ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ರಾಜಕಾರಣ ಗಳು… ಸ್ವಾಮೀಜಿಗಳಿಗೆ ಮೇಲ್ಮನವಿ!?
ಮೈಸೂರು

ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ರಾಜಕಾರಣ ಗಳು… ಸ್ವಾಮೀಜಿಗಳಿಗೆ ಮೇಲ್ಮನವಿ!?

January 22, 2022

ಕೆಪಿಎಸ್‌ಸಿ ಪ್ರೊಬೆಷನರಿ ಹುದ್ದೆಗಳಿಗೆ ಆಯ್ಕೆಯಾದವರ ಪಟ್ಟಿ ರದ್ದುಪಡಿಸಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು, ಸಿರಿಗೆರೆ ಸ್ವಾಮೀಜಿಗೆ ಮೇಲ್ಮನವಿ ಸಲ್ಲಿಕೆ; ಗೌಡರು ನೀಡಿದ ಇದಕ್ಕೆ ಸಂಬಂಧಿಸಿದ ಮನವಿ ಪತ್ರದ ಮೇಲೆ ಷರಾ ಬರೆದ ಸಿಎಂ ಬಸವರಾಜ ಬೊಮ್ಮಾಯಿ ನಡೆಯ
ಔಚಿತ್ಯದ ಬಗ್ಗೆ ಎಂಎಲ್‌ಸಿ ವಿಶ್ವನಾಥ್ ಆತಂಕದ ಪ್ರಶ್ನೆ

ರಾಜಕಾರಣ ಗಳು, ಸ್ವಾಮೀಜಿಗಳು ಇನ್ನು ಮುಂದೆ ನ್ಯಾಯಾಂಗದ ಕಾರ್ಯವನ್ನು ಕೈಗೆತ್ತಿಕೊಂಡರೆ ಬಡವರು, ಶೋಷಿತರ ಪಾಡೇನು?
ಕರ್ನಾಟಕ ಲೋಕಸೇವಾ ಆಯೋಗವನ್ನು ಇಷ್ಟು ಸರ್ಕಾರಗಳು ಬಂದರೂ ಸರಿ ಮಾಡಲು ಆಗಿಲ್ಲ. ರಾಜ್ಯದ ಆಡಳಿತಗಾರರನ್ನು ಆಯ್ಕೆ ಮಾಡುವಂತಹ ಗುರುತರ ಜವಾಬ್ದಾರಿ ಲೋಕಸೇವಾ ಆಯೋಗದ ಮೇಲಿದೆ. ಮುಖ್ಯಮಂತ್ರಿಯಾಗಿ ಬಂದ ಸಿದ್ದರಾಮಯ್ಯನವರು ಕರ್ನಾಟಕ ಲೋಕಸೇವಾ ಆಯೋಗವನ್ನು ನಾನು ಸರಿ ಮಾಡುತ್ತೇನೆ ಎಂದವರು ಏನು ಮಾಡಿದರು? ಬಿಡಿಎ ಛೇರ್ಮನ್ ಆಗಿದ್ದ ಭ್ರಷ್ಟಾತಿಭ್ರಷ್ಟ ಶ್ಯಾಂಭಟ್ ಅವರನ್ನು ಅದರ ಛೇರ್ಮನ್ ಮಾಡಿದರು. ಮತ್ತೆ ಯಾವ ರೀತಿ ಭ್ರಷ್ಟಾಚಾರ ನಾಶ ಮಾಡುತ್ತೀರಿ. ಪ್ರಾಮಾಣ ಕತೆ, ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇದೆಯೇ? – ಎಚ್.ವಿಶ್ವನಾಥ್, ಎಂಎಲ್‌ಸಿ

