ಲ್ಯಾನ್ಸ್ಡೌನ್, ದೇವರಾಜ ಮಾರುಕಟ್ಟೆ ಪುನಃ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಭರವಸೆ
ಮೈಸೂರು

ಲ್ಯಾನ್ಸ್ಡೌನ್, ದೇವರಾಜ ಮಾರುಕಟ್ಟೆ ಪುನಃ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಭರವಸೆ

January 22, 2022

ಮೈಸೂರು, ಜ. ೨೧(ಆರ್‌ಕೆ)- ದೇವ ರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಬಿಲ್ಡಿಂಗ್‌ಗಳ ಪುನಃ ನಿರ್ಮಾಣಕ್ಕೆ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸ ಲಿರಿಸುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಭರವಸೆ ನೀಡಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಕಚೇರಿ ಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಲ್. ನಾಗೇಂದ್ರ ಹಾಗೂ ಮಾಜಿ ಮೇಯರ್ ಅಯೂಬ್ ಖಾನ್, ಶಿಥಿಲಾವಸ್ಥೆ ಯಲ್ಲಿರುವ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಪಾರಂಪರಿಕ ಕಟ್ಟಡ ಗಳನ್ನು ಕೆಡವಿ ಹೊಸದಾಗಿ ನಿರ್ಮಿಸಲು ಪಾಲಿಕೆ ನಿರ್ಣಯಿಸಿದೆ ಎಂದರು.
ಆದರೆ ಪಾರಂಪರಿಕ ತಜ್ಞರು ಹಾಗೂ ತಜ್ಞರನ್ನೊಳಗೊಂಡ ಟಾಸ್ಕ್ಫೋರ್ಸ್ ವಿಭಿನ್ನ ವರದಿ ನೀಡಿರುವುದರಿಂದ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಯಾದರೂ, ಈವರೆಗೆ ಯಾವುದೇ ನಿಲುವಿಗೆ ಬಾರದ ಕಾರಣ ಈ ಎರಡೂ ಕಟ್ಟಡಗಳು ಅದೇ ಸ್ಥಿತಿಯಲ್ಲಿವೆ ಎಂದು ಅವರು ತಿಳಿಸಿದರು.
ಆ ಸಂಬAಧ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸರ್ಕಾರ ಒಂದು ನಿರ್ಧಾರಕ್ಕೆ ಬರಬೇಕು ಎಂದು ಒತ್ತಾಯಿಸಿದ ನಾಗೇಂದ್ರ ಅವರಿಗೆ, ಈ ವರ್ಷದ ಬಜೆಟ್‌ನಲ್ಲಿ ಹಣ ಮೀಸಲಿರಿಸಿ ಅಗತ್ಯ ಕ್ರಮ ವಹಿಸುತ್ತೇವೆ ಎಂದಷ್ಟೇ ಸಚಿವರು ತಿಳಿಸಿದರೇ ಹೊರತು, ಸದರಿ ಕಟ್ಟಡಗಳನ್ನು ಕೆಡವಿ ಹೊಸದಾಗಿ ನಿರ್ಮಿಸುವುದೋ ಅಥವಾ ರಿಪೇರಿ ಮಾಡಲು ಅನುದಾನ ಮೀಸಲಿರಿಸು ವುದೋ ಎಂಬುದನ್ನು ಸ್ಪಷ್ಟಪಡಿಸಲಿಲ್ಲ.

ಜನಪ್ರತಿನಿಧಿಗಳೂ ಸಹ ಈ ಗೊಂದಲದ ಬಗ್ಗೆ ಸ್ಪಷ್ಟನೆ ಪಡೆಯುವ ಪ್ರಯತ್ನ ಮಾಡದ ಕಾರಣ, ಬಜೆಟ್‌ನಲ್ಲಿ ಹಣ ಒದಗಿಸುತ್ತೇವೆ ಎಂದು ಹೇಳಿದ ತಕ್ಷಣ ಮರು ಮಾತ ನಾಡದೇ ಬೇರೆಡೆ ಗಮನಹರಿಸಿದ್ದರಿಂದ ಆ ವಿಷಯ ಅಷ್ಟಕ್ಕೇ ಸೀಮಿತವಾಯಿತು.

ರಿಂಗ್ ರೋಡ್ ದೀಪ ರಿಪೇರಿ: ಮೈಸೂರಿನ ರಿಂಗ್ ರಸ್ತೆಯಲ್ಲಿ ಅಳವಡಿಸಿರುವ ಬೀದಿ ದೀಪಗಳ ಸಂಪರ್ಕದ ಕೇಬಲ್‌ಗಳನ್ನು ಇಲಿ-ಹೆಗ್ಗಣಗಳು ಕಡಿದು ತುಂಡರಿಸಿರುವುದರಿAದ ದೀಪಗಳು ಬೆಳಗುತ್ತಿಲ್ಲ, ರಿಪೇರಿಗೆ ೫.೫ ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸ ಲಾಗಿದೆ ಎಂದು ಪ್ರಸ್ತಾಪಿಸಿದ ಜನಪ್ರತಿನಿಧಿ ಗಳು, ರಿಪೇರಿ ಮಾಡಿಸುವರ‍್ಯಾರು ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಾಲಿಕೆ ಮತ್ತು ಮುಡಾ ಜಂಟಿಯಾಗಿ ಖರ್ಚು ಮಾಡಿ ಸರಿಪಡಿಸಿ ಎಂದು ಸೂಚಿಸಿದರು. ಅದೇ ರೀತಿ ಎಲ್‌ಇಡಿ ಬಲ್ಬ್ಗಳು ಕೆಲ ದೊಡ್ಡ ರಸ್ತೆಗಳಲ್ಲಿ ಬೆಳಕು ಸಾಲದಾಗಿದೆ. ಅಂತಹ ರಸ್ತೆಗಳಿಗಾದರೂ ಹೈ-ವೋಲ್ಟೇಜ್ ಇರುವ ಬಲ್ಬ್ ಅಳವಡಿಸುವಂತೆ ಕೋರಿದಾಗ ಅದಕ್ಕೆ ತಗುಲುವ ಹೆಚ್ಚುವರಿ ವೆಚ್ಚದ ಬಗ್ಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಯೋಜನೆಗೆ ಮಾರ್ಪಾಡು ಮಾಡಿ ಕೊಡುತ್ತೇನೆ ಎಂದು ಸಚಿವರು ನುಡಿದರು.

Translate »