ದಕ್ಷಿಣ ಪದವೀಧರ ಕ್ಷೇತ್ರದಲ್ಲಿಶೇ.7೦ರಷ್ಟು ಮತದಾನ
ಮೈಸೂರು

ದಕ್ಷಿಣ ಪದವೀಧರ ಕ್ಷೇತ್ರದಲ್ಲಿಶೇ.7೦ರಷ್ಟು ಮತದಾನ

June 14, 2022

ಮೈಸೂರಿನ ಮತಗಟ್ಟೆಯೊಂದರಲ್ಲಿ ಸೋಮವಾರ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿರುವ ಪದವೀಧರ ಮತದಾರರು.

ಮೈಸೂರು, ಜೂ.೧೩ (ಆರ್‌ಕೆ)-ಮೈಸೂರು, ಮಂಡ್ಯ, ಹಾಸನ, ಚಾಮರಾಜ ನಗರ ಜಿಲ್ಲೆಗಳ ಒಳಗೊಂಡ ದಕ್ಷಿಣ ಪದ ವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಇಂದು ನಡೆದ ಚುನಾವಣೆಯಲ್ಲಿ ಶೇ.೭೦ ಮತದಾನ ಶಾಂತಿಯುತವಾಗಿ ನಡೆಯಿತು.

ಬೆಳಗ್ಗೆ ೮ ಗಂಟೆಯಿAದ ಸಂಜೆ ೫ ಗಂಟೆವರೆಗೆ ಎಲ್ಲಾ ೧೫೦ ಮತಗಟ್ಟೆಗಳಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ನಾಲ್ಕೂ ಜಿಲ್ಲೆಗಳ ೯೯,೪೬೭ ಮಂದಿ ಪದವೀಧರರು (ಶೇ.೭೦) ತಮ್ಮ ಹಕ್ಕು ಚಲಾಯಿಸಿದರು. ೮೨,೩೮೬ ಪುರುಷರು, ೫೯,೪೫೦ ಮಹಿಳೆ ಯರು ಹಾಗೂ ೨೪ ಇತರರು ಸೇರಿ ಒಟ್ಟು ೧,೪೧,೮೮೭ ಪದವೀಧರರು ನೋಂದಾ ಯಿತ ಮತದಾರರಿದ್ದರು. ಬಿಜೆಪಿಯ ಎಂ.ವಿ.ರವಿಶAಕರ್, ಕಾಂಗ್ರೆಸ್‌ನ ಮಧು ಜಿ.ಮಾದೇಗೌಡ, ಜೆಡಿಎಸ್‌ನ ಹೆಚ್.ಕೆ. ರಾಮು, ಎಸ್‌ಡಿಪಿಐನ ರಫತುಲ್ಲಾ ಖಾನ್, ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಆರ್‌ಪಿಐನ ಎನ್.ವೀರಭದ್ರ ಸ್ವಾಮಿ, ಬಿಎಸ್‌ಪಿಯ ಡಾ.ಬಿ.ಹೆಚ್.ಚನ್ನ ಕೇಶವಮೂರ್ತಿ, ರೈತ ಸಂಘದ ಪ್ರಸನ್ನ ಎನ್. ಗೌಡ ಸೇರಿದಂತೆ ಚುನಾವಣಾ ಕಣದಲ್ಲಿರುವ ೧೯ ಅಭ್ಯರ್ಥಿಗಳೂ ಮತಗಟ್ಟೆಗಳಿಗೆ ತೆರಳಿ ಕಸರತ್ತು ನಡೆಸುತ್ತಿದ್ದುದು ಕಂಡುಬAತು.

