ಯೋಗ ದಿನಾಚರಣೆಯ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ ಬಗ್ಗೆ ಇನ್ನು ನಿರ್ಧರಿಸಿಲ್ಲ
ಮೈಸೂರು

ಯೋಗ ದಿನಾಚರಣೆಯ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ ಬಗ್ಗೆ ಇನ್ನು ನಿರ್ಧರಿಸಿಲ್ಲ

June 15, 2022

ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ

ಯದುವೀರ್‌ಗೆ ಅವಕಾಶ ಕಲ್ಪಿಸದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಕಮೆಂಟ್

ಮೈಸೂರು, ಜೂ.೧೪(ಎಸ್‌ಬಿಡಿ)- ಮೈಸೂರು ಅರಮನೆ ಅಂಗಳದಲ್ಲಿ ನಡೆಯಲಿರುವ ೮ನೇ ಅಂತಾರಾಷ್ಟಿçÃಯ ಯೋಗ ದಿನಾಚರಣೆಯ ವೇದಿಕೆಯಲ್ಲಿ ಯಾವ ಜನಪ್ರತಿನಿಧಿಗಳಿಗೆ ಅವ ಕಾಶವಿದೆ ಎನ್ನುವುದಷ್ಟನ್ನು ಮಾತ್ರ ನಿರ್ಧ ರಿಸಲಾಗಿದ್ದು, ಇತರ ಗಣ್ಯರ ವಿಚಾರವಾಗಿ ಇನ್ನೆ ರಡು ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಜೂ.೨೧ರಂದು ಅರಮನೆ ಆವರಣದಲ್ಲಿ ನಡೆ ಯುವ ಯೋಗ ದಿನಾಚರಣೆಗೆ ರಾಜವಂಶಸ್ಥ ರನ್ನು ಆಹ್ವಾನಿಸಿಲ್ಲ ಎಂದು ಚರ್ಚೆಯಾಗುತ್ತಿ ರುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳ ವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಈ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲಿ ಪೋಸ್ಟರ್ ಹರಿದಾಡುತ್ತಿರುವುದನ್ನು ನಾನೂ ಗಮನಿಸಿದ್ದೇನೆ. ಈ ಹಿಂದಿನ ವರ್ಷ ಗಳಲ್ಲಿದ್ದಂತೆ ಸೀಮಿತ ಜನಪ್ರತಿನಿಧಿಗಳಿಗೆ ಮಾತ್ರ ವೇದಿಕೆಯಲ್ಲಿ ಅವಕಾಶವಿರುವ ಬಗ್ಗೆ ಕಳೆದ ಭಾನುವಾರ ಯೋಗ ತಾಲೀಮು ನಡೆಸಿದ ಸಂದರ್ಭದಲ್ಲೇ ಸ್ಪಷ್ಟಪಡಿಸಲಾಗಿದೆ. ಆದರೆ ಇತರ ಗಣ್ಯರ ವಿಚಾರವಾಗಿ ಇನ್ನೂ ನಿರ್ಧಾರವಾಗಿಲ್ಲ ಎಂದು ಹೇಳಿದರು.

ಮೈಸೂರು ಭಾಗದಲ್ಲಿ ೨ ಲೋಕಸಭಾ ಕ್ಷೇತ್ರ ಹಾಗೂ ೧೧ ವಿಧಾನಸಭಾ ಕ್ಷೇತ್ರಗಳಿವೆ. ಹಾಗಾಗಿ ಯೋಗ ದಿನಾಚರಣೆ ವೇದಿಕೆಯಲ್ಲಿ ಯಾರೆಲ್ಲಾ ಜನಪ್ರತಿನಿಧಿಗಳಿಗೆ ಅವಕಾಶವಿದೆ ಎನ್ನುವ ಗೊಂದಲವಿತ್ತು.

