ಸಂಸದ ವಿ. ಶ್ರೀನಿವಾಸಪ್ರಸಾದ್ ಭೇಟಿ ಮಾಡಿದ ಸಚಿವ ನಾರಾಯಣಗೌಡ
ಮೈಸೂರು

ಸಂಸದ ವಿ. ಶ್ರೀನಿವಾಸಪ್ರಸಾದ್ ಭೇಟಿ ಮಾಡಿದ ಸಚಿವ ನಾರಾಯಣಗೌಡ

June 16, 2020

ಮೈಸೂರು, ಜೂ. 15(ಆರ್‍ಕೆ)- ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ ಅವರು ಸೋಮವಾರ ಮಧ್ಯಾಹ್ನ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರ ಮನೆಗೆ ಭೇಟಿ ನೀಡಿ, ಪ್ರಸಾದರ ಕುಶಲೋಪರಿ ವಿಚಾರಿಸಿದರು.

ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಮೈಸೂರಿಗೆ ಆಗ ಮಿಸಿದ್ದರಿಂದ ಹಿರಿಯರು, ಸಂಸದರೂ ಆದ ಶ್ರೀನಿ ವಾಸಪ್ರಸಾದ್‍ರನ್ನು ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಿದ್ದೇನಷ್ಟೇ ಎಂದರು.

ಎ.ಹೆಚ್.ವಿಶ್ವನಾಥ್ ಅವರಿಗೆ ಮುಂದಿನ ದಿನ ಗಳಲ್ಲಿ ಒಳ್ಳೆಯದಾಗುತ್ತದೆ. ಆ ಬಗ್ಗೆ ಆಯಾ ಮಟ್ಟ ದಲ್ಲಿ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ಶಕ್ತಿ ತುಂಬುವ ಕೆಲಸವಾಗು ತ್ತಿದೆ ಎಂದು ಸಚಿವ ಸ್ಥಾನ ನೀಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪಕ್ಷದ ಹೈಕಮಾಂಡ್ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ತೀರ್ಮಾನಿಸುವ ವಿಶ್ವಾಸ ವಿದೆ. ನಾವೆಲ್ಲಾ ವರಿಷ್ಠರ ನಿಲುವಿಗೆ ಬದ್ಧರಾಗಿರು ತ್ತೇವೆ ಎಂದ ನಾರಾಯಣಗೌಡರು, ಇಲ್ಲಿ ಎಲ್ಲವೂ ಶಿಸ್ತುಬದ್ಧವಾಗಿಯೇ ನಡೆಯುತ್ತದೆ ಎಂದರು.

ಈ ಸಂಬಂಧ ಮಾತನಾಡಿದ ವಿ. ಶ್ರೀನಿವಾಸ ಪ್ರಸಾದ್, ನಮ್ಮನ್ನು ನಂಬಿ ಬಂದಿದ್ದಾರೆ ಮುಖ್ಯ ಮಂತ್ರಿ ಯಡಿಯೂರಪ್ಪರೊಂದಿಗೆ ಅವರು ಎಲ್ಲ ವನ್ನೂ ಮಾತನಾಡಿದ್ದಾರೆ, ನಾನೂ ಸಹ ಸಾಕಷ್ಟು ಸಲ ಮಾತುಕತೆ ನಡೆಸಿದ್ದೇನೆ. ಚುನಾವಣೆಯಲ್ಲಿ ಗೆದ್ದವರಿಗೆಲ್ಲಾ ಯಡಿಯೂರಪ್ಪನವರು ಸ್ಥಾನ ಕೊಟ್ಟಿದ್ದಾರೆ. ಈಗ ಸೋತವರೂ ಸಚಿವ ಸ್ಥಾನ ಕೇಳುತ್ತಿದ್ದಾರೆ. ಅವರು ಕೇಳುತ್ತಿರುವುದನ್ನು ಬೇಡ ಎನ್ನೋಣವೇ? ಪಕ್ಷ ಸೇರುವಾಗ ಏನು ಮಾತು ಕೊಟ್ಟಿದ್ದಾರೋ ಅದು ಅವರಿಗೆ ಗೊತ್ತಿದೆ ಎಂದರು.

ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಸುಭದ್ರ ಸರ್ಕಾರವಿದೆ. ಯಡಿಯೂರಪ್ಪನವರು ಇನ್ನೂ ಮೂರು ವರ್ಷ ಮುಖ್ಯಮಂತ್ರಿಗಳಾಗಿರುತ್ತಾರೆ. ಎಲ್ಲರೂ ಪಕ್ಷದಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ಆದ್ದ ರಿಂದ ಭಿನ್ನಮತ ಎಂಬುದಿಲ್ಲ ಎಂದು ಪ್ರಸಾದ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Translate »