ಕಬಿನಿ ಎರಡನೇ ಹಂತದ ಕುಡಿಯುವ ನೀರು ಯೋಜನೆ ಜಾರಿಗೆ ನಿರ್ಧಾರ
ಮೈಸೂರು

ಕಬಿನಿ ಎರಡನೇ ಹಂತದ ಕುಡಿಯುವ ನೀರು ಯೋಜನೆ ಜಾರಿಗೆ ನಿರ್ಧಾರ

January 22, 2022

೧೮೦ ಎಂಎಲ್‌ಡಿ ನೀರಿನ ಸಾಮರ್ಥ್ಯದ ೧೫೦ ಕೋಟಿ ರೂ. ವೆಚ್ಚದ ಕಾಮಗಾರಿಗೆ ೧೫ ದಿನದೊಳಗೆ ಡಿಪಿಆರ್ ಸಲ್ಲಿಸಲು ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ತಾಕೀತು

ಮೈಸೂರು, ಜ. ೨೧ (ಆರ್‌ಕೆ)- ಕಬಿನಿಯಿಂದ ಮೈಸೂರು ನಗರಕ್ಕೆ ೧೮೦ ಎಂಎಲ್‌ಡಿ ಕುಡಿಯುವ ನೀರು ಸರಬ ರಾಜು ಮಾಡುವ ಕಬಿನಿ ೨ನೇ ಹಂತದ ೧೫೦ ಕೋಟಿ ರೂ. ವೆಚ್ಚದ ಯೋಜನೆ ಜಾರಿಗೆ ಇಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ನೇತೃತ್ವದಲ್ಲಿ ಮೈಸೂರಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮುಡಾ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಕಬಿನಿ ೨ನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆಗೆ ಅಗತ್ಯವಿರುವ ೧೫೦ ಕೋಟಿ ರೂ.ಗಳನ್ನು ಮುಡಾ ಭರಿಸಲು ನಿರ್ಧರಿಸಲಾಯಿತು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ೧೮೦ ಎಂಎಲ್‌ಡಿ ಸಾಮರ್ಥ್ಯದ ಕಬಿನಿ ನೀರು ಸರಬರಾಜು ಯೋಜನೆ ಸಿದ್ಧಪಡಿಸಿದ್ದು, ಅನುಷ್ಠಾನಕ್ಕೆ ೧೫೦ ಕೋಟಿ ರೂ. ಬೇಕಾಗುತ್ತದೆ ಎಂದು ಅಂದಾಜು ವೆಚ್ಚ ತಯಾರಿಸಿದೆ. ಈ ಸಂಬAಧ ಮಂಡಳಿಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಸಿಫ್ ಅವರು ಪಿಪಿಟಿ ಪ್ರೆಸೆಂಟೇಷನ್ ಮೂಲಕ ಮಾಹಿತಿ ನೀಡಿದರು.

ಯೋಜನೆ ಕುರಿತು ಸಮಗ್ರ ಮಾಹಿತಿ ಯೊಂದಿಗೆ ೧೫ ದಿನದೊಳಗಾಗಿ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ನಗರಾಭಿವೃದ್ಧಿ ಸಚಿವರು, ಸಚಿವ ಸಂಪುಟದಲ್ಲಿ ಚರ್ಚಿಸಿ ಪ್ರಸ್ತಾ ವನೆಗೆ ಅನುಮೋದನೆ ಕೊಡಿಸುವುದಾಗಿ ತಿಳಿಸಿದರು.

ಈಗಾಗಲೇ ಮೊದಲನೇ ಹಂತದ ೬೦ ಎಂಎಲ್‌ಡಿ ನೀರು ಸರಬರಾಜು ಯೋಜನೆ ಯನ್ನು ೨೦೧೨ರಲ್ಲಿ ಅನುಷ್ಠಾನ ಮಾಡಲಾಗಿದ್ದು, ಬಿದರಗೂಡು ಬಳಿ ೧೮೦ ಎಂಎಲ್‌ಡಿ ಸಾಮರ್ಥ್ಯದ ಹೆಡ್‌ವರ್ಕ್, ಕೆಂಬಾಳು ಬಳಿ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್ ಹಾಗೂ ಪಿಂಜರಾಪೋಲ್ ಬಳಿ ಐಬಿಪಿಎಸ್ ನಿರ್ಮಿಸಲಾಗಿದೆ. ಅದೇ ರೀತಿ ಪಂಪಿAಗ್ ಮೆಷಿನರಿಗಳನ್ನೂ ಅಳವಡಿಸಿ ರುವುದರಿಂದ ಎರಡನೇ ಹಂತದಲ್ಲಿ ನೀರಿನ ಸಾಮರ್ಥ್ಯಕ್ಕೆ ಅನುಸಾರ ಪೈಪ್‌ಲೈನ್ ಹಾಕಿ ನೀರು ಸರಬರಾಜು ಮಾಡುವ ಯಂತ್ರಾ ಗಾರವನ್ನು ಅಳವಡಿಸಬೇಕಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

