ಮೈಸೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಳ
ಮೈಸೂರು

ಮೈಸೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಳ

November 16, 2021

ಮೈಸೂರು, ನ.೧೫ (ಆರ್‌ಕೆ)- ಮೈಸೂರು ವಿಶ್ವವಿದ್ಯಾನಿಲಯದ ವಿವಿಧ ಕೋರ್ಸುಗಳಿಗೆ ಪ್ರವೇಶ ಪಡೆಯು ವವರ ಸಂಖ್ಯೆ ಇದೀಗ ಗಣನೀಯವಾಗಿ ಹೆಚ್ಚಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ೨ ವರ್ಷದಿಂದ ಪ್ರವೇಶಾತಿ ಕುಸಿದಿತ್ತು.
ಕೋವಿಡ್ ಆರಂಭಕ್ಕೂ ಮುನ್ನ ೨೦೧೯ ರಲ್ಲಿ ವಿಶ್ವದಾದ್ಯಂತ ೫೮ ರಾಷ್ಟçಗಳ ೭೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದು ಮೈಸೂರು ವಿಶ್ವವಿದ್ಯಾನಿಲಯದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿ ದ್ದರು. ೨೦೨೦ರಲ್ಲಿ ಕೊರೊನಾ ಲಾಕ್ ಡೌನ್ ಆದ ಕಾರಣ ಅವರನ್ನು ವಾಪಸ್ ಅವರವರ ದೇಶಗಳಿಗೆ ಕಳುಹಿಸಲಾಗಿತ್ತು ಎಂದು ಮೈಸೂರು ವಿಶ್ವವಿದ್ಯಾನಿಲಯದ ಅಂತರರಾಷ್ಟಿçÃಯ ಕೇಂದ್ರದ (Iಟಿಣeಡಿಟಿಚಿ ಣioಟಿಚಿಟ ಅeಟಿಣಡಿe) ನಿರ್ದೇಶಕ, ಸಸ್ಯಶಾಸ್ತç ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಜನಾ ರ್ಧನ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

೨ನೇ ವರ್ಷವೂ ಕೊರೊನಾ ಸೋಂಕು ತೀವ್ರಗೊಂಡ ಹಿನ್ನೆಲೆಯಲ್ಲಿ ವಿದೇಶಿ ವಿದ್ಯಾರ್ಥಿಗಳು ಈ ವರ್ಷ (೨೦೨೧)ವೂ ಕೇವಲ ೩೧೧ ಮಂದಿ ವಿವಿಧ ಕೋರ್ಸು ಗಳಿಗೆ ಪ್ರವೇಶ ಪಡೆದಿದ್ದರಾದರೂ ಹಲವು ತಿಂಗಳ ಕಾಲ ಭೌತಿಕ ತರಗತಿಗಳು ನಡೆಯ ಲಿಲ್ಲ. ಇದೀಗ ಕೋವಿಡ್ ಪಾಸಿಟಿವ್ ಪ್ರಕ ರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿ ರುವುದರಿಂದ ಈವರೆಗೆ ೬೦೦ ಮಂದಿ ಪದವಿ, ಪಿಎಚ್.ಡಿ ಕೋರ್ಸುಗಳಿಗೆ ಪ್ರವೇಶ ಪಡೆ ದಿದ್ದಾರೆ. ಮುಂದಿನ ವರ್ಷದ ಜನವರಿಗೆ ಮತ್ತೆ ಪಿಜಿ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯಲಿದ್ದು, ೧೦೦೦ರಿಂದ ೧,೧೦೦ ವಿದೇಶಿ ವಿದ್ಯಾರ್ಥಿಗಳು ಆ ವೇಳೆ ಸೇರಿಕೊಳ್ಳುವ ನಿರೀಕ್ಷೆ ಇದೆ ಎಂದರು. ಭಾರತ ದೇಶದಲ್ಲಿ ಆಂತರಿಕವಾಗಿ ವಿಮಾನಗಳ ಹಾರಾಟ ಆರಂಭವಾಗಿದೆ, ವಿದೇಶಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಮತ್ತೆ ಕಾಣ ಸಿ ಕೊಳ್ಳುತ್ತಿರುವುದರಿಂದ ಅಂತರರಾಷ್ಟಿçÃಯ ವಿಮಾನ ಹಾರಾಟಕ್ಕೆ ಅನುಮತಿ ನೀಡಿಲ್ಲ, ನಿಯಮ ಸಡಿಲವಾದಲ್ಲಿ ಹೆಚ್ಚಿನ ಸಂಖ್ಯೆಯ ವಿದೇಶಿ ವಿದ್ಯಾರ್ಥಿಗಳು ಮೈಸೂರಿಗೆ ಬರಲಿದ್ದಾರೆ ಎಂದು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದರು.

Translate »