ಆದರೆ ಹಿಂದಿನAತೆ ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಮುಖ್ಯಮಂತ್ರಿಗಳು, ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ ಸಚಿವರು, ಆಯುಷ್ ಇಲಾಖೆಯ ಕ್ಯಾಬಿನೆಟ್ ಹಾಗೂ ರಾಜ್ಯ ಸಚಿವರಿಗೆ ಮಾತ್ರ ಅವಕಾಶವಿರುತ್ತದೆ. ಇವರನ್ನು ಹೊರತುಪಡಿಸಿ ಸಂಸದನಾದ ನಾನು ಸೇರಿದಂತೆ ಯಾವ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರೂ ವೇದಿಕೆ ಯಲ್ಲಿರುವುದಿಲ್ಲ. ಕೊರೊನಾ ಕಾರಣದಿಂದ ೨ ವರ್ಷ ಪ್ರಧಾನಿಯವರ ನೇತೃತ್ವದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆದಿಲ್ಲ. ಇನ್ನುಳಿದ ೫ ಯೋಗ ದಿನಾಚರಣೆ ಗಳಲ್ಲಿದ್ದಂತೆ ಸೀಮಿತ ಜನಪ್ರತಿನಿಧಿಗಳು ವೇದಿಕೆಯಲ್ಲಿ ಇರಲಿದ್ದಾರೆ ಎಂದು ತಿಳಿಸಿದರು.

ಇನ್ನು ಗಣ್ಯರನ್ನು ಆಹ್ವಾನಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ನಿರ್ಧರಿಸಲಾಗುತ್ತದೆ. ಮೈಸೂರು ಮಹಾರಾಜರ ಪರಂಪರೆ ವಿಶ್ವವಿಖ್ಯಾತ. ಅವರು ಯೋಗಕ್ಕೆ ಪ್ರೋತ್ಸಾಹ ನೀಡಿ ಪೋಷಿಸಿದ್ದಾರೆ. ಈ ಹಿನ್ನೆಲೆಯಲ್ಲೇ ಯೋಗ ದಿನಾ ಚರಣೆಗೆ ಅರಮನೆ ಆವರಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಗಣ್ಯರ ಆಹ್ವಾನದ ಬಗ್ಗೆ ಇನ್ನೂ ಚರ್ಚೆ ಹಂತದಲ್ಲಿರುವಾಗಲೇ ಮಹಾರಾಜರನ್ನು ಕರೆದಿಲ್ಲ ಎಂಬ ಗಾಳಿಸುದ್ದಿ ಹಬ್ಬಿಸುವುದು ಸರಿಯಲ್ಲ. ದಯವಿಟ್ಟು ಯಾರೂ ಹೀಗೆ ಮಾಡಬೇಡಿ. ರಾಜಮಾತೆ ಪ್ರಮೋದಾದೇವಿ ಒಡೆಯರ್, ಮಹಾರಾಜ ಯದುವೀರ್, ಯತಿಗಳು ಸೇರಿದಂತೆ ಅನೇಕ ಗಣ್ಯರಿದ್ದಾರೆ. ಎಲ್ಲರ ಉಪಸ್ಥಿತಿಯಲ್ಲೇ ಉತ್ತಮ ಕಾರ್ಯಕ್ರಮ ನಡೆಸಬೇಕಿದೆ ಎಂದು ಹೇಳಿದರು. ಯೋಗ ದಿನಾಚರಣೆ ರಾಜಕೀಯ ಕಾರ್ಯಕ್ರಮ ವಲ್ಲ. ಎಲ್ಲಾ ಚುನಾಯಿತ ಜನಪ್ರತಿನಿಧಿಗಳಿಗೂ ಆಹ್ವಾನ ಇರಲಿದೆ. ಆ ವೇಳೆ ಅರ್ಧ ಗಂಟೆ ಸಭಾ ಕಾರ್ಯಕ್ರಮವೂ ನಡೆಯುವುದರಿಂದ ಅತೀಗಣ್ಯ ವ್ಯಕ್ತಿಗಳಿಗೆ(ವಿಐಪಿ) ಆಸನ ವ್ಯವಸ್ಥೆಯನ್ನೂ ಮಾಡಲಾಗುವುದು. ವಿವಿಧ ಕ್ಷೇತ್ರಗಳ ಸಾಧಕರು ಸೇರಿದಂತೆ ಎಲ್ಲಾ ಗಣ್ಯರನ್ನೂ ಆಹ್ವಾನಿಸಲು ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ತಿಳುವಳಿಕೆ ಹರಡುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.

