ಜೂ.20ರ ಸಂಜೆ ಮೋದಿ ಚಾಮುಂಡೇಶ್ವರಿ ದರ್ಶನ
ಮೈಸೂರು

ಜೂ.20ರ ಸಂಜೆ ಮೋದಿ ಚಾಮುಂಡೇಶ್ವರಿ ದರ್ಶನ

June 14, 2022

ನಂತರ ಜೆಎಸ್‌ಎಸ್ ಮಠಕ್ಕೆ ಭೇಟಿ
ಮಾರನೇ ದಿನ ಯೋಗದ ನಂತರ ಮೈಸೂರು ರಾಜಮನೆತನದವರ ಭೇಟಿ

ಬೆಂಗಳೂರು, ಜೂ. ೧೩(ಕೆಎಂಶಿ)- ಅಂತರರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ೨ ದಿನ ಗಳ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಭೇಟಿ ಸಂದರ್ಭದಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿ ದರ್ಶನ ಮತ್ತು ಪೂಜಾ ಕಾರ್ಯಕ್ರಮದಲ್ಲಿ
ಭಾಗವಹಿಸಲಿದ್ದಾರೆ. ಅಲ್ಲದೆ, ಮೈಸೂರು ಅರಮನೆಯ ರಾಜವಂಶಸ್ಥರ ಜೊತೆ ಸ್ವಲ್ಪ ಸಮಯ ಕಾಲ ಕಳೆಯಲಿದ್ದಾರೆ. ಜೂನ್ ೨೦ರಿಂದ ಎರಡು ದಿನ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿಯವರು ಜೂನ್ ೨೧ ರಂದು ಬೆಳಗ್ಗೆ ೬.೩೦ ರಿಂದ ೭.೪೫ ರವರೆಗೆ ಅರಮನೆ ಆವರಣದಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ, ೮.೩೦ ರಿಂದ ೯ ಗಂಟೆಯವರೆಗೂ ಅಂದರೆ ೩೦ ನಿಮಿಷಗಳ ಕಾಲ ಅರಮನೆಯಲ್ಲಿ ರಾಜ ಮನೆತನದ ಕುಟುಂಬ ಸದಸ್ಯರೊಟ್ಟಿಗೆ ಕಾಲ ಕಳೆಯಲಿದ್ದಾರೆ. ನಂತರ ಕೇರಳದ ತಿರುವನಂತಪುರಕ್ಕೆ ವಿಶೇಷ ವಿಮಾನದಲ್ಲಿ ತೆರಳಲಿದ್ದಾರೆ.

ಜೂನ ೨೦ರಂದು ನಗರಕ್ಕೆ ಧಾವಿಸುವ ಪ್ರಧಾನಿಯವರು ಅಂದು ಮಧ್ಯಾಹ್ನ ಬೆಂಗಳೂರು ಸಬರ್ಬನ್ ರೈಲ್ವೆ ಯೋಜನೆಗೆ ಶಿಲಾನ್ಯಾಸ ನೆರವೇರಿಸಿ, ನಂತರ ಸಾರ್ವಜನಿಕರನ್ನು ದ್ದೇಶಿಸಿ ಮಾತನಾಡಲಿದ್ದಾರೆ. ತದನಂತರ ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾ ಮಿಕ್ಸ್ನ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ ವಿಶೇಷ ಹೆಲಿ ಕಾಪ್ಟರ್‌ನಲ್ಲಿ ಮೈಸೂರಿಗೆ ತೆರಳಲಿದ್ದು, ಅಂದು ಸುತ್ತೂರು ಮಠಕ್ಕೂ ಭೇಟಿ ನೀಡುವ ಕಾರ್ಯಕ್ರಮವಿದೆ. ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ದರ್ಶನ ಪಡೆಯಲಿ ದ್ದಾರೆ. ಚಾಮುಂಡೇಶ್ವರಿ ದರ್ಶನದ ನಂತರ ಅಲ್ಲಿನ ಬ್ಲೂ ಪ್ಲಾಜಾ ಹೊಟೇಲ್‌ನಲ್ಲಿ ರಾತ್ರಿ ವಾಸ್ತವ್ಯ ಹೂಡಿ, ಬೆಳಗಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Translate »