ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಅಂಬೇಡ್ಕರ್ ಕುರಿತ ಲೇಖನಗಳಿಗೆ ಆಹ್ವಾನ
ಮೈಸೂರು

ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಅಂಬೇಡ್ಕರ್ ಕುರಿತ ಲೇಖನಗಳಿಗೆ ಆಹ್ವಾನ

October 27, 2021

ಮೈಸೂರು, ಅ.26- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ನ.26ರಂದು ಆಚರಿಸ ಲಾಗುವ ಸಂವಿಧಾನ ದಿನಾಚರಣೆಯ ಪ್ರಯುಕ್ತ “ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಾಮಾಜಿಕ ನ್ಯಾಯ’ ಶೀರ್ಷಿಕೆಯಡಿ ವಿವಿಧ ವಿಷಯಗಳ ಲೇಖನಗಳನ್ನು ಒಳಗೊಂಡ ಪುಸ್ತಕವನ್ನು ಮುದ್ರಿಸಿ ಹೊರತರಲು ಯೋಜಿಸಿದೆ. ಮೇಲ್ಕಂಡ ಶೀರ್ಷಿಕೆಯ ಪುಸ್ತಕಕ್ಕೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ನ್ಯಾಯಾಂಗ ಇಲಾಖೆ, ಬೋಧಕ, ಬೋಧಕೇತರ ವರ್ಗ, ಮಾಧ್ಯಮ ವರ್ಗ, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ದಮನಿತ ವರ್ಗಗಳ ಸಂವಿಧಾನಾತ್ಮಕ ರಕ್ಷಣೆಗಳು (ಎಸ್‍ಸಿ, ಎಸ್‍ಟಿ ಓಬಿಸಿ, ಧಾರ್ಮಿಕ ಅಲ್ಪಸಂಖ್ಯಾತರು ಮಹಿಳೆಯರು ಮತ್ತು ರೈತರು, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯ, ಶೈಕ್ಷಣಿಕ ಸಬಲೀಕರಣ, ಸಂವಿಧಾನದ ಕಾರ್ಯಾಚರಣೆ ಪ್ರಜಾಪ್ರಭುತ್ವ, ಶೈಕ್ಷಣಿಕ ಸಬಲೀಕರಣ ಸಂವಿಧಾನದ ಕಾರ್ಯಾ ಚರಣೆ, ಪ್ರಜಾಪ್ರಭುತ್ವ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೂತನ ಯೋಜನೆಗಳು ಮತ್ತು ಕಾಯ್ದೆಗಳ ಕುರಿತ ಲೇಖನಗಳನ್ನು ನ.10ರೊಳಗೆ ಇಮೇಲ್ ವಿಳಾಸಕ್ಕೆ ಜಡಿbಡಿಚಿm beಜಞಚಿಡಿ booಞಞ[email protected]ಚಿiಟ.ಛಿom ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ತಿತಿತಿ.ಞsoumಥಿsuಡಿu.ಚಿಛಿ.iಟಿ ವೀಕ್ಷಿಸಬೇಕು. ಅಥವಾ ಶಿವಕುಮಾರಸ್ವಾಮಿ, ಸಂಯೋಜನಾಧಿಕಾರಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಮುಕ್ತ ವಿವಿ, ಮೈಸೂರು ಅಥವಾ ಮೊ.9972165817 ಸಂಪರ್ಕಿಸಲು ಕೋರಲಾಗಿದೆ.

Translate »