ಕುವೆAಪುನಗರದ ಭಾನವಿ ಆಸ್ಪತ್ರೆ ಬಳಿಯ ಸರ್ಕಾರಿ ಹೈಯರ್ ಪ್ರೆöÊಮರಿ ಶಾಲಾ ಮತ ಕೇಂದ್ರದಲ್ಲಿ ಬಿಜೆಪಿಯ ಎಂ.ವಿ.ರವಿಶAಕರ್ ಮತ್ತು ಜೆಡಿಎಸ್ ಅಭ್ಯರ್ಥಿ ಹೆಚ್.ಕೆ. ರಾಮು ಮತ ಚಲಾಯಿಸಿದರು. ಸಂಸದ ಪ್ರತಾಪ್ ಸಿಂಹ ರಾಮಕೃಷ್ಣನಗರದ ರಾಮ ಕೃಷ್ಣ ವಿದ್ಯಾ ಕೇಂದ್ರದಲ್ಲಿ, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಅಗ್ರ ಹಾರದ ಶ್ರೀಕಾಂತ ಬಾಲಿಕ ಪ್ರೌಢಶಾಲೆ ಯಲ್ಲಿ, ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಶಾಸಕ ಎಸ್.ಎ.ರಾಮದಾಸ್ ಚಾಮುಂಡಿ ಪುರಂನ ಬಾಲಬೋಧಿನಿ ಶಾಲೆಯಲ್ಲಿ ಮತ ಚಲಾಯಿಸಿದರು. ಮತದಾನ ಪ್ರಾರಂಭ ವಾದ ಮೊದಲ ೨ ತಾಸಿನಲ್ಲಿ ಬೆಳಗ್ಗೆ ೧೦ ಗಂಟೆವರೆಗೆ ಮೈಸೂರು ಜಿಲ್ಲೆಯಲ್ಲಿ ೫,೨೫೫ ಮಂದಿ (ಶೇ.೯.೦೩), ಅಪರಾಹ್ನ ೧೨ ಗಂಟೆ ವೇಳೆಗೆ ೧೨,೦೩೨ (ಶೇ.೨೦.೬೮), ಮಧ್ಯಾಹ್ನ ೨ರವರೆಗೆ ೨೪,೪೭೦ (ಶೇ.೪೨.೦೫) ಹಾಗೂ ಸಂಜೆ ೪.೧೫
ಗಂಟೆ ವೇಳೆಗೆ ಒಟ್ಟು ೩೪,೨೯೧ ಮಂದಿ (ಶೇ.೫೮.೯೩) ಪದವೀಧರರು ತಮ್ಮ ಹಕ್ಕು ಚಲಾಯಿಸಿದರು. ಅಂತಿಮವಾಗಿ ಮತದಾನ ಮುಗಿದಾಗ ಜಿಲ್ಲೆಯಲ್ಲಿರುವ ೫೮,೧೮೬ ಮಂದಿ ಪೈಕಿ ೨೪,೪೨೬ ಪುರುಷರು, ೧೫,೦೯೬ ಮಹಿಳೆಯರು ಸೇರಿ ಒಟ್ಟು ೩೯,೫೨೨ ಮಂದಿ ಮತ ಚಲಾಯಿಸಿದ್ದು, ಶೇ.೬೭.೯೨ರಷ್ಟು ಮತದಾನವಾಗಿದೆ.

ಈ ವೇಳೆ ಅತೀ ಹೆಚ್ಚು ಮತದಾರರಿರುವ ನಗರ ವ್ಯಾಪ್ತಿಯಲ್ಲಿ ೮,೨೮೩ ಪುರುಷರು ಮತ್ತು ೬,೭೧೮ ಮಹಿಳೆಯರು ಸೇರಿ ಒಟ್ಟು ೧೫,೦೦೧ ಮಂದಿ (ಶೇ. ೬೩.೩೭) ಪದವೀಧರರು ಹಕ್ಕು ಚಲಾಯಿಸಿದ್ದುದು ಕಂಡುಬAದಿತು. ಆರಂಭದಲ್ಲಿ ಬೆಳಗ್ಗೆ ೯ ಗಂಟೆವರೆಗೆ ನೀರಸ ಪ್ರತಿಕ್ರಿಯೆ ಕಂಡುಬAದಿತ್ತಾದರೂ, ನಂತರ ಉತ್ಸಾಹದಿಂದ ಬಂದ ಮತದಾರರು ಸಾಲುಗಟ್ಟಿ ನಿಂತು ಬಿರುಸಿನ ಮತದಾನ ಮಾಡಿದರು.

