ಶ್ರೀರಂಗಪಟ್ಟಣದ ಐತಿಹಾಸಿಕ ಸೆಂದಿಲ್ ಕೋಟೆ ಕುಸಿತ
ಮೈಸೂರು

ಶ್ರೀರಂಗಪಟ್ಟಣದ ಐತಿಹಾಸಿಕ ಸೆಂದಿಲ್ ಕೋಟೆ ಕುಸಿತ

November 16, 2021

ಶ್ರೀರಂಗಪಟ್ಟಣ, ನ.೧೫(ವಿನಯ್ ಕಾರೇಕುರ)- ಕಳೆದ ಕೆಲ ದಿನಗಳಿಂದ ಸುರಿ ಯುತ್ತಿರುವ ಭಾರೀ ಮಳೆಗೆ ವಿಜಯ ನಗರ ಅರಸರ ಕಾಲದಲ್ಲಿ ನಿರ್ಮಿಸಿದ್ದ ಪಟ್ಟಣದ ಐತಿಹಾಸಿಕ ಸೆಂದಿಲ್ ಕೋಟೆಯ ಒಂದು ಭಾಗ ಕುಸಿದಿದ್ದು, ಇನ್ನೂ ಐದಾರು ಕಡೆ ಬಿರುಕು ಬಿಟ್ಟಿದೆ. ಧಾರಾಕಾರ ಮಳೆಗೆ ಶ್ರೀರಂಗನಾಥಸ್ವಾಮಿ ದೇವಾಲಯದ ಪೂರ್ವ ಭಾಗದಲ್ಲಿರುವ ಕೋಟೆಯ ಭಾಗ ಕುಸಿದಿದ್ದು, ಇನ್ನೂ ಅನೇಕ ಕಡೆ ಕುಸಿಯುವ ಅಪಾಯ ಎದುರಾಗಿದೆ. ಪ್ರಾಚ್ಯವಸ್ತು ಇಲಾಖೆ ಈ ಸ್ಮಾರಕವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹಾಗಾಗಿ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೀಗೆ ಮುಂದುವರೆದರೆ ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಕೋಟೆ ಕೊತ್ತಲುಗಳನ್ನು ಒಂದೊAದಾಗಿಯೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಪಟ್ಟಣ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೊAದು ದಿನ ಮುಂದಿನ ಪೀಳಿಗೆಗೆ ಶ್ರೀರಂಗಪಟ್ಟಣದಲ್ಲಿ ಕೋಟೆ ಕೊತ್ತಲಗಳಿದ್ದವು ಎಂದು ಪುಸ್ತಕಗಳಲ್ಲಿ ತೋರಿಸುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಕೂಡಲೇ ಸಂಬAಧಪಟ್ಟ ಇಲಾಖೆಯ ಅಧಿಕಾರಿ ವರ್ಗ ಎಚ್ಚೆತ್ತು ಶಿಥಿಲಾವಸ್ಥೆಯಲ್ಲಿರುವ ಹಳೆಯ ಸ್ಮಾರಕಗಳ ರಕ್ಷಣೆಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Translate »