೨ನೇ ಯೋಜನೆ ಅನುಷ್ಠಾನಗೊಂಡಲ್ಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ೧೫೬ ಚ.ಕಿ.ಮೀ. ಹಾಗೂ ಮುಡಾ ಲೋಕಲ್ ಪ್ಲಾನಿಂಗ್
ಏರಿಯಾದ ೩೨೫ ಚ.ಕಿ.ಮೀ. ಸೇರಿ ಒಟ್ಟು ೪೮೧ ಚ.ಕಿ.ಮೀ. ಪ್ರದೇಶಕ್ಕೆ ನೀರು ಪೂರೈಸಬಹುದಾಗಿದೆ. ಮುಡಾ ಬಡಾವಣೆ, ಮುಡಾ ಅನು ಮೋದಿತ ಖಾಸಗಿ ಬಡಾವಣೆಗಳಿಗೂ ಕಬಿನಿಯಿಂದ ಕುಡಿಯುವ ನೀರು ಸರಬರಾಜು ಮಾಡಿ ನೀರಿನ ಕೊರತೆ ನೀಗಿಸಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಬಹು ನಿರೀಕ್ಷಿತ ಈ ಯೋಜನೆಯನ್ನು ಅನುಷ್ಠಾನ ಮಾಡಲೇಬೇಕಾಗಿ ರುವುದರಿಂದ ಪ್ರಸ್ತುತ ಕುವೆಂಪುನಗರ, ಜೆ.ಪಿ.ನಗರ, ಬ್ಯಾಂರ‍್ಸ್ ಲೇಔಟ್, ಸುತ್ತಲಿನ ಬಡಾ ವಣೆಗಳ ಜೊತೆಗೆ ಆರ್‌ಟಿ ನಗರ, ವಿಜಯನಗರ ೪ನೇ ಹಂತ, ಯೂನಿ ವರ್ಸಿಟಿ ಲೇಔಟ್ ಹಾಗೂ ಸುತ್ತಲಿನ ವಸತಿ ಬಡಾವಣೆಗಳಿಗೂ ನೀರು ಸರಬರಾಜು ಮಾಡಬಹುದಾಗಿದೆ ಎಂದು ಜನಪ್ರತಿನಿಧಿ ಗಳು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಮೈಸೂರು ನಗರಕ್ಕೆ ಆದ್ಯತೆ : ಕಬಿನಿ ಯಿಂದ ನೀರು ತಂದು ಆದ್ಯತೆ ಮೇಲೆ ಮೈಸೂರು ನಗರಕ್ಕೆ ನೀರು ಕೊಡಬೇಕೇ ಹೊರತು, ಹೊರವಲಯದ ಬಡಾವಣೆ ಗಳಿಗೆ ನಂತರ ನೀರು ಪೂರೈಸಬೇಕು ಎಂದು ಶಾಸಕ ಎಲ್. ನಾಗೇಂದ್ರ ಆಗ್ರಹಿಸಿದರು.

ಕಬಿನಿ ನೀರು ಕೊಡುವ ಬಡಾವಣೆ ಗಳಿಗೆ ಹೊಂಗಳ್ಳಿ ಇತರ ಮೂಲಗಳಿಂದ ಪ್ರಸ್ತುತ ಪೂರೈಸುತ್ತಿರುವ ನೀರನ್ನು ಸ್ಥಗಿತ ಗೊಳಿಸಿ ಎಲ್ಲಾ ಸಂಪರ್ಕಗಳಿಗೂ ಮೀಟರ್ ಅಳವಡಿಸಿ, ನೀರು ಪೋಲಾಗುವುದನ್ನು ತಪ್ಪಿಸುವ ಮೂಲಕ ನೀರಿನ ಸದ್ಬಳಕೆ ಮಾಡುವಂತೆಯೂ ಅವರು ತಿಳಿಸಿದರು.