ಮಧ್ಯಾಹ್ನದ ವೇಳೆಗೆ ಬಿಸಿಲು ಜಾಸ್ತಿಯಾದ ಕಾರಣ ಮಧ್ಯಾಹ್ನ ೧ರಿಂದ ೨.೩೦ ರವರೆಗೆ ನಿಧಾನಗತಿ ಮತದಾನವಾಯಿತಾದರೂ, ನಂತರ ಮತ್ತೆ ಚುರುಕುಗೊಂಡು ಸಂಜೆ ೫ ಗಂಟೆವರೆಗೂ ಬಿರುಸಿನ ಮತದಾನ ನಡೆಯಿತು. ಕಡೇ ಗಳಿಗೆಯಲ್ಲಿ ಸಂಜೆ ೫ ಗಂಟೆಯೊಳಗೆ ಮತಗಟ್ಟೆ ಪ್ರವೇಶಿಸಿದ ಪದವೀಧರರೆಲ್ಲರಿಗೂ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಯಿತು. ಪಕ್ಷದ ಕಾರ್ಯಕರ್ತರು, ಶಾಸಕರು, ಕಾರ್ಪೊರೇಟರ್‌ಗಳು, ಅಭ್ಯರ್ಥಿಗಳ ಬೆಂಬಲಿತರು ಮತಗಟ್ಟೆಗಳಿಗೆ ತೆರಳಿ ಮತ ಕೇಳುತ್ತಿದ್ದ ದೃಶ್ಯ ಸಾಮಾನ್ಯ ವಾಗಿತ್ತು. ಮತದಾರರ ಸಂಖ್ಯೆ ಕಡಿಮೆ ಇದ್ದರೂ ದಕ್ಷಿಣ ಪದವೀಧರ ಕ್ಷೇತ್ರದ ಚುನವಣೆಯ ಮತಗಟ್ಟೆಗಳಲ್ಲಿ ಹೆಚ್ಚು ಮಂದಿ ಗುಂಪು ಗುಂಪಾಗಿ ಜಮಾಯಿಸಿದ್ದರಿಂ ದಾಗಿ ಯಾವುದೇ ವಿಧಾನಸಭೆ ಅಥವಾ ಪಾಲಿಕೆ ಚುನಾವಣೆಗೂ ಕಡಿಮೆ ಇಲ್ಲದಂತೆ ಮತದಾನ ತೀವ್ರತೆ ಇಂದು ಕಂಡುಬAದಿತು. ಈ ಬಾರಿ ೧೯ ಮಂದಿ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಒಂದು ಬ್ಯಾಲೆಟ್ ಪೇಪರ್‌ನಲ್ಲಿ ೧೯ ಮಂದಿಗೂ ಪ್ರಾಶಸ್ತö್ಯದ ಮತ ನೀಡಬೇಕಾದ ಕಾರಣ ಮತದಾನ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಅದೇ ಕಾರಣಕ್ಕಾಗಿ ಪ್ರತೀ ಮತಗಟ್ಟೆಯಲ್ಲೂ ಪದವೀಧರರು ಸಾಲುಗಟ್ಟಿ ನಿಂತಿದ್ದುದು ಕಂಡುಬAದಿತು.

ಸAಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸೇರಿದಂತೆ ಪಕ್ಷದ ಪ್ರಮು ಖರು ಮತಗಟ್ಟೆಗಳಿಗೆ ತೆರಳಿ ತಮ್ಮ ಅಭ್ಯರ್ಥಿ ಪರ ಮತ ಕೇಳುತ್ತಿದ್ದರು. ಅದೇ ರೀತಿ ಜೆಡಿಎಸ್ ಅಭ್ಯರ್ಥಿ ಪರ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಎಂಎಲ್‌ಸಿ ಸಿ.ಎನ್.ಮಂಜೇ ಗೌಡ, ಮಾಜಿ ಮೇಯರ್ ಆರ್.ಲಿಂಗಪ್ಪ, ಕಾರ್ಪೊರೇಟರ್‌ಗಳಾದ ಕೆ.ವಿ.ಶ್ರೀಧರ್, ಪ್ರೇಮಾ ಶಂಕರೇಗೌಡ, ಲಕ್ಷಿö್ಮÃ ಶಿವಣ್ಣ ಸೇರಿದಂತೆ ಹಲವು ಕಾರ್ಪೊ ರೇಟರ್ ಗಳು ಕುಂಬಾರಕೊಪ್ಪಲು ಸರ್ಕಾರಿ ಶಾಲೆ, ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್ ಕಾಲೇಜು ಮತಗಟ್ಟೆಗಳಲ್ಲಿ ಮತಯಾಚನೆ ಮಾಡಿದರು. ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಕಾರ್ಪೊರೇಟರ್‌ಗಳು, ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಿ ಅಂತಿಮ ಕಸರತ್ತು ನಡೆಸಿದ್ದು ಕಂಡುಬAದಿತು.

ನಾಳೆ ಮತ ಎಣ ಕೆ
ಮೈಸೂರು ನಗರದ ೪೩ ಸೇರಿದಂತೆ ಜಿಲ್ಲಾದ್ಯಂತ ೬೬ ಮತಗಟ್ಟೆಗಳು, ಮಂಡ್ಯ ಜಿಲ್ಲೆಯ ೪೫, ಹಾಸನದ ೨೭, ಚಾಮರಾಜನಗರದ ೧೨ ಮತ ಗಟ್ಟೆಗಳಲ್ಲಿ ಮತದಾನ ಶಾಂತಿಯುತ ವಾಗಿ ನಡೆಯಿತು. ಆ ಪೈಕಿ ಮೈಸೂರು, ಹಾಸನದಲ್ಲಿ ತಲಾ ೨, ಮಂಡ್ಯದಲ್ಲಿ ೧೩ ಮತಗಟ್ಟೆಗಳನ್ನು ಅತೀ ಸೂಕ್ಷö್ಮ ಎಂದು ಗುರ್ತಿಸಲಾಗಿದ್ದು, ಅಲ್ಲಿ ವೆಬ್ ಕ್ಯಾಮರಾ ಅಳವಡಿಸಿ ಮತದಾನ ಪ್ರಕ್ರಿಯೆಯನ್ನು ಆಯೋಗದ ವೆಬ್ ಸೈಟ್‌ನಲ್ಲಿ ನೇರ ಪ್ರಸಾರ ಮಾಡ ಲಾಯಿತು. ಎಲ್ಲಾ ಮತಗಟ್ಟೆಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಮೈಕ್ರೋ ಅಬ್ಸರ್‌ವರ್‌ಗಳು ಪ್ರತೀ ಮತಗಟ್ಟೆಯಲ್ಲಿ ಹಾಜರಿದ್ದು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾ ಗಿತ್ತು. ಮತದಾರರು, ಸಿಬ್ಬಂದಿ ಹೊರತುಪಡಿಸಿ ಬೇರೆಯವರು ಮತಗಟ್ಟೆ ಬಳಿ ಸುಳಿಯದಂತೆ ಎಚ್ಚರ ವಹಿಸಲಾಗಿತ್ತು. ಅಭ್ಯರ್ಥಿಗಳ ಪ್ರತಿನಿಧಿಗಳು ಮತಗಟ್ಟೆಯ ೨೦೦ ಮೀ. ದೂರದಲ್ಲಿ ಟೇಬಲ್, ಕುರ್ಚಿ, ಶಾಮಿಯಾನ ಹಾಕಿಕೊಂಡು ಮತದಾರರಿಗೆ ಬೂತ್ ಸಂಖ್ಯೆ, ಮತದಾರರ ಪಟ್ಟಿಯಲ್ಲಿ ಹೆಸರು, ಇನ್ನಿತರ ಮಾಹಿತಿ ನೀಡುತ್ತಿದ್ದರು.

