ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸನ್ಮಾನ
ಮೈಸೂರು

ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸನ್ಮಾನ

October 27, 2021

ಮೈಸೂರು, ಅ.26(ಎಸ್‍ಪಿಎನ್)- ಮೈಸೂರಿನ 8 ಇಂಜಿನಿಯರಿಂಗ್ ಕಾಲೇ ಜಿನಲ್ಲಿ ಸಿಟಿಎಂ ಮತ್ತು ಸಿವಿಲ್ ಇಂಜಿನಿ ಯರಿಂಗ್ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ 14 ವಿದ್ಯಾರ್ಥಿಗಳನ್ನು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮೈಸೂರು ಘಟಕದ ವತಿ ಯಿಂದ ಅಭಿನಂದಿಸಲಾಯಿತು.

ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಕಚೇರಿ ಆವರಣ ದಲ್ಲಿ ಇಂಜಿನಿಯರಿಂಗ್‍ನ ಪ್ರತಿಭಾವಂತ 14 ವಿದ್ಯಾರ್ಥಿಗಳನ್ನು ಎಂಬಿಸಿಟಿ ಮ್ಯಾನೇಜಿಂಗ್ ಟ್ರಸ್ಟಿ ಟಿ.ಎನ್.ಹೇಮಂತ್ ಗೌರವಿಸಿದರು.

ನಂತರ ಮಾತನಾಡಿದ ಅವರು, ವಿದ್ಯಾರ್ಥಿ ಗಳು ತಮ್ಮ ವ್ಯಾಸಂಗದ ಅವಧಿಯ ಅಮೂಲ್ಯ ಸಮಯವನ್ನು ತಮ್ಮ ಸಾಧನೆಗೆ ಮೀಸ ಲಿಟ್ಟು, ದೇಶದ ಪ್ರಗತಿಗೆ ಕೈ ಜೋಡಿಸಬೇಕು. ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬಿಎಐ ವತಿಯಿಂದ ಗುರುತಿಸಿ ಅಭಿನಂದಿಸುತ್ತಿರು ವುದು ಉತ್ತಮ ಬೆಳವಣಿಗೆ ಎಂದರು.

ಎಸ್‍ಜೆಸಿಇ ಕಾಲೇಜಿನ ಯಾಸೀನ್ ಉಲ್ಲಾ ಖಾನ್(ಸಿವಿಲ್), ಅಮೋಘ್ ಅಜಯ್ ಡಾಯಜ್ಡ್ (ಸಿಟಿಎಂ), ಮನು ವಸಿಷ್ಠ, ಎನ್‍ಐಇ ಕಾಲೇಜಿನ ಎನ್.ಚರಣ, ಕೆ.ನಿವೇ ದಿತಾ, ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಎಸ್.ಸುಶ್ಮಿತಾ, ಹೆಚ್.ಆರ್. ಚಿರಾಗ್, ವಿದ್ಯಾವಿಕಾಸ ಇಂಜಿನಿಯರಿಂಗ್ ಕಾಲೇಜಿನ ಎ.ವಿಕ್ಷಿತ್, ಬಿ.ಆರ್.ಮಹದೇವ, ಎಂಐಟಿ ಕಾಲೇಜಿನ ಛಾಯಾ ಆರ್.ರಾಂ ಪುರೆ, ಎನ್.ಎಂ.ಚಂದನ, ಎಟಿಎಂಇ ಕಾಲೇಜಿನ ಹೆಚ್.ಟಿ.ನಾಗರತ್ನ, ಎನ್. ಮೇಘ, ಮೈಸೆಮ್ ಇಂಜಿನಿಯರಿಂಗ್ ಕಾಲೇಜಿನ ಜೆ.ಕೆ.ಪವಿತ್ರ ಪಿ.ವೀಣಾ ಅವ ರನ್ನು ಸನ್ಮಾನಿಸಲಾಯಿತು.
ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇ ಜಿನ ಪ್ರಾಧ್ಯಾಪಕ ಎಸ್.ಕೆ.ಪ್ರಸಾದ್, ಬಿಎಐ ಮೈಸೂರು ಘಟಕದ ಕಾರ್ಯದರ್ಶಿ ಎ.ಎಸ್.ಯೋಗಾನರಸಿಂಹ, ಸಂಚಾಲಕ ಬಿ.ರಾಜೇಶ್, ಎ.ದಿನೇಶ್, ಪಿ.ಮಹೇಂದ್ರ ರೆಡ್ಡಿ, ಆರ್.ರವಿ, ಎಸ್.ಮಹದೇವಸ್ವಾಮಿ ಉಪಸ್ಥಿತರಿದ್ದರು. ಎಂಐಟಿ ಇಂಜಿನಿ ಯರಿಂಗ್ ಕಾಲೇಜಿನ ವಿದ್ಯಾರ್ಥಿ ಎಂ.ಆರ್. ರಚನಾ ಪ್ರಾರ್ಥಿಸಿದರು. ಬಿಎಐ ಮೈಸೂರು ಘಟಕದ ಅಧ್ಯಕ್ಷ ಕೆ.ಅಜಿತ್ ನಾರಾಯಣ್, ಅವರು, 2021-22 ಸಾಲಿನ ಬಿಎಐ ಮೈಸೂರು ಘಟಕದ ಕಾರ್ಯ ಚಟು ವಟಿಕೆಗಳ ವರದಿ ಮಂಡಿಸಿದರು.

Translate »