ಮೈಸೂರಲ್ಲಿ 43 ಮಂದಿ  ಕೊರೊನಾದಿಂದ ಗುಣಮುಖ
ಮೈಸೂರು

ಮೈಸೂರಲ್ಲಿ 43 ಮಂದಿ ಕೊರೊನಾದಿಂದ ಗುಣಮುಖ

October 27, 2021

ಮೈಸೂರು, ಅ.26(ಎಸ್‍ಪಿಎನ್)- ರಾಜ್ಯದಲ್ಲಿ ಮಂಗಳವಾರ 277 ಕೊರೊನಾ ಸೋಂಕು ಪತ್ತೆಯಾಗಿದ್ದು, 343 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಲ್ಲದೆ, ಇಂದು 7 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿ 19 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ 1,78,278 ಕ್ಕೇರಿದೆ. ಇಂದು ಸೋಂಕಿನಿಂದ 43 ಮಂದಿ ಗುಣಮುಖ ರಾಗಿದ್ದು, ಇಲ್ಲಿಯವರೆಗೆ 1,76,278 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 283 ಸಕ್ರಿಯ ಪ್ರಕ ರಣಗಳಿವೆ. ಇಲ್ಲಿಯವರೆಗೆ ಒಟ್ಟು 2409 ಮಂದಿ ಸಾವನ್ನಪ್ಪಿದ್ದು, ಇಂದು ಸೋಂಕಿನಿಂದ ಯಾರೂ ಸಾವನ್ನಪ್ಪಿಲ್ಲ.

ಮೈಸೂರು ನಗರ 15, ಕೆ.ಆರ್.ನಗರ 1, ಪಿರಿಯಾಪಟ್ಟಣ 3 ಸೇರಿದಂತೆ 19 ಪ್ರಕರಣಗಳು ಪತ್ತೆಯಾಗಿದ್ದು, ಹೆಚ್.ಡಿ.ಕೋಟೆ, ಹುಣಸೂರು, ಮೈಸೂರು ತಾಲೂಕು, ನಂಜನಗೂಡು, ತಿ.ನರಸೀಪುರದಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 29,86,553ಕ್ಕೇರಿದ್ದು, 29,39,990 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಲ್ಲದೆ, ಇಲ್ಲಿಯವರೆಗೆ 38,024 ಮಂದಿ ಸಾವನ್ನಪ್ಪಿದ್ದಾರೆ. ಪ್ರಸ್ತುತ ರಾಜ್ಯದಲ್ಲಿದೆ. 8,510 ಸಕ್ರಿಯ ಪ್ರಕರಣಗಳಿವೆ.

13 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ: ಮೈಸೂರು 19, ಹಾಸನ 18, ಕೊಡಗು 4, ಮಂಡ್ಯ 4, ಬಳ್ಳಾರಿ 3, ಬೆಳಗಾವಿ 1,ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 169, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 4, ಚಿತ್ರದುರ್ಗ 2, ದಕ್ಷಿಣಕನ್ನಡ 23, ಹಾಸನ 18, ಕೊಡಗು 4, ರಾಮನಗರ 2, ಶಿವಮೊಗ್ಗ 2, ತುಮಕೂರು 6, ಉಡುಪಿ 9, ಉತ್ತರಕನ್ನಡ 6 ಸೇರಿದಂತೆ ಒಟ್ಟು 277 ಪ್ರಕರಣಗಳು ಪತ್ತೆ ಯಾಗಿವೆ. ಅಲ್ಲದೆ ವಿಜಯಪುರ, ಯಾದಗಿರಿ, ಬಾಗಲಕೋಟೆ, ಚಾಮರಾಜನಗರ, ದಾವಣಗೆರೆ, ಕೋಲಾರ, ಹಾವೇರಿ, ಕಲಬುರಗಿ, ಬೀದರ್, ಧಾರವಾಡ, ಗದಗ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿವೆ.

Translate »