಪ್ತಿಯಲ್ಲಿ ಜಟ್ಟಿಂಗ್ ಮಿಷಿನ್, ಜೆಸಿಬಿ, ಲಾರಿ, ಹಿಟಾಚಿ, ಟ್ರಾಕ್ಟರ್‍ಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಮನೆ ಕುಸಿತಕ್ಕೆ ಪರಿಹಾರ: ಮಳೆಯಿಂದಾಗಿ ನಗರ ದಲ್ಲಿ ಹಲವೆಡೆ ಮನೆಗಳು ಕುಸಿದಿದ್ದು, ಮನೆ ಮಾಲೀ ಕರಿಗೆ ಪಾಲಿಕೆಯಿಂದ ಪರಿಹಾರ ನೀಡುವ ಸಂಬಂಧ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ನಿರ್ಧರಿಸ ಲಾಯಿತು. ಅನಾಹುತದಿಂದ ಮೃತಪಟ್ಟರೆ ಅಂತಹವ ರಿಗೆ 1 ಲಕ್ಷ ರೂ. ಪರಿಹಾರ, ಗಾಯಗೊಂಡರೆ 10 ರಿಂದ 20 ಸಾವಿರ ರೂ. ಪರಿಹಾರ ನೀಡಬೇಕೆಂದು ಪಾಲಿಕೆ ಸದಸ್ಯರು ಆಗ್ರಹಿಸಿದರು.

ನಗರದಲ್ಲಿ ಕೆಲವೆಡೆ ಮನೆ ಕುಸಿತಗೊಂಡಿದ್ದು, ಪಾಲಿಕೆ ಯಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಶಾಂತಕುಮಾರಿ ಒತ್ತಾಯಿಸಿದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಮಾಜಿ ಮೇಯರ್ ಅಯೂಬ್ ಖಾನ್, ಸಂತ್ರಸ್ತರಿಗೆ ಪರಿಹಾರ ನೀಡಲು ಪಾಲಿಕೆಯಲ್ಲಿ 10 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ ಎಂದರು.

ಇದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತರು, ಯಾವ ಪ್ರಮಾಣದ ಮನೆ ಹಾನಿಗೆ ಎಷ್ಟು ಪರಿಹಾರ ನೀಡ ಬೇಕು ಎಂಬುದರ ಬಗ್ಗೆ ನಿರ್ಧಾರವಾಗಿಲ್ಲ. ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯವಾದರೆ ಪರಿಹಾರ ನೀಡಲು ಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಈ ಬಗ್ಗೆ ಮುಂದಿನ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು.

ಜೆಡಿಎಸ್ ಸದಸ್ಯೆ ಪ್ರೇಮಾಶಂಕರೇಗೌಡ ಮಾತನಾಡಿ, 10 ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಸುಳಿವೇ ಇಲ್ಲ. ಮೈಸೂರಿನ ಜನತೆ ಕಷ್ಟದಲ್ಲಿ ದ್ದಾರೆ. ಅವರ ಸಮಸ್ಯೆ ಕೇಳುವವರು ಯಾರು? ಎಂದು ಪ್ರಶ್ನಿಸಿದರಲ್ಲದೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಜೆಡಿಎಸ್ ಸದಸ್ಯರಿಗೆ ಮಲತಾಯಿ ಧೋರಣೆ ಅನು ಸರಿಸಲಾಗುತ್ತಿದೆ. ಮಾತಾಡಲು ಅವಕಾಶ ನೀಡುವು ದಿಲ್ಲ, ಪಾಲಿಕೆಯಿಂದ ಕೊಟ್ಟಿರುವ ಕಪ್ಪು ಮಾಸ್ಕ್ ಧರಿಸುವುದಿಲ್ಲ. ಬಿಳಿ ಬಣ್ಣದ ಮಾಸ್ಕ್ ಕೊಡಲು ನಿಮಗೆ ಏನು ಕಷ್ಟ? ಎಂದು ಪ್ರಶ್ನಿಸಿದರು.

ರೋಬೋಟ್ ಎಲ್ಲಿ?: ಒಳಚರಂಡಿ ಶುಚಿಗೊಳಿ ಸುವ ರೋಬೋಟ್ ಎಲ್ಲಿದೆ? ಯಾಕೆ ಕೆಲಸ ಮಾಡು ತ್ತಿಲ್ಲ ಎಂದು ಎಲ್ಲ ಸದಸ್ಯರು ಒಕ್ಕೊರಲಿನಿಂದ ಪ್ರಶ್ನಿಸಿ ದರು. ಬಹಳ ಸೊಗಸಾಗಿ ಪ್ರಾತ್ಯಕ್ಷಿಕೆ ತೋರಿಸಿದಿರಿ. ರೋಬೋಟ್ ಬಂದಿರುವುದರಿಂದ ನಗರದ ಯುಜಿಡಿ ಸಮಸ್ಯೆ ಸಂಪೂರ್ಣ ನಿರ್ಮೂಲನೆಯಾಗುತ್ತದೆಂದು ಭಾವಿಸಿz್ದÉವು. ಆದರೆ ರೋಬೋಟ್ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದರು. ಸಭೆಯಲ್ಲಿ ಮೂರು ಪಕ್ಷಗಳ ಸದಸ್ಯರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಮಳೆ ನೀರಿ ನಿಂದ ಆಗಿರುವ ಅನಾಹುತಗಳ ಬಗ್ಗೆ ಗಮನ ಸೆಳೆದರು

Translate »