ವಾರಾಂತ್ಯ ಹಗಲು ಕರ್ಫ್ಯೂ ರದ್ದು
ಮೈಸೂರು

ವಾರಾಂತ್ಯ ಹಗಲು ಕರ್ಫ್ಯೂ ರದ್ದು

January 22, 2022

ಸರ್ಕಾರದ ಮಹತ್ವದ ನಿರ್ಧಾರ

ರಾತ್ರಿ ಕರ್ಫ್ಯೂ ಜೊತೆಗೆ ಕಠಿಣ ನಿಯಮಾವಳಿ ಮುಂದುವರಿಕೆ

ಇನ್ನು ಶನಿವಾರ, ಭಾನುವಾರವೂ ಮದ್ಯ ಮಾರಾಟಕ್ಕೆ ಅವಕಾಶ

ಹೋಟೆಲ್, ಪಬ್, ಕ್ಲಬ್, ಬಾರ್, ರೆಸ್ಟೋರೆಂಟ್‌ನಲ್ಲಿ ಮೋಜು ಮಸ್ತಿಗೆ ಬ್ರೇಕ್ ಹಾಕಲು ರಾತ್ರಿ ಕರ್ಫ್ಯೂ ಮುಂದುವರಿಕೆ

ಮದುವೆ, ಸಮಾರಂಭ, ಚಿತ್ರಮಂದಿರಗಳಿಗೆ ಶೇ.೫೦ರ ಮಿತಿ

ಸಾರ್ವಜನಿಕ ಸಭೆ-ಸಮಾರಂಭ, ಜಾತ್ರೆ, ರ‍್ಯಾಲಿ, ಪ್ರತಿಭಟನೆಗೆ ಅವಕಾಶವಿಲ್ಲ

ರಾತ್ರಿ ಕರ್ಫ್ಯೂ ಅವಧಿ ವಾರದ ಏಳೂ ದಿನಗಳಲ್ಲಿ ರಾತ್ರಿ ೧೦ ರಿಂದ ಬೆಳಗ್ಗೆ ೫ರವರೆಗೆ ಜಾರಿಯಲ್ಲಿರಲಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಹಾಗೂ ತಜ್ಞರೊಂದಿಗೆ ಚರ್ಚಿಸಿದ ಅಂಶಗಳನ್ನು ಆಧರಿಸಿ, ಈ ವಾರಾಂತ್ಯದಲ್ಲಿ ವಾರಾಂತ್ಯ ಕರ್ಫ್ಯೂವನ್ನು ಸದ್ಯಕ್ಕೆ ಹಿಂಪಡೆಯಲು ನಿರ್ಧರಿಸಲಾಯಿತು. ಆದರೆ ಮುಂದಿನ ವಾರ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವನ್ನು ನೋಡಿಕೊಂಡು ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಆದ್ದರಿಂದ ಸಾರ್ವಜನಿಕರು ಜವಾಬ್ದಾರಿಯುತವಾಗಿ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಅತಿ ಅಗತ್ಯವಾಗಿದೆ. ಮಾಲ್, ಹೋಟೆಲ್, ಬಾರ್, ಕ್ಲಬ್,ಪಬ್ ಗಳು ಶೇ.೫೦ ಆಸನ ಸಾಮರ್ಥ್ಯದೊಂದಿಗೆ ತೆರೆಯಲು ತೀರ್ಮಾನಿಸಲಾಯಿತು. ಎಲ್ಲರೂ ಎರಡೂ ಡೋಸ್ ಲಸಿಕೆ ಪಡೆಯುವುದು ಕಡ್ಡಾಯ.

