ಮೈಸೂರು, ಅ.26(ಪಿಎಂ)- ಗಾಯಕ ಮೈಸೂರು ಅನಂತಸ್ವಾಮಿ ಸಂಗೀತ ಸಂಯೋಜನೆಯ ನಾಡಗೀತೆ ಯನ್ನು ಅಧಿಕೃತಗೊಳಿಸಿ, ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿ ಮೈಸೂರು ಆರ್ಟಿಸ್ಟ್ಸ್ ಅಸೋಸಿಯೇಷನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಲವಾರು ಗಾಯಕರು ಅದೇ ಸಂಗೀತ ಸಂಯೋಜನೆಯಲ್ಲಿ ಸಾಮೂಹಿಕವಾಗಿ ನಾಡಗೀತೆ ಸಾದರಪಡಿಸಿದರು.
ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಮಂಗಳವಾರ ಸಮಾವೇಶ ಗೊಂಡ ಗಾಯಕರು, ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯನ್ನು ಮೈಸೂರು ಅನಂತಸ್ವಾಮಿ ಸಂಗೀತ ಸಂಯೋಜನೆಯಲ್ಲಿ ಹಾಡುವ ಮೂಲಕ ಅದನ್ನು ಅಧಿಕೃತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಮೈಸೂರು ಅನಂತಸ್ವಾಮಿ ಸಂಗೀತ ಸಂಯೋಜನೆಯ 2 ನಿಮಿಷ 20 ಸೆಕೆಂಡ್‍ಗಳ ನಾಡಗೀತೆ ಸಾದಪಡಿಸಿದರು. ನಾಡಗೀತೆಗೆ 60 ವರ್ಷಗಳ ಹಿಂದೆಯೇ ಮೈಸೂರು ಅನಂತಸ್ವಾಮಿಯವರು ಸಂಗೀತ ಸಂಯೋಜನೆ ಮಾಡಿ ದ್ದಾರೆ. ಈಗಾಗಲೇ ಸರ್ಕಾರದ ಕಾರ್ಯಕ್ರಮಗಳು ಸೇರಿ ದಂತೆ ಕಾರ್ಯಕ್ರಮಗಳಲ್ಲಿ ಈ ಸಂಗೀತ ಸಂಯೋಜನೆಯ ಗೀತೆಯನ್ನೇ ಹಾಡಲಾಗುತ್ತಿದೆ. ನಾಡಗೀತೆಯ ಸಾಹಿತ್ಯಕ್ಕೆ ಪೂರಕವಾಗಿ ಭಾವಪೂರ್ಣ ಮತ್ತು ಅರ್ಥಪೂರ್ಣ ವಾಗಿ ಸಂಗೀತ ಸಂಯೋಜನೆಯನ್ನು ಅನಂತಸ್ವಾಮಿ ಮಾಡಿ ದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಇದನ್ನೇ ಅಧಿಕೃತಗೊಳಿಸಿ, ಅನುಷ್ಠಾನಕ್ಕೆ ತರಬೇಕೆಂದು ಕಲಾವಿದರು ಕೋರಿದರು. ಅಲ್ಲದೆ ಜಿಲ್ಲಾಧಿಕಾರಿ ಕಚೇರಿಗೂ ಮನವಿ ಸಲ್ಲಿಸಲಾಯಿತು. ಅಸೋಸಿಯೇಷನ್ ಅಧ್ಯಕ್ಷ ರಘುನಾಥ್, ಕಾರ್ಯದರ್ಶಿ ಗುರುದತ್ತ, ಕಲಾವಿದರಾದ ನಿತಿನ್ ಜಯರಾಮ್ ಶಾಸ್ತ್ರಿ, ವಿಶ್ವನಾಥ್, ಜನಾರ್ದನ್, ಭೀಮಾಶಂಕರ್, ರೇಖಾ ವೆಂಕ ಟೇಶ್, ರಶ್ಮಿ, ಶುಭ ರಾಘವೇಂದ್ರ, ಸುಮಂತ್ ವಶಿಷ್ಠ, ಅನಂತರಾಮು, ನಿಂಗರಾಜು ಮತ್ತಿತರರು ಪಾಲ್ಗೊಂಡಿದ್ದರು.