ಮೈಸೂರು ಭಾಗದ ನೀರು, ಒಳ ಚರಂಡಿ ನಿರ್ವಹಣೆಗೆ ಅನುವಾಗುವ `ಜಲ ಭವನ’ ಕಟ್ಟಡ ಉದ್ಘಾಟನೆ
ಮೈಸೂರು

ಮೈಸೂರು ಭಾಗದ ನೀರು, ಒಳ ಚರಂಡಿ ನಿರ್ವಹಣೆಗೆ ಅನುವಾಗುವ `ಜಲ ಭವನ’ ಕಟ್ಟಡ ಉದ್ಘಾಟನೆ

January 22, 2022

೧೮.೪೦ ಕೋಟಿ ವೆಚ್ಚದಲ್ಲಿ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣ

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜರಿಂದ ಲೋಕಾರ್ಪಣೆ

ಮೈಸೂರು, ಜ.೨೧(ಎಂಟಿವೈ)- ಮೈಸೂರಿನ ಸರಸ್ವತಿಪುರಂನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವತಿ ಯಿಂದ ನಿರ್ಮಿಸಿರುವ `ಜಲ ಭವನ’ ವಿಭಾಗೀಯ ಕಚೇರಿ ಕಟ್ಟಡವನ್ನು ಶುಕ್ರವಾರ ನಗರಾ ಭಿವೃದ್ಧಿ ಸಚಿವ ಬೈರತಿ ಬಸವರಾಜ್ ಲೋಕಾರ್ಪಣೆ ಮಾಡಿದರು.

ಶುಕ್ರವಾರ ಬೆಳಿಗ್ಗೆ ನಡೆದ ಜಲ ಭವನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಪತ್ರ ಕರ್ತರೊಂದಿಗೆ ಸಚಿವ ಭೈರತಿ ಬಸವ ರಾಜ ಮಾತನಾಡಿ, ೧೮.೪೦ ಕೋಟಿ ರೂ. ವೆಚ್ಚದಲ್ಲಿ ಜಲಭವನದ ಕಟ್ಟಡ ನಿರ್ಮಿಸ ಲಾಗಿದೆ. ಕರ್ನಾಟಕ ನಗರ ನೀರು ಸರಬ ರಾಜು ಮತ್ತು ಒಳಚರಂಡಿ ಮಂಡಳಿಯ ಮೈಸೂರು ವಿಭಾಗೀಯ ಅಧಿಕಾರಿಗಳು ಈ ಕಚೇರಿಯಲ್ಲಿ ಕೆಲಸ ನಿರ್ವ ಹಿಸಲಿz್ದÁರೆ. ಮೈಸೂರು ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಎಲ್ಲಾ ಸಿಬ್ಬಂದಿಗೂ ಜನರ ಸಮಸ್ಯೆಗೆ ತಕ್ಷಣ ಸ್ಪಂಧಿಸುವ ರೀತಿ ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.

ಜಿ¯್ಲÁ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ರಾದ ತನ್ವೀರ್ ಸೇಠ್, ಎಲï. ನಾಗೇಂದ್ರ, ವಿಧಾನಪರಿಷತï ಸದಸ್ಯ ಸಿ.ಎನ್.ಮಂಜೇ ಗೌಡ, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯP್ಷÀ ಎಚ್.ವಿ.ರಾಜೀವ್, ಮೃಗಾಲಯ ಪ್ರಾಧಿ ಕಾರದ ಅಧ್ಯP್ಷÀ ಎಲ್.ಆರ್.ಮಹ ದೇವ ಸ್ವಾಮಿ, ಜಂಗಲï ಲಾಡ್ಜ್ಸ್ ಮತ್ತು ರೆಸಾರ್ಟ್ಸ್ ಅಧ್ಯP್ಷÀ ಅಪ್ಪಣ್ಣ, ಪಾಲಿಕೆ ಸದಸ್ಯರಾದ ಸಿ.ವೇದಾ ವತಿ, ಎಂ.ಶಿವಕುಮಾರ್, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಮೋಹನ್ ರಾಜ್, ಕಾರ್ಯಪಾಲಕ ಅಭಿಯಂತರ ಜಿ.ಎಂ.ತಿಮ್ಮಯ್ಯ, ಮುಖ್ಯ ಅಭಿಯಂತರ ಎಸ್.ಬಿ.ಸಿದ್ದನಾಯ್ಕ್ ಇತರರಿದ್ದರು.

೮ ಜಿಲ್ಲೆಯ ಮಾಹಿತಿ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಮೈಸೂರು ವಲಯ ವ್ಯಾಪ್ತಿಗೆ ೮ ಜಿ¯್ಲೆಗಳು ಒಳಗೊಂಡಿವೆ. ಮೈಸೂರು, ಚಾಮರಾಜನಗರ, ಮಡಿ ಕೇರಿ, ಮಂಡ್ಯ, ಹಾಸನ, ಚಿಕ್ಕಮಗಳೂರು, ಮಂಗಳೂರು ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ನಗರ ಮತ್ತು ಪಟ್ಟಣಗಳಿಗೆ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ನಿರ್ವಹಿಸುವ ಜವಾಬ್ದಾರಿ ಮೈಸೂರು ವಲಯಕ್ಕೆ ಬರು ತ್ತದೆ. ಮೈಸೂರು ವಲಯದ ನಗರ ಹಾಗೂ ಪಟ್ಟಣಗಳಿಗೆ ನೀರು ಸರಬ ರಾಜು ಮತ್ತು ಒಳಚರಂಡಿ ಯೋಜನೆ ಗಳನ್ನು ಪರಿಣಾಮ ಕಾರಿಯಾಗಿ ಅವಶ್ಯಕತೆಗನುಗುಣವಾಗಿ ನಿಗಧಿತ ಅವಧಿಯೊಳಗೆ ಅನುಷ್ಠಾನ ಗೊಳಿಸಲು ಸರ್ಕಾರದ ಆದೇಶದಂತೆ ಮೈಸೂರು ವಲಯ ಕಚೇರಿಯನ್ನು ೨೦೧೪ರ ಡಿಸೆಂಬರ್ ೧೫ ರಂದು ಬೆಂಗಳೂರಿನಲ್ಲಿ ಸ್ಥಾಪಿಸ ಲಾಯಿತು. ನಂತರ ೨೦೧೬ರ ಏಪ್ರಿಲ್ ೨೦ರಂದು ಮೈಸೂರು ವಲಯ ಕಚೇರಿಯನ್ನು ಮೈಸೂರು ನಗರಕ್ಕೆ ವರ್ಗಾಯಿಸಲಾಯಿತು. ಸದ್ಯ ಮೈಸೂರು ಭಾಗದ ವಿವಿಧ ಜಿಲ್ಲೆಗಳ ನೀರು ಸರಬರಾಜು ಮತ್ತು ಒಳಚರಂಡಿ ಕಾರ್ಯಗಳನ್ನು ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ಮೈಸೂರು ಜಲಭವನ ಕಟ್ಟಡ ನಿರ್ಮಾಣ ಮಾಡಲಾಗಿದೆ.

Translate »