ಕಾನೂನು ಎಂಬ ಧರ್ಮ ಪಾಲನೆಯಲ್ಲಿ ಸಮಾಜ ಮುನ್ನಡೆಯಬೇಕು
ಮೈಸೂರು

ಕಾನೂನು ಎಂಬ ಧರ್ಮ ಪಾಲನೆಯಲ್ಲಿ ಸಮಾಜ ಮುನ್ನಡೆಯಬೇಕು

October 27, 2021

ಮೈಸೂರು,ಅ.26(ಪಿಎಂ)- ಕಾನೂನು ಎಂಬ ಧರ್ಮ ಪಾಲನೆ ಮೂಲಕ ಸಮಾಜ ಮುನ್ನಡೆದರೆ ಯಾವುದೇ ರೀತಿಯ ದೌರ್ಜನ್ಯಕ್ಕೆ ಎಡೆಯಿಲ್ಲ ಎಂದು ಮೈಸೂರಿನ ಜೆಎಂಎಫ್‍ಸಿ ನ್ಯಾಯಾ ಲಯದ 6ನೇ ಹೆಚ್ಚುವರಿ ಸಿವಿಲ್ ನ್ಯಾಯಾ ಧೀಶರಾದ ಲಕ್ಷ್ಮೀಬಾಯಿ ಅಭಿಪ್ರಾಯಪಟ್ಟರು.
ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಪಿಎಂ ಚಿಕ್ಕಬೋರಯ್ಯ ಸಭಾಂಗಣ ದಲ್ಲಿ `ಆಜಾದಿ ಕಾ ಅಮೃತ್ ಮಹೋತ್ಸವ್’ ಅಂಗ ವಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿ ಕಾರದ ಪ್ಯಾನ್ ಇಂಡಿಯಾ ಕಾನೂನು ಅರಿವು ಅಭಿ ಯಾನದಡಿ ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾಲೇಜಿನ ಸಂಯು ಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಮಹಿಳೆ ಯರ ಮೇಲಿನ ದೌರ್ಜನ್ಯ’ ಕುರಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನಾದಿ ಕಾಲದಿಂದಲೂ ಭಾರತದ ಪರಂ ಪರೆಯಲ್ಲಿ ಸ್ತ್ರೀಗೆ ಪೂಜನೀಯ ಸ್ಥಾನ ನೀಡಿ ಗೌರ ವಿಸಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆ ಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಶಿಕ್ಷಕರು ತಮ್ಮ ಕರ್ತವ್ಯ ಮರೆತರೆ ಇಡೀ ಸಮಾಜಕ್ಕೇ ಹಾನಿ ಎಂದು ತಿಳಿಸಿದರು.

ಪ್ರತಿಯೊಬ್ಬ ಮಹಿಳೆಯೂ ನಮ್ಮ ಮನೆ ಮಗಳು ಎಂಬ ಭಾವನೆ ಸಮಾಜದಲ್ಲಿ ಮೂಡಬೇಕು. ಎಷ್ಟೇ ಕಾಯ್ದೆಗಳು ಜಾರಿಯಾದರೂ ಮಹಿಳೆ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವ ಕಲೆ ಕರಗತ ಮಾಡಿಕೊಳ್ಳುವುದೂ ಅಗತ್ಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ವಕೀಲ ಎನ್.ಎಸ್.ಬಸಪ್ಪ ಮಾತನಾಡಿ, ಕಾನೂನು ಎಂದರೆ ಸಾಮಾನ್ಯ ಜ್ಞಾನ ಇದ್ದಂತೆ. ಇದರ ಪಾಲನೆಯಿಂದ ಸಮಾಜ ಸರಿ ದಾರಿಯಲ್ಲಿ ಮುನ್ನ ಡೆಯಲು ಸಾಧ್ಯವಾಗುತ್ತದೆ. ಹೆಣ್ಣು-ಗಂಡು ಎಂಬ ಭೇದಭಾವ ಮೊದಲು ನಮ್ಮ ಮನೆಗಳಿಂದಲೇ ಹೋಗಬೇಕು. ಈ ಭಾವನೆ ಮೂಡದ ಹೊರತು ಕಾನೂನು ತಂದರೂ ಪೂರ್ಣ ಪ್ರಮಾಣದ ಯಶಸ್ಸು ಕಾಣಲಾಗದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಎಂ. ಮಂಜುಳಾ ಮಾತನಾಡಿ, ಮಹಿಳಾ ದೌರ್ಜನ್ಯ ತಡೆಗೆ ಮೊದಲು ಮಹಿಳಾ ಸಮು ದಾಯದಲ್ಲಿ ಕಾನೂನು ಅರಿವು ಮೂಡಬೇಕು. ಹುಟ್ಟಿದ ಮಗು ಹೆಣ್ಣು ಅಥವಾ ಗಂಡು ಯಾವುದೇ ಆಗಲಿ, ತಾರತಮ್ಯದ ಭಾವನೆ ದೂರ ವಾಗಬೇಕು ಎಂದು ಹೇಳಿದರು. ಕಾರ್ಯಕ್ರಮ ದಲ್ಲಿ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ.ಎಸ್. ಮರೀಗೌಡ, ಎನ್‍ಎಸ್‍ಎಸ್‍ನ ಕಾರ್ಯಕ್ರಮ ಅಧಿಕಾರಿ ಟಿ.ಸತೀಶ್, ರಾಜ್ಯಶಾಸ್ತ್ರ ವಿಭಾಗದ ಎನ್. ಮೋಹನ್‍ಕುಮಾರ್ ಮತ್ತಿತರರು ಹಾಜರಿದ್ದರು.

Translate »