 

ಇಂದಿನಿಂದ ಅನಧಿಕೃತ ಫಲಕ ತೆರವು
ಮೈಸೂರು: ಮೈಸೂರಿನಿಂದ ಕಡಕೊಳದವರೆಗೆ ರಾಷ್ಟಿçÃಯ ಹೆದ್ದಾರಿಯ ಇಕ್ಕೆಲಗಳಲ್ಲಿ ಅಳವಡಿಸಿ ರುವ ಅನಧಿಕೃತ ಹೋರ್ಡಿಂಗ್, ಬೋರ್ಡ್ ಸೇರಿ ದಂತೆ ಎಲ್ಲಾ ರೀತಿಯ ಜಾಹೀರಾತು ಫಲಕಗಳನ್ನು ಬುಧವಾರದಿಂದ ಗ್ಯಾಸ್ ಕಟ್ಟರ್‌ನಿಂದ ಕತ್ತರಿಸಿ ತೆರವುಗೊಳಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಪುನರ್ ಎಚ್ಚರಿಕೆ ನೀಡಿದರು.

ಈ ಕಾರ್ಯಾಚರಣೆಯನ್ನು ಪ್ರಧಾನಿ ಮೋದಿ ಅವರು ಬರುತ್ತಿದ್ದಾರೆ ಎಂಬ ಕಾರಣಕ್ಕೆ ಮಾಡುತ್ತಿಲ್ಲ. ಮೈಸೂರಿನ ಸೌಂದರ್ಯ ಹಾಗೂ ಸ್ವಚ್ಛತೆ ದೃಷ್ಟಿ ಯಿಂದ ವೈಯಕ್ತಿಕ ಆಸಕ್ತಿಯಿಂದ ಈ ಕೆಲಸ ಮಾಡು ತ್ತಿದ್ದೇನೆ. ಈ ಹಿಂದೆ ರಿಂಗ್‌ರಸ್ತೆಯ ಇಕ್ಕೆಲಗಳಲ್ಲಿದ್ದ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಗಿತ್ತು. ಇದೀಗ ಮೋದಿ ಅವರ ಆಗಮನದ ನೆಪದಲ್ಲಿ ಮತ್ತೆ ಸ್ವಚ್ಛಗೊ ಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕಳೆದ ೨ ವರ್ಷ ಕೊರೊನಾದಿಂದ ಜೀವ ಉಳಿಸಿ ಕೊಳ್ಳಲು ಹೆಣಗಾಡುವ ಸ್ಥಿತಿ ಇತ್ತು. ಬೇರೆ ಕೆಲಸಗಳತ್ತ ಗಮನಹರಿಸಲು ಸಾಧ್ಯವಾಗದ ಕಾರಣ ರಸ್ತೆಗಳೆಲ್ಲಾ ಹಾಳಾಗಿವೆ. ಇದೀಗ ಮೋದಿ ಆಗಮನದ ವೇಳೆ ರಸ್ತೆ ದುರಸ್ತಿ ಹಾಗೂ ಅಭಿವೃದ್ಧಿಯಾಗುತ್ತಿರುವುದು ಸತ್ಯ. ಆದರೂ ಪೂರಕ ಪ್ರಯತ್ನವಾಗಿ ನಮ್ಮ ಇಬ್ಬರು ಶಾಸಕರ ಕ್ಷೇತ್ರಗಳಿಗೆ ತಲಾ ೧೦೦ ಕೋಟಿ ರೂ. ಅನು ದಾನ ಲಭಿಸಿದ್ದು, ಇದೀಗ ಕಾಕತಾಳೀಯವಾಗಿ ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಇದಕ್ಕೆ ಖುಷಿ ಪಡೋಣ ಎಂದು ಪ್ರತಾಪ್ ಸಿಂಹ ಹೇಳಿದರು.

 

Translate »