ಆಶಾ ಕಾರ್ಯಕರ್ತರಂತೆ ಪೌರಕಾರ್ಮಿಕರಿಗೂ ಪ್ರೋತ್ಸಾಹ ಧನ
ಮೈಸೂರು

ಆಶಾ ಕಾರ್ಯಕರ್ತರಂತೆ ಪೌರಕಾರ್ಮಿಕರಿಗೂ ಪ್ರೋತ್ಸಾಹ ಧನ

June 16, 2020

ಮೈಸೂರು, ಜೂ. 15(ಆರ್‍ಕೆ)- ಆಶಾ ಕಾರ್ಯಕರ್ತರಂತೆ ಕೊರೊನಾ ವೈರಸ್ ಸೋಂಕಿನ ಆತಂಕದ ನಡುವೆ ಕೆಲಸ ಮಾಡು ತ್ತಿರುವ ಪೌರಕಾರ್ಮಿಕರಿಗೂ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ಕೆ.ಸಿ.ನಾರಾ ಯಣಗೌಡ ಇಂದಿಲ್ಲಿ ತಿಳಿಸಿದ್ದಾರೆ.

ಮೈಸೂರಿನ ಪ್ರಾದೇಶಿಕ ಕಚೇರಿ ಸಭಾಂ ಗಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್-19 ಲಾಕ್ ಡೌನ್ ವೇಳೆಯೂ ರೋಗಾಣು ಹರ ಡುವ ಭೀತಿ ಇದ್ದರೂ, ಪ್ರಾಣವನ್ನು ಲೆಕ್ಕಿ ಸದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರಕಾರ್ಮಿಕರು, ಕ್ವಾರಂಟೈನ್ ಸೆಂಟರ್, ಕಂಟೇನ್ಮೆಂಟ್ ಸೆಂಟರ್‍ಗಳಲ್ಲೂ ವಾರಿ ಯರ್ಸ್‍ಗಳಂತೆ ಕೆಲಸ ಮಾಡಿರುವುದನ್ನು ಸರ್ಕಾರ ಗಮನಿಸಿದೆ ಎಂದರು.

ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರಿಗೆ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರ ಪ್ರೋತ್ಸಾಹ ಧನ ವಿತರಿಸುತ್ತಿದೆ. ಅದೇ ರೀತಿ ಎಲ್ಲಾ ನಗರ ಪಾಲಿಕೆ, ಪುರ ಸಭೆ, ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಗಳಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ಗುರುತಿಸಿ ಪ್ರೋತ್ಸಾಹ ಧನ ನೀಡುವ ಬಗ್ಗೆ ಮುಖ್ಯ ಮಂತ್ರಿಗಳೊಂದಿಗೆ ಮಾತನಾಡುವುದಾಗಿ ನಾರಾಯಣಗೌಡರು ತಿಳಿಸಿದರು.

ಖಾಯಮಾತಿ: ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕೆಂ ಬುದು ಹಳೇ ಬೇಡಿಕೆಯಾಗಿದ್ದು, ಆ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಹಣಕಾಸು ಇಲಾಖೆ ಸಮ್ಮತಿ ಪಡೆದು ತೀರ್ಮಾನಿಸಬೇಕಾಗಿದೆ ಎಂದರು.

ಈಗ ಪ್ರತೀ 700 ಮಂದಿ ಜನಸಂಖ್ಯೆ ಗೊಬ್ಬರಂತೆ ಪೌರಕಾರ್ಮಿಕರು ಕೆಲಸ ಮಾಡುತ್ತಿರುವುದರಿಂದ ಕಾರ್ಯ ದೊತ್ತ ಡದ ಕಾರಣ ಪ್ರತೀ 500 ಮಂದಿ ಜನರಿ ಗೊಬ್ಬರಂತೆ ಪೌರಕಾರ್ಮಿಕರನ್ನು ನೇಮಿಸಬೇಕೆಂಬ ಅವರ ಬೇಡಿಕೆ ಬಗ್ಗೆ ಪರಿಶೀಲಿಸಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಪೌರಾಡಳಿತ ಸಚಿವ ನಾರಾ ಯಣಗೌಡರು ತಿಳಿಸಿದರು.

ಪೌರಕಾರ್ಮಿಕರ ಕೆಲಸ ಅಗತ್ಯ ಸೇವೆ ಯಾಗಿದ್ದು, ಅವರಿಗೆ ಖಾಯಂ ಸಿಬ್ಬಂದಿ ರೀತಿಯಲ್ಲೇ ಸೌಲಭ್ಯ ನೀಡಬೇಕೆಂಬ ಕಾಳಜಿ ಸರ್ಕಾರಕ್ಕಿರುವುದರಿಂದ ಅವರ ಬಹುಕಾಲದ ಬೇಡಿಕೆಯನ್ನು ಸರ್ಕಾರ ಈಡೇರಿಸಲಿದೆ ಎಂದೂ ಇದೇ ಸಂದರ್ಭ ಭರವಸೆ ನೀಡಿದರು.

Translate »