ಪಟ್ಟಿಯಲ್ಲಿ ಹೆಸರಿಲ್ಲದೆ ಪದವೀಧರರ ನಿರಾಸೆ

ಮೈಸೂರು, ಜೂ. ೧೩(ಆರ್‌ಕೆ)- ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ತಮ್ಮ ಹಕ್ಕು ಚಲಾಯಿಸಲಾಗದೇ ಕೆಲವು ಮತಗಟ್ಟೆಗಳಲ್ಲಿ ಪದವೀಧರರು ನಿರಾಸೆ ಯಿಂದ ಹಿಂದಿರುಗಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನ ದನ್ವಯ ಕಳೆದ ೬ ತಿಂಗಳಿAದ ದಕ್ಷಿಣ ಪದವೀಧರ ಚುನಾವಣೆ ನೋಂದಾ ಯಿತ ಮತದಾರರ ಹೊಸ ಪಟ್ಟಿ ತಯಾರಿಸಲಾಗಿತ್ತು. ಕೆಲವು ಪದವೀ ಧರರು ಪಟ್ಟಿಯಲ್ಲಿನ ಹೆಸರನ್ನು ನವೀಕರಿಸದಿರುವುದು ಹಾಗೂ ಹೊಸ ದಾಗಿ ಸೇರಿಸದೇ ನಿರ್ಲಕ್ಷö್ಯ ತೋರಿರು ವುದು ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಲು ಕಾರಣ ಎಂದು ಅಧಿಕಾರಿಗಳು ಹೇಳಿ ದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗಾಗಿ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಲು ಬಂದಿದ್ದ ಕೆಲ ಪದವೀಧರರು ಪರಿಶೀಲಿಸಿದಾಗ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿರುವುದು ಕಂಡುಬAದ ಹಿನ್ನೆಲೆಯಲ್ಲಿ ನಿರಾಶರಾಗಿ ಹಿಂದಿರು ಗುತ್ತಿದ್ದುದು ಕಂಡುಬAತು. ಆಧಾರ್ ಕಾರ್ಡಿನಲ್ಲಿ ನಮೂದಾಗಿರುವ ವಿಳಾಸದ ವ್ಯಾಪ್ತಿಗೆ ಬರುವ ಮತಗಟ್ಟೆಗಳಲ್ಲಿ ಪದವೀಧರರಿಗೆ ಮತ ಹಾಕಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಹಿಂದಿನ ಚುನಾವಣೆಯಲ್ಲಿ ಮತ ಚಲಾಯಿಸಿದ್ದವರು ಆ ಮತಗಟ್ಟೆಯಲ್ಲೇ ಇರುತ್ತದೆ ಎಂದು ಭಾವಿಸಿ ಅಲ್ಲಿಗೆ ಹೋಗಿದ್ದರಾದರೂ, ಅವರ ಹೆಸರು ಬೇರೊಂದು ಬೂತ್‌ನಲ್ಲಿದೆ ಎಂಬುದನ್ನು ಖಚಿತಪಡಿಸಿಕೊಂಡು ಅಲ್ಲಿಗೆ ಹೋಗುತ್ತಿದ್ದುದು ಕಂಡು ಬಂದಿತು. ಹಿಂದೆ ಒಂದೇ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಒಂದೇ ಕುಟುಂಬದ ಇಬ್ಬರು ಪದವೀಧರರ ಹೆಸರು ಬೇರೆ ಬೇರೆ ಮತಗಟ್ಟೆಗಳಲ್ಲಿ ಸೇರಿದ್ದುದೂ ಕಂಡುಬAತು. ಕೆಲವೊಂದು ಗೊಂದಲಗಳ ನಡುವೆ ಸಂಜೆ ೫ ಗಂಟೆಗೆ ಮತದಾನ ಪೂರ್ಣಗೊಂಡಿತು.

 

 

Translate »