ಚಾಮರಾಜ ಒಡೆಯರ್ ಪ್ರತಿಮೆಗೆ ಹೊಸ ಖಡ್ಗ ಶೀಘ್ರ ಜೋಡಣೆ
ಮೈಸೂರು

ಚಾಮರಾಜ ಒಡೆಯರ್ ಪ್ರತಿಮೆಗೆ ಹೊಸ ಖಡ್ಗ ಶೀಘ್ರ ಜೋಡಣೆ

November 16, 2021

ಅಂತಿಮ ಹಂತದಲ್ಲಿ ಖಡ್ಗ ಕೆತ್ತನೆ ಕಾರ್ಯ

ರಾತ್ರಿ ವೇಳೆ ಖಡ್ಗ ಜೋಡಣೆಗೆ ಸಿದ್ಧತೆ

ಮೈಸೂರು, ನ.೧೫(ಜಿಎ)- ಈ ಬಾರಿಯ ದಸರಾ ಜಂಬೂಸವಾರಿ ದಿನ ಜನರ ನೂಕು ನುಗ್ಗಲು ವೇಳೆ ತುಂಡಾ ಗಿದ್ದ ಮೈಸೂರು ಅರಮನೆಯ ಬಲ ರಾಮ ದ್ವಾರದ ಎದುರಿನ ವೃತ್ತದ ಚಾಮ ರಾಜ ಒಡೆಯರ್ ಪ್ರತಿಮೆಯ ಖಡ್ಗವನ್ನು ಹೊಸದಾಗಿ ಅಳವಡಿಸುವ ಸಿದ್ಧತೆ ಆರಂಭ ವಾಗಿದೆ. ಹೊಸ ಖಡ್ಗ ಕೆತ್ತನೆಯ ಕಾರ್ಯ ಅಂತಿಮ ಹಂತ ತಲುಪಿದೆ.

ಮೈಸೂರಿನ ಖ್ಯಾತ ಶಿಲ್ಪಿ ಯೋಗಿರಾಜ್ ಅವರ ಹಿರಿಯ ಪುತ್ರ ವೈ. ಸೂರ್ಯ ಪ್ರಕಾಶ್ ಇಟಾಲಿಯನ್ ಮಾರ್ಬಲ್‌ನಲ್ಲಿ ಖಡ್ಗ ರೂಪಿಸುತ್ತಿದ್ದು, ಸಣ್ಣ ಪುಟ್ಟ ಕೆಲಸ ಮಾತ್ರ ಬಾಕಿ ಉಳಿದಿದೆ. ಎರಡು ದಿನ ಗಳಲ್ಲಿ ಪೂರ್ಣ ಮಾಡಿ ನಂತರ, ಖಡ್ಗ ವನ್ನು ಮರುಜೋಡಣೆ ಮಾಡಲಾಗು ವುದು ಎಂದು ಸೂರ್ಯಪ್ರಕಾಶ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಕತ್ತಿ ಜೋಡಣೆಗೆ ರಾತ್ರಿಯೇ ಸೂಕ್ತ : ಖಡ್ಗ ತುಂಡಾಗಿದ್ದರಿAದ ಅದರ ದುರಸ್ತಿಗೆ ಬದಲು ಹೊಸ ಖಡ್ಗ ಮರು ಜೋಡಣೆೆ ಮಾಡಲಾಗುತ್ತಿದೆ. ಪ್ರತಿಮೆಗೆ ಯಾವುದೇ ಚ್ಯುತಿ ಬಾರದಂತೆ ಈ ಕಾರ್ಯ ಮಾಡಲಾ ಗುವುದು. ಪ್ರತಿ ಬಾರಿ ಖಡ್ಗ ತುಂಡಾದಾಗ ಅದನ್ನು ಅಂಟಿಸಲಾಗುತ್ತಿತ್ತು. ಆದರೆ, ಈ ಬಾರಿ ಹೊಸ ಖಡ್ಗ ರೂಪಿಸಿ ಸ್ಕೂçಗಳ ಬಳಸಿ ಜೋಡಣೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಒಡೆಯರ್ ಪ್ರತಿ ಮೆಯ ಖಡ್ಗಕ್ಕೆ ತೊಂದರೆ ಆಗಬಾರದು ಎಂದು ಈ ರೀತಿ ಮಾಡಲಾಗುತ್ತಿದೆ. ಖಡ್ಗವನ್ನು ಹಗಲಲ್ಲಿ ಜೋಡಣೆ ಮಾಡಲು ಸುಮಾರು ೪ ತಾಸು ಹಿಡಿಯುತ್ತದೆ. ಆ ಸಂದರ್ಭದಲ್ಲಿ ಜನ ಜಮಾಯಿ ಸುವುದು ಟ್ರಾಫಿಕ್ ಜಾಮ್ ಕೂಡ ಆಗ ಬಹುದು. ಆದ್ದರಿಂದ ಖಡ್ಗ ಜೋಡಣೆಗೆ ರಾತ್ರಿಯೇ ಸೂಕ್ತ ಸಮಯ. ಕೇವಲ ೩ ತಾಸಿ ನಲ್ಲಿ ಜೋಡಣೆÉ ಕಾರ್ಯ ಮಾಡಬಹುದು. ನಮ್ಮ ತಂಡದ ಸದಸ್ಯರು ವಿವಿಧ ದೇವಾ ಲಯಗಳ ಕೆತ್ತನೆಯ ಕಾರ್ಯಕ್ಕೆ ದೇಶದ ನಾನಾ ಭಾಗಕ್ಕೆ ತೆರಳಿರುವುದರಿಂದ ಖಡ್ಗ ಜೋಡಣೆ ತಡವಾಗಿದೆ ಎಂದು ತಿಳಿಸಿದರು.

೪೮ ಸಾವಿರ ಖರ್ಚು: ಪಾಲಿಕೆ ವಲಯ ಕಚೇರಿಯ ೬ರ ಕಿರಿಯ ಇಂಜಿನಿಯರ್ ಎಂ. ಕವಿತಾ ‘ಮೈಸೂರು ಮಿತ’್ರನೊಂದಿಗೆ ಮಾತನಾಡಿ, ಸುಮಾರು ೪೮ ಸಾವಿರ ರೂ. ವೆಚ್ಚದಲ್ಲಿ ಖಡ್ಗ ನಿರ್ಮಾಣವಾಗುತ್ತಿದೆ. ಚಾಮರಾಜ ಒಡೆಯರ್ ಪ್ರತಿಮೆ ಸುತ್ತಲೂ ಇರುವ ಮೆಟ್ಟಿಲುಗಳ ಮಾರ್ಬಲ್ ಸಹ ತುಂಡಾಗಿದ್ದು, ಇಲ್ಲಿ ಬಳಸಿರುವ ಮಾರ್ಬಲ್ ಕಲ್ಲುಗಳು ದೊರೆಯುತ್ತಿಲ್ಲ. ಅದರ ಮಾಹಿತಿ ಕಲೆ ಹಾಕಲಾಗುತ್ತಿದೆ. ಅದು ಸಿಗದಿದ್ದರೆ ರಾಜಪಥಕ್ಕೆ ಬಳಸಿರುವ ಕಲ್ಲು ಗಳನ್ನೆ ಬಳಸಿ ದುರಸ್ತಿ ಮಾಡಲಾಗು ವುದು ಎಂದರು.

ಜAಬೂಸವಾರಿ ವೇಳೆ ತುಂಡಾಗಿದ್ದ ಖಡ್ಗ: ಕೋವಿಡ್ ಹಿನ್ನಲೆಯಲ್ಲಿ ಈ ಬಾರಿಯ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಿ ಅ. ೧೫ರಂದು ಜಂಬೂಸವಾರಿಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿತ್ತು. ಅಲ್ಲದೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಅರಮನೆ ಒಳಗೆ ನಡೆಯುತ್ತಿದ್ದ ಜಂಬೂಸವಾರಿಯನ್ನು ದ್ವಾರಗಳ ಮೂಲಕ ವೀಕ್ಷಿಸುವ ಭರದಲ್ಲಿ ಚಾಮರಾಜ ಒಡೆಯರ್ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ವೇಳೆ ಉಂಟಾಗಿದ್ದ ನೂಕು-ನುಗ್ಗಲು ಉಂಟಾಗಿತ್ತು. ಕೆಲವರು ಚಾಮರಾಜ ಒಡೆಯರ್ ಪ್ರತಿಮೆ ಮೇಲೇರಿ ಜಂಬೂಸವಾರಿ ವೀಕ್ಷಿಸಲು ಯತ್ನಿಸಿದ್ದರಿಂದ ಪ್ರತಿಮೆಗೆ ಅಳವಡಿಸಿದ ಇಟಾಲಿಯನ್ ಮಾರ್ಬಲ್‌ನ ಖಡ್ಗ ತುಂಡಾಗಿತ್ತು. ಪ್ರತಿಮೆಯ ರಕ್ಷಣೆಯ ತಡೆಗೋಡೆಯೂ ಕೂಡ ಹಾಳಾಗಿತ್ತು. ಒಡೆಯರ್ ಪ್ರತಿಮೆಯ ಖಡ್ಗ ತುಂಡಾಗಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿ ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು.

ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ತುಂಡಾಗಿದ್ದ ಖಡ್ಗವನ್ನು ಶಿಲ್ಪಿ ವೈ. ಸೂರ್ಯಪ್ರಕಾಶ್ ಅವರಿಂದ ತೆರವುಗೊಳಿಸಿ, ಇಟಾಲಿಯನ್ ಮಾರ್ಬಲ್ ನಿಂದಲೇ ಹೊಸದಾಗಿ ಖಡ್ಗವನ್ನು ಅಳವಡಿಸಲಾಗುತ್ತಿದೆ.
ಪ್ರತಿಮೆಯ ಇತಿಹಾಸ : ಮೊದಲು ಇಂಗ್ಲೆAಡ್‌ನ ಶಿಲ್ಪಿ ವಿಲಿಯಂ ರಾಬರ್ಟ್ ಕೊಲ್ಟನ್, ಇಟಾಲಿಯನ್ ಮಾರ್ಬಲ್‌ನಲ್ಲಿ ಇಂಗ್ಲೆAಡ್‌ನಲ್ಲಿ ಚಾಮರಾಜ ಒಡೆಯರ್ ಅವರ ಪ್ರತಿಮೆಯನ್ನು ರೂಪಿಸಿ, ೧೯೧೮ರಲ್ಲಿ ಮೈಸೂರಿಗೆ ತಂದರು. ಮುಖ ಮಹಾರಾಜರನ್ನು ಹೋಲದ ಕಾರಣ ಭಾರತೀಯ ಖ್ಯಾತ ಶಿಲ್ಪಿ ಗಣಪತರಾವ್ ಕೆ. ಮಹತ್ರೆ ಅವರು ಶಿರ ಭಾಗವನ್ನು ಮಾತ್ರ ಹೊಸದಾಗಿ ರೂಪಿಸಿ, ಮೂಲ ಪ್ರತಿಮೆಗೆ ಅಳವಡಿಸಿದರು. ಅಂತಿಮವಾಗಿ ೧೯೨೦ರಲ್ಲಿ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು.

Translate »