ಅನಧಿಕೃತ ಸಂಪರ್ಕ ತಪ್ಪಿಸಿ : ಹಲವು ಬಡಾವಣೆಗಳಲ್ಲಿ ಅನಧಿಕೃತ ನೀರಿನ ಸಂಪರ್ಕ ಮುಂದುವರಿಯುತ್ತಿವೆ. ನೀರು ಜಾಸ್ತಿ ಬಂದರೂ, ಸೋರಿಕೆಯಿಂದಾಗಿ ನಿತ್ಯ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಎಷ್ಟು ನೀರು ಬಳಕೆಯಾಗುತ್ತಿದೆ ಎಂಬು ದಕ್ಕೆ ಲೆಕ್ಕವಿಲ್ಲ. ಎಷ್ಟೋ ಬಡಾವಣೆಗಳಲ್ಲಿ ಎಸ್‌ಟಿಪಿಗಳಿಲ್ಲದೇ ಅದ್ವಾನವಾಗಿದೆ ಎಂದು ತನ್ವೀರ್ ಸೇಠ್ ಆರೋಪಿಸಿದರು.ನೀರಿನ ವಿಚಾರದಲ್ಲಿ ಪ್ರತ್ಯೇಕ ಜಲಮಂಡಳಿ ಆಗಬೇಕು. ಪ್ರತಿಯೊಂದು ಸಂಪರ್ಕಕ್ಕೂ ಮೀಟರ್ ಅಳ ವಡಿಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ ಎಂದು ಅವರು ದೂರಿದರು. ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಸಿ.ಎನ್. ಮಂಜೇಗೌಡ, ಮುಡಾ ಸದಸ್ಯರಾದ ಎಸ್‌ಬಿಎಂ ಮಂಜು, ಲಕ್ಷಿö್ಮÃ ದೇವಿ, ಮಾದೇಶ, ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಪಾಲಿಕೆ ಆಯುಕ್ತ ಲಕ್ಷಿö್ಮÃಕಾಂತ ರೆಡ್ಡಿ ಹಾಗೂ ಇತರರು ಸಭೆಯಲ್ಲಿ ಹಾಜರಿದ್ದರು.

 

ನೀರಿನ ಶುಲ್ಕದ ಬಡ್ಡಿ ಮನ್ನಾ, ರೆವಿನ್ಯೂ ಬಡಾವಣೆಗಳ ಆಸ್ತಿಗೆ ಬಿ-ಖಾತಾ
ಸಿಎಂ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಭರವಸೆ
ಮೈಸೂರು, ಜ. ೨೧(ಆರ್‌ಕೆ)- ಬಾಕಿ ಇರುವ ಕುಡಿಯುವ ನೀರಿನ ಶುಲ್ಕದ ಮೇಲಿನ ಬಡ್ಡಿ ಮನ್ನಾ ಮಾಡುವುದು ಹಾಗೂ ರೆವಿನ್ಯೂ ಬಡಾವಣೆಗಳ ಆಸ್ತಿಗಳಿಗೆ ಬಿ-ಖಾತಾ ನೀಡುವ ಸಂಬAಧ ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವ ರಾಜು ಇಂದಿಲ್ಲಿ ತಿಳಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಕಚೇರಿ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರಿಗೆ ಸಂಸದ, ಶಾಸಕರು ಹಾಗೂ ಮೇಯರ್ ಸೇರಿ ಇತರ ಜನಪ್ರತಿನಿಧಿಗಳು ಪಾಲಿಕೆ ವ್ಯಾಪ್ತಿಯಲ್ಲಿರುವ ಹಲವು ರೆವಿನ್ಯೂ ಬಡಾವಣೆಗಳ ಆಸ್ತಿಗಳಿಗೆ ಖಾತೆ, ಕಂದಾಯ, ದಾಖಲಾತಿಗಳೇ ಇಲ್ಲ. ಅಲ್ಲಿನ ವಾಸಿಗಳಿಗೆ ನಾವು ನೀರು, ಒಳಚರಂಡಿ, ಸ್ವಚ್ಛತೆ, ಬೀದಿ ದೀಪ, ರಸ್ತೆ, ಪಾರ್ಕು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದೇವಾದರೂ, ಅವು ಗಳಿಂದ ಪಾಲಿಕೆಗೆ ಆದಾಯ ಬರುತ್ತಿಲ್ಲ ಎಂದರು.
ಮೂಲಭೂತ ಸೌಲಭ್ಯ ಒದಗಿಸಲು ಕೋಟ್ಯಾಂತರ ರೂ. ಹಣ ಖರ್ಚು ಮಾಡುತ್ತಿದ್ದೇವೆ. ಅಧಿಕಾರಿ, ಸಿಬ್ಬಂದಿ ವರ್ಗಗಳನ್ನೂ ಬಳಸುತ್ತಿದ್ದೇವೆ. ಆದರೆ ಆಸ್ತಿಗಳಿಗೆ ತೆರಿಗೆ ವಿಧಿಸಿರುವುದರಿಂದ ಪಾಲಿಕೆಗೆ ಹೊರೆಯಾಗುತ್ತಿದೆ. ಈ ಬಗ್ಗೆ ಕೌನ್ಸಿಲ್‌ನಲ್ಲಿ ಚರ್ಚಿಸಿ ಬಿ-ಖಾತೆ ಮಾಡಿಕೊಡಲು ನಿರ್ಣಯ ಕೈಗೊಳ್ಳಲಾಗಿದೆ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ. ಅನುಮೋದನೆ ಕೊಡಿಸಿದಲ್ಲಿ ರೆವಿನ್ಯೂ ಆಸ್ತಿಗಳಿಗೆ ಒಂದು ದಾಖಲೆಯಾ ದಂತಾಗಿ ಪಾಲಿಕೆಗೂ ಆದಾಯ ಬರುತ್ತದೆ ಎಂದರು.
ಅದೇ ರೀತಿ ಕುಡಿಯುವ ನೀರಿನ ಶುಲ್ಕ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬಡ್ಡಿ ವಿಧಿಸಲಾಗಿದೆ. ಇದೀಗ ಮೈಸೂರು ನಗರದಾದ್ಯಂತ ೭೩ ಕೋಟಿ ರೂ. ಬಡ್ಡಿ ಬಾಕಿ ಉಳಿದಿರುವುದರಿಂದ ನೀರು ಬಳಕೆದಾರರಿಗೆ ಹೊರೆಯಾಗು ತ್ತಿದ್ದು, ಅದರಿಂದ ನೀರಿನ ಶುಲ್ಕವನ್ನೂ ಬಳಕೆದಾರರು ಪಾವತಿಸುತ್ತಿಲ್ಲ ಎಂದು ಶಾಸಕರಾದ ತನ್ವೀರ್ ಸೇಟ್, ಎಲ್. ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಪ್ರಸ್ತಾಪಿಸಿ ದರು. ನೀರಿನ ಶುಲ್ಕದ ಮೇಲಿನ ಬಡ್ಡಿ ಮನ್ನಾ ಮಾಡಿದಲ್ಲಿ ಬಾಕಿ ಇರುವ ೧೪೨ ಕೋಟಿ ರೂ. ನೀರಿನ ತೆರಿಗೆಯಾದರೂ ಬರುತ್ತದೆಂ iÀiÁದ್ದರಿಂದ ಪಾಲಿಕೆ ಕೌನ್ಸಿಲ್‌ನಲ್ಲಿ ಸಲ್ಲಿಸ ಲಾಗಿದೆ. ಈ ಬಗ್ಗೆ ಅನುಮತಿ ನೀಡಿದಲ್ಲಿ ಸಾರ್ವಜನಿಕರಿಗೂ ಅನುಕೂಲ ವಾಗಲಿದೆ ಎಂದು ಜನಪ್ರತಿನಿಧಿಗಳು ತಿಳಿಸಿದರು. ಈ ಪ್ರಸ್ತಾವನೆ ಕೇವಲ ಮೈಸೂರಿಗಷ್ಟೇ ಸೀಮಿತವಾಗಿರದೆ, ರಾಜ್ಯದ ಹಲವು ಪಾಲಿಕೆಗಳಿಗೂ ಅನ್ವಯವಾಗುವುದರಿಂದ ಏಕಾಏಕಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸಿಎಂ ಜೊತೆ ಚರ್ಚಿಸಿ ಸಚಿವ ಸಂಪು ಟಕ್ಕೆ ತಂದು ಸಕಾರಾತ್ಮಕ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಪಾಲಿಕೆ ಆಯುಕ್ತ ಲಕ್ಷಿö್ಮÃಕಾಂತ ರೆಡ್ಡಿ, ಮಾಜಿ ಮೇಯರ್ ಅಯೂಬ್ ಖಾನ್, ಕಾರ್ಪೊ ರೇಟರ್ ಅಶ್ವಿನಿ ಅನಂತು, ಶಿವಕುಮಾರ್ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »