ರಾಜರಾಜೇಶ್ವರಿನಗರದಲ್ಲಿ ನಿಂತಿದ್ದ ಕಾರುಗಳ ಚಕ್ರÀ ಕಳವು
ಮೈಸೂರು

ರಾಜರಾಜೇಶ್ವರಿನಗರದಲ್ಲಿ ನಿಂತಿದ್ದ ಕಾರುಗಳ ಚಕ್ರÀ ಕಳವು

October 27, 2021

ಮೈಸೂರು, ಅ. 26(ಆರ್‍ಕೆ)- ರಸ್ತೆಬದಿ ಪಾರ್ಕ್ ಮಾಡಿದ್ದ ಎರಡು ಕಾರುಗಳ ಚಕ್ರಗಳನ್ನೇ ಕಳಚಿ, ಹೊತ್ತೊಯ್ದಿರುವ ಘಟನೆ ಮೈಸೂರಿನ ದಟ್ಟಗಳ್ಳಿ ಸಮೀಪ ರಾಜರಾಜೇಶ್ವರಿನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮನೆ ಬಳಿ ಸ್ಥಳಾಭಾವವಿದ್ದ ಕಾರಣ ಸಮೀಪದ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳಿಗೆ ಸೈಜ್‍ಗಲ್ಲುಗಳ ಆಧಾರವಾಗಿಟ್ಟು ಎಲ್ಲಾ 8 ಚಕ್ರಗಳನ್ನೂ ಡಿಸ್ಕ್ ಸಮೇತ ಕಳಚಿಕೊಂಡು ಹೋಗಿರುವುದು ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಅಂದು ರಾತ್ರಿಯಿಡೀ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದಾಗಲೇ ಖದೀಮರು ಚಕ್ರಗಳನ್ನು ಅಪಹರಿಸಿ ದ್ದಾರೆ ಎಂದು ಕಾರು ಮಾಲೀಕರು ಸರಸ್ವತಿಪುರಂ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ತನಿಖೆ ನಡೆಸುತ್ತಿದ್ದಾರೆ. ಮಳೆ ಸಂದರ್ಭವನ್ನೇ ಬಳಸಿಕೊಂಡು ಭಾನುವಾರ ರಾತ್ರಿ ಎರಡೂ ಕಾರುಗಳ 8 ಚಕ್ರಗಳನ್ನೂ ಕಳವು ಮಾಡಲಾಗಿದ್ದು, ಸುತ್ತಲಿನ ಸಿಸಿ ಕ್ಯಾಮರಾಗಳ ಫುಟೇಜ್ ಪಡೆದು ಆರೋಪಿಗಳ ಪತ್ತೆಗೆ ಶೋಧ ನಡೆಸ ಲಾಗುತ್ತಿದೆ ಎಂದು ಇನ್ಸ್‍ಪೆಕ್ಟರ್ ತಿಮ್ಮರಾಜು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »