ಮೈಸೂರು,ಅ.3(ಪಿಎಂ)- ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿಯಮಿತ ಶನಿವಾರ ಉದ್ಘಾಟನೆಗೊಂಡಿತು.
ಮೈಸೂರಿನ ದಿವಾನ್ಸ್ ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಹಾಗೂ ಸಹಕಾರ ಭಾರತಿಯ ಸಂಘಟನಾ ಕಾರ್ಯದರ್ಶಿ ಬಿ.ಹೆಚ್.ಕೃಷ್ಣಾರೆಡ್ಡಿ ನೂತನ ಒಕ್ಕೂಟವನ್ನು ಉದ್ಘಾಟಿಸಿದರು.
ನಂತರ ಮಾತನಾಡಿ, ಒಕ್ಕೂಟದ ಆರಂಭ ಶ್ಲಾಘನೀಯ. ಒಕ್ಕೂಟದಡಿ ಸಾವಿರ ಸೌಹಾರ್ದ ಸಹಕಾರ ಸಂಘಗಳು ಸ್ಥಾಪನೆ ಯಾಗಲು ಶ್ರಮಿಸುವಂತೆ ಸಲಹೆ ನೀಡಿದರು.
ಇದೇ ವೇಳೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಹಾಗೂ ಸಹಕಾರ ಭಾರತಿ ಮೈಸೂರು ಘಟಕ ದಿಂದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರನ್ನು ಸನ್ಮಾನಿಸಲಾಯಿತು. ನೂತನ ಒಕ್ಕೂಟದ ಅಧ್ಯಕ್ಷ ಎಸ್.ಆರ್.ನಾರಾಯಣ ರಾವ್, ಸಿಇಓ ಎಸ್.ಸಿ.ಭಗೀರಥ, ಪುತ್ತೂರಿನ ಕ್ಯಾಂಪ್ಕೊ ಲಿ. ಅಧ್ಯಕ್ಷ ಎಸ್.ಆರ್.ಸತೀಶ್ ಚಂದ್ರ, ಸಹಕಾರ ಭಾರತೀಯ ಮೈಸೂರು ಜಿಲ್ಲಾಧ್ಯಕ್ಷ ಬಿ.ಮಹದೇವಸ್ವಾಮಿ, ಮೈಸೂರು ನಗರ ಅಧ್ಯಕ್ಷ ಹೆಚ್.ಎನ್.ನವೀನ್, ಮಹಿಳಾ ವಿಭಾಗದ ಮೈಸೂರು ಜಿಲ್ಲಾಧ್ಯಕ್ಷೆ ಹೇಮಾ ಗಂಗಪ್ಪ, ಸಹಕಾರ ಸಂಘಗಳ ಮೈಸೂರು ವಿಭಾಗದ ಜಂಟಿ ನಿಬಂಧಕ ಪ್ರಕಾಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.