ಬೆಂಗಳೂರು ಹೊರತು ರಾಜ್ಯದ ಇತರೆಡೆ ಶಾಲೆಗಳು ಆರಂಭ
ಮೈಸೂರು

ಬೆಂಗಳೂರು ಹೊರತು ರಾಜ್ಯದ ಇತರೆಡೆ ಶಾಲೆಗಳು ಆರಂಭ

January 22, 2022

ಬೆAಗಳೂರು, ಜ.೨೧-ಬೆಂಗಳೂರು ಹೊರತುಪಡಿಸಿ, ಉಳಿದೆಡೆ ಶಾಲೆಗಳು ಮತ್ತೆ ಕಾರ್ಯಾ ರಂಭ ಮಾಡಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು. ಕೋವಿಡ್ ಕಾರಣಗಳಿಗೆ ಎಲ್ಲಿ ಶಾಲೆಗಳು ಮುಚ್ಚಿದ್ದವೋ ಅಂತಹವುಗಳನ್ನು ತೆರೆಯಲಾಗುವುದು. ಬೆಂಗಳೂರಿನಲ್ಲಿ ಮಾತ್ರ ಜ.೨೯ರವರೆಗೂ ಯಥಾಸ್ಥಿತಿ ಮುಂದು ವರೆಯಲಿದ್ದು, ಆನಂತರ ಸಭೆ ನಡೆಸಿ, ಶಾಲೆ ಗಳನ್ನು ಪುನ ರಾರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.

ಇನ್ನು ರಾಜ್ಯದ ಯಾವುದೇ ಭಾಗದಲ್ಲಿ ಶಾಲೆಯಲ್ಲಿ ಕೋವಿಡ್ ಕಾಣ ಸಿಕೊಂಡರೆ, ಅದನ್ನು ಯೂನಿಟ್ ಎಂದು ಪರಿಗಣ ಸಿ, ಮೂರು ದಿನ ಇಲ್ಲವೆ ಏಳು ದಿನಗಳ ಕಾಲ ಮುಚ್ಚಲಾಗುವುದು. ಕೋವಿಡ್ ಸೋಂಕಿತಗೊAಡ ಶಾಲೆಗೆ ಸಂಬAಧಿಸಿದAತೆ ಸ್ಥಳೀಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ ನಂತರ ಅವರು ಅಂತಿಮ
ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು. ವಾರಾಂತ್ಯ ಹಗಲು ಕರ್ಫ್ಯೂ ರದ್ದುಗೊಳಿಸಲು ಸರ್ಕಾರ ಈ ಎಲ್ಲಾ ಅಂಶಗಳನ್ನು ನೀಡಿ, ಸಮರ್ಥನೆ ಮಾಡಿಕೊಂಡಿದೆ. ಜ.೨೦ರ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು ೨,೯೩,೨೩೧ ಸಕ್ರಿಯ ಪ್ರಕರಣಗಳು ಇವೆ. ಇದರಲ್ಲಿ ೨.೮೬ ಲಕ್ಷ ಮಂದಿ ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ. ಒಟ್ಟು ೫೩೪೪ ಸೊಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲಿ ೩೪೦ ಜನ ಐಸಿಯುನಲ್ಲಿ ಇದ್ದಾರೆ. ೧೨೭ ಮಂದಿ ವೆಂಟಿಲೇಟರ್‌ನಲ್ಲಿ ಇದ್ದಾರೆ. ಬೆಂಗಳೂ ರನ್ನು ಹೊರತು ಪಡಿಸಿ ಮೈಸೂರು, ತುಮಕೂರು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರ ಶೇ.೧೯.೯೪ ರಷ್ಟಿದೆ., ಮಕ್ಕಳ ಪಾಸಿಟಿವಿಟಿ ದರ ಶೇ.೮ರಷ್ಟಿದ್ದು, ವಯಸ್ಕರ ಪಾಸಿಟಿವಿಟಿ ದರ ಶೇ. ೧೬.೫೭ರಷ್ಟಿದೆ. ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳ ಪ್ರಮಾಣದ ಮೇಲೆ ನಿಗಾ ವಹಿಸಲಾಗುತ್ತಿದೆ. ರಾಜ್ಯದಲ್ಲಿ ಮಂಜೂರಾಗಿರುವ ೨೪೩ ಪಿಎಸ್‌ಎ ಪ್ಲಾಂಟ್‌ಗಳ ಪೈಕಿ ೨೨೫ ಕಾರ್ಯಾರಂಭ ಮಾಡಿವೆ. ಎಲ್ಲ ಜಿಲ್ಲಾ ಆಸ್ಪತ್ರೆಗಳು, ೧೧೩ ತಾಲೂಕು ಆಸ್ಪತ್ರೆಗಳಲ್ಲಿ ಪಿಎಸ್‌ಎ ಪ್ಲಾಂಟ್‌ಗಳು ಕಾರ್ಯಾರಂಭ ಮಾಡಿವೆ. ಸರಾಸರಿ ಮೂರು ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಒಬ್ಬ ಸೋಂಕಿತನಿAದ ಸರಾಸರಿ ೨.೬ ಜನರಿಗೆ ಹರಡುತ್ತಿದೆ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗಲುತ್ತಿದೆ. ಬೆಂಗಳೂರಿನ ಜೊತೆಗೆ ಇತರ ಜಿಲ್ಲೆಗಳಲ್ಲಿಯೂ ಕೋವಿಡ್ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.
ವಾರಾಂತ್ಯ ಕರ್ಫ್ಯೂ ವಿಧಿಸಿದರೂ ಕೂಡ ದೊಡ್ಡ ಪರಿಣಾಮ ಉಂಟಾಗಿಲ್ಲ. ಸೋಂಕಿತರ ಸಂಖ್ಯೆ ಮತ್ತು ಪಾಸಿಟಿವಿಟಿ ದರ ಹೆಚ್ಚಾದರೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಶೇ.೫ರಿಂದ ೬ರ ಮದ್ಯದಲ್ಲಿದೆ. ಚೇತರಿಸಿಕೊಳ್ಳುತ್ತಿರುವ ಸೊಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆದರೆ ಮುಂದಿನ ವಾರದಲ್ಲಿ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೆ (ಠಿeಚಿಞ) ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಕೋವಿಡ್ ೧೯ ನಿರ್ವಹಣೆಯ ಮುಂಚೂಣ ಯ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗುತ್ತಿರುವುದನ್ನು ಗಮನಿಸಲಾಯಿತು. ಜನರ ಜೀವ ಮತ್ತು ಜೀವನ ನಿರ್ವಹಣೆ ಎರಡೂ ಸರಿದೂಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ತೀರ್ಮಾನಗಳನ್ನು ಕೈಗೊಳ್ಳಲಾಯಿತು ಎಂದು ಸರ್ಕಾರ ತಿಳಿಸಿದೆ.

Translate »