ದೇಹದ ಅಂಗಾಂಗ ದಾನದ ಮೂಲಕ ಇತರರಿಗೆ `ದರ್ಶನ’
ಮೈಸೂರು

ದೇಹದ ಅಂಗಾಂಗ ದಾನದ ಮೂಲಕ ಇತರರಿಗೆ `ದರ್ಶನ’

January 22, 2022

ಮೈಸೂರು,ಜ.೨೧(ಎಂಟಿವೈ)- ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಡು, ಮೆದುಳು ನಿಷ್ಕಿçಯಗೊಂಡಿದ್ದ ಯುವಕನ ಅಂಗಾAಗ ದಾನ ಮಾಡುವ ಆತನಿಗೆ ಸದ್ಗತಿ ಕಲ್ಪಿಸಲಾಗಿದೆ. ಮೈಸೂರು ತಾಲೂಕಿನ ಸೋಮನಹಳ್ಳಿ ನಿವಾಸಿ ದರ್ಶನ್(೨೪) ಜ.೧೮ರಂದು ರಸ್ತೆ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಅಂದು ರಾತ್ರಿ ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಮೆದುಳು ನಿಷ್ಕಿçಯ ಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಾನವ ಅಂಗಾAಗ ಕಸಿ ಕಾಯ್ದೆ ೧೯೯೪ರ ಅನ್ವಯ ದರ್ಶನ್ ಪೋಷಕರು ಅಂಗಾAಗ ದಾನ ಮಾಡಲು ಸಮ್ಮತಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಯುವಕನ ಹೃದಯ, ಎರಡು ಕಿಡ್ನಿ, ಲಿವರ್, ಯಕೃತ್ ಹಾಗೂ ಕಾರ್ನಿಯಾವನ್ನು ಬೇರ್ಪಡಿಸಲಾಯಿತು ಎಂದು ಅಪೋಲೋ ಆಸ್ಪತ್ರೆಯ ಆಡಳಿತ ವಿಭಾಗದ ಉಪಾಧ್ಯಕ್ಷ ಎನ್.ಜಿ.ಭರತೀಶ ರೆಡ್ಡಿ ತಿಳಿಸಿದ್ದಾರೆ.
ಚೆನ್ನೆöÊಗೆ ಹಾರಿದ ಹೃದಯ: ದರ್ಶನ್ ಅವರ ಹೃದಯವನ್ನು ತಮಿಳುನಾಡಿನ ಚೆನ್ನೆöÊ ಎಂಜಿಎA ಹೆಲ್ತ್ಕೇರ್‌ನಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ಜೋಡಣೆ ಮಾಡಲು ಕೊಂಡೊಯ್ಯಲಾಯಿತು. ಮೈಸೂರಿನ ಅಪೊಲೋ ಆಸ್ಪತ್ರೆಯಿಂದ ಮಂಡಕಳ್ಳಿ ವಿಮಾನ ನಿಲ್ದಾಣದವರೆಗೂ ಮೈಸೂರು ಪೊಲೀಸರು ಗ್ರೀನ್ ಕಾರಿಡಾರ್ ಮೂಲಕ ಹೃದಯ ಸಾಗಾಟಕ್ಕೆ ನೆರವು ನೀಡಿದರು. ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಲಘು ವಿಮಾನದ ಮೂಲಕ ಚೆನ್ನೆöÊ ವಿಮಾನ ನಿಲ್ದಾಣಕ್ಕೆ ಹೃದಯ ಸಾಗಿಸಲಾಯಿತು. ಚೆನ್ನೆöÊನಲ್ಲೂ ಗ್ರೀನ್ ಕಾರಿಡಾರ್ ಮೂಲಕ ಆಸ್ಪತ್ರೆಗೆ ನಿಗದಿತ ಅವಧಿಯೊಳಗೆ ಹೃದಯ ಸಾಗಿಸಲಾಗಿದ್ದು, ಹೃದಯ ಕಸಿ ಮಾಡುವ ಶಸ್ತçಚಿಕಿತ್ಸೆಯನ್ನು ತಕ್ಷಣ ಆರಂಭಿಸಲಾಯಿತು. ಮಾರ್ಗದುದ್ದಕ್ಕೂ ಜನರು ಆಂಬುಲೆನ್ಸ್ ಸಾಗಲು ಸಹಕರಿಸಿದರು. ಅಪೋಲೋ ಆಸ್ಪತ್ರೆಯ ಸಿಬ್ಬಂದಿ ಅಂಗಾAಗ ದಾನ ಮಾಡಿದ ದರ್ಶನ್ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು.

Translate »