ಬೆಂಗಳೂರು, ಜ.೨೧(ಕೆಎಂಶಿ)- ವಾರಾಂತ್ಯದ ಹಗಲು ಕರ್ಫ್ಯೂ ರದ್ದುಗೊಳಿಸಿರುವ ರಾಜ್ಯ ಸರ್ಕಾರ, ರಾತ್ರಿ ಕರ್ಫ್ಯೂ ಹಾಗೂ ಇತರೆ ಕೋವಿಡ್ ಕಠಿಣ ನಿಯಮಾವಳಿಗಳನ್ನು ಮುಂದುವರೆಸಿದೆ. ಬೆಂಗಳೂರು ಹೊರತುಪಡಿಸಿ, ಉಳಿದೆಡೆ ಶಾಲೆಗಳನ್ನು ಆರಂಭಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಕಚೇರಿ ಕೃಷ್ಣಾದಲ್ಲಿ ತಜ್ಞರು, ಅಧಿಕಾರಿಗಳು, ಹಿರಿಯ ಸಚಿವರೊಟ್ಟಿಗೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರ ವಾರಾಂತ್ಯ ಕರ್ಫ್ಯೂ ರದ್ದುಗೊಳಿಸುವ ತೀರ್ಮಾನ ಕೈಗೊಂಡರು.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ತಜ್ಞರ ಸಲಹೆಯಂತೆ ವೈಜ್ಞಾನಿಕವಾಗಿ ವಾರಾಂತ್ಯದ ಹಗಲು ಕರ್ಫ್ಯೂ ರದ್ದುಗೊಳಿ ಸಿದ್ದೇವೆ. ಉಳಿದಂತೆ ಎಲ್ಲಾ ನಿರ್ಬಂಧಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ. ಜನತೆ ಸಹಕಾರ ನೀಡಿದರೆ, ಮುಂದಿನ ದಿನಗಳಲ್ಲಿ ಇತರ ನಿಯಮಗಳನ್ನು ಸಡಿಲಿಸುವ ಬಗ್ಗೆಯು ಸರ್ಕಾರ ಪರಿಶೀಲನೆ ನಡೆಸಲಿದೆ. ಇಡೀ ರಾಜ್ಯಾದ್ಯಂತ ಕೋವಿಡ್-೧೯ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಕೆಲವು ಕಠಿಣ ನಿರ್ಬಂಧ ಗಳನ್ನು ತೆಗೆದುಕೊಳ್ಳಬೇಕಾಯಿತು.
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾದರೂ, ಆಸ್ಪತ್ರೆಗೆ ಸೇರುವವರ ಸಂಖ್ಯೆ ಶೇ.೫ರಷ್ಟು ಮಾತ್ರ ಇದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾದರೆ ಮತ್ತೆ ವಾರಾಂತ್ಯದ Àರ್ಫ್ಯೂ ಜಾರಿಗೊಳಿಸಲಾಗುವುದು ಎಂದು ಎಚ್ಚರಿಸಿದರು. ವಾರಾಂತ್ಯದ ಕರ್ಫ್ಯೂ ರದ್ದುಗೊಳಿಸುವಂತೆ ಸಾರ್ವಜನಿಕರು, ಪ್ರತಿಪಕ್ಷಗಳು ಒತ್ತಡ ಹೇರಿದ್ದರೂ, ನಾವು ೧೨ ಮಂದಿ ತಜ್ಞರು ಒಮ್ಮತವಾಗಿ ನೀಡಿದ ವರದಿಯನ್ನಾ ಧರಿಸಿ, ವೈಜ್ಞಾನಿಕವಾಗಿಯೇ ಇಂತಹ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡರು. ರಾತ್ರಿ ಕರ್ಫ್ಯೂ ಎಂದಿನAತೆ ಮುಂದುವರೆಯಲಿದೆ, ಹೋಟೆಲ್, ಕ್ಲಬ್, ಪಬ್, ಬಾರ್‌ಗಳಲ್ಲಿ ನಡೆಯುವ ಮೋಜು ಮಸ್ತಿಗೆ ಕಡಿವಾಣ ಹಾಕಲು ಮತ್ತು ಜನರಲ್ಲಿ ಕೋವಿಡ್ ಜಾಗೃತಿ, ಭಯಭೀತಿ ಉಳಿಸಲು ರಾತ್ರಿ ಕರ್ಫ್ಯೂ ಮುಂದುವರೆಸಿದ್ದೇವೆ ಎಂದು ತಿಳಿಸಿದರು. ಉಳಿದಂತೆ ಸಾರ್ವಜನಿಕ ಸಭೆ-ಸಮಾರಂಭ, ಜಾತ್ರೆ, ಪ್ರತಿಭಟನೆಗಳಿಗೆ ಅವಕಾಶವಿರುವುದಿಲ್ಲ. ಮದುವೆ ಮತ್ತು ಇತರ ಸಮಾರಂಭಗಳಿಗೆ ಈ ಹಿಂದೆ ಅಳವಡಿಸಿರುವ ಶೇ.೫೦ರ ನಿರ್ಬಂಧ ಯಥಾಸ್ಥಿತಿಯಲ್ಲಿ ಮುಂದುವರೆಯುತ್ತದೆ. ಹೋಟೆಲ್, ಸಿನಿಮಾ ಮಂದಿರ ಹಾಗೂ ಮಾಲ್‌ಗಳಲ್ಲೂ ಹಾಲಿ ನಿಯಮಾವಳಿಯೇ ಮುಂದುವರೆಯುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.

Translate »