ಮೈಸೂರು, ಜ.೨೧(ಆರ್‌ಕೆಬಿ)- ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆ ಪಟ್ಟಿ ಯಲ್ಲಿ ನಮಗೆ ಅನ್ಯಾಯ ಆಗಿದೆ ಎಂದರೆ ಅಂತಿಮ ವಾಗಿ ಸುಪ್ರೀಂಕೋರ್ಟ್ಗೆ ಹೋಗಬೇಕು. ಆದರೆ ಕೆಪಿಎಸ್‌ಸಿ, ಆಯ್ಕೆ ಪಟ್ಟಿ ರದ್ದು ಮಾಡಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕೆಲವು ಅಭ್ಯರ್ಥಿಗಳು ರಾಜಕಾರಣ ಗಳಿಗೆ ಮೇಲ್ಮನವಿಯನ್ನು ಸಲ್ಲಿಸುತ್ತಾರೆಂದರೆ ನಾವಿಂದು ಎಲ್ಲಿಗೆ ಬಂದು ತಲುಪಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.ಕರ್ನಾಟಕ ಲೋಕಸೇವಾ ಆಯೋಗದ ೨೦೧೧ರ ಪ್ರೊಬೆಷನರಿ ಗೆಜೆಟೆಡ್ ಹುದ್ದೆಗಳ ಪಟ್ಟಿ ರದ್ದು ಮಾಡಿ ಹೈಕೋರ್ಟ್ ನೀಡಿದ ತೀರ್ಪು ವಿಚಾರಕ್ಕೆ ಸಂಬAಧಿಸಿದAತೆ ಪ್ರತಿಕ್ರಿಯಿಸಿದ ಅವರು, ನನಗೆ ಹೆಚ್.ಡಿ. ದೇವೇಗೌಡರ ಮೇಲೆ ಅಪಾರ ವಿಶ್ವಾಸ ವಿದೆ. ದೇಶದ ಅತ್ಯುನ್ನತ ಪ್ರಧಾನಮಂತ್ರಿ ಪದವಿ ಅಲಂಕರಿಸಿದ್ದವರು. ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆದರೆ, ಅವರ ಬಳಿ ಇವರೆಲ್ಲರೂ ಹೋಗಿ, ಸುಪ್ರೀಂ ಕೋರ್ಟ್ ನಮಗೆಲ್ಲರಿಗೂ ಅನ್ಯಾಯ ಮಾಡಿದೆ ಎಂದು ಮೇಲ್ಮನವಿ ನೀಡಿ ದ್ದಾರೆ. ಆ ಮೇಲ್ಮನವಿಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಿ. ಇವರಿಗೆ ನ್ಯಾಯ ದೊರಕಿಸಿಕೊಡಿ ಎಂದು ಹೆಚ್.ಡಿ.ದೇವೇ ಗೌಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರಮುಖೇನ ಕೋರಿದ್ದಾರೆ. ದೇವೇಗೌಡರ ಪತ್ರದ ಮೇಲೆ ಮುಖ್ಯಮಂತ್ರಿ ಕಡತ ಮಂಡಿ ಸುವಂತೆ ಷರಾ ಬರೆದಿದ್ದಾರೆ. ಅರೆ, ಇದೆಲ್ಲ ನೋಡಿದರೆ ಏನು ನಡೆಯುತ್ತಿದೆ ಎಂದು ಬೇಸರವಾಗುತ್ತಿದೆ ಎಂದರು. ಸುಪ್ರೀಂ ಕೋರ್ಟ್ ವಿರುದ್ಧದ ಮೇಲ್ಮ ನವಿಯನ್ನು ರಾಜಕಾರಣ ಗೆಸಲ್ಲಿಸುವುದು, ಅದಕ್ಕವರು ನ್ಯಾಯ ದೊರಕಿಸಿಕೊಡಿ ಎಂದು ಮುಖ್ಯಮಂತ್ರಿಗೆ ಬರೆಯುವುದು, ಅದರ ಮೇಲೆ ಮುಖ್ಯಮಂತ್ರಿ ಷರಾ ಬರೆಯುವುದು. ಎಲ್ಲಿದ್ದೇವೆ ನಾವು? ಹಾಗಾದರೆ ಈ ದೇಶದ ಅತ್ಯುನ್ನತ ನ್ಯಾಯಾಲಯಗಳಿಗೆ ಗೌರವ ಇಲ್ಲವೇ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲೋಕಸೇವಾ ಆಯೋಗ ಪ್ರೊಬೇಷ ನರಿ ಗೆಜೆಟೆಡ್ ಹುದ್ದೆಗಳಲ್ಲಿ ಸ್ವಜನ ಪಕ್ಷ ಪಾತ, ಭ್ರಷ್ಟಾಚಾರ, ಕಾನೂನು ಬಾಹಿರ, ಸಂವಿದಾನ ಬಾಹಿರ ಎಂದು ಹೇಳಿ ಹೈಕೋರ್ಟ್ ಪಟ್ಟಿಯನ್ನು ಡಿಸ್‌ಮಿಸ್ ಮಾಡಿದೆ. ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿ ದಿದೆ. ಆದರೆ ಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ರಾಜ್ಯ ಮತ್ತೆ ಮೇಲ್ಮನವಿ ಸಲ್ಲಿಸಿತು. ಆ ಮೇಲ್ಮನವಿಯನ್ನು ಸಹ ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಆದರೆ ಇದರ ಮೇಲೆ ರಾಜಕಾರಣ ಗಳಿಗೆ ಮೇಲ್ಮ ನವಿ ಸಲ್ಲಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ೩೬೫ ಮಂದಿ ಶಿಪಾರಸ್ಸಿನ ಮೇಲೆ ಆಯ್ಕೆಯಾದವರು. ಇದು ಸಂವಿ ಧಾನ ಬಾಹಿರವಾದ ಆಯ್ಕೆ. ಆಯ್ಕೆ ಪಟ್ಟಿಯನ್ನು ನ್ಯಾಯಾಲಯ ಡಿಸ್‌ಮಿಸ್ ಮಾಡಿದೆ. ಆದರೆ ೩೬೫ ಮಂದಿಗೆ ನ್ಯಾಯ ಒದಗಿಸಿ ಎಂದು ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಸಿರಿಗೆರೆ ಶಿವಮೂರ್ತಿ ಸ್ವಾಮೀಜಿ ಅವರಿಗೂ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಕೊಟ್ಟಿದ್ದಾರೆ. ಈ ದೇಶದ ನ್ಯಾಯಾಂಗದ ಕಾರ್ಯವನ್ನು ರಾಜಕಾರಣ ಗಳು, ಸ್ವಾಮೀಜಿ ಗಳು ಕೈಗೆತ್ತಿಕೊಂಡರೆ ಏನಾಗಬೇಕು? ಮೊದಲೇ ಅನ್ಯಾಯದಿಂದ ಜನರು ಒದ್ದಾಡುತ್ತಿ ದ್ದಾರೆ. ಸಣ್ಣಪುಟ್ಟ ಬಡಜನರೂ ಅನ್ಯಾಯದಿಂದ ಪರಿತಪಿಸುತ್ತಿದ್ದಾರೆ. ಅವರಿಗೆ ನ್ಯಾಯ ಕೊಡುವವರು ಯಾರು? ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನೇ ಧಿಕ್ಕರಿಸುವಂತಹ ಕಾಲ ಘಟ್ಟದಲ್ಲಿ ನಾವಿದ್ದೇವೆ. ಅಂದರೆ ಸಾಮಾನ್ಯ ಜನರಿಗೆ ನ್ಯಾಯ ಹೇಗೆ ಸಿಗುತ್ತದೆ ಎಂದು ಎಚ್.ವಿಶ್ವನಾಥ್ ಪ್ರಶ್ನಿಸಿದರು. ಈ ರಾಜ್ಯದ ಆಡಳಿತಾತ್ಮಕ ಸುಧಾರಣೆ ತರಬೇಕಾದ ಮುಖ್ಯಮಂತ್ರಿಗಳು ಇಂಥವುಗಳಿಗೆ ಮನ್ನಣೆ ನೀಡಬಾರದು ಎಂದು ವಿಶ್ವನಾಥ್ ಅವರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

 

Translate »