ಕುರಿಗಳ ಮಾದರಿ ಶಾಲಾ ಮಕ್ಕಳ ಸಾಗಾಟ
ಮೈಸೂರು

ಕುರಿಗಳ ಮಾದರಿ ಶಾಲಾ ಮಕ್ಕಳ ಸಾಗಾಟ

November 16, 2021

ಮೈಸೂರು,ನ.೧೫(ಎಸ್‌ಬಿಡಿ)- ಕೊರೊನಾ ಸೋಂಕು ತಗ್ಗಿದ್ದರೂ ಸಂಪೂರ್ಣ ಶಮನವಾಗಿಲ್ಲ. ಈ ವೇಳೆ ಶಾಲೆಗೆ ಹೋಗಿಬರುವ ಮಕ್ಕಳ ಸುರಕ್ಷತೆ ಬಗ್ಗೆ ಪರಾಮರ್ಶೆ ನಡೆಸುವುದು ಅನಿವಾರ್ಯವಾಗಿದೆ.

ಹಂತಹAತವಾಗಿ ಶಾಲಾ-ಕಾಲೇಜು ಪುನಾರಂಭಕ್ಕೆ ಅನುಮತಿ ನೀಡಿದ ರಾಜ್ಯ ಸರ್ಕಾರ, ಕೊರೊನಾ ನಿಯಂತ್ರಣ ಸಂಬAಧ ಮಾರ್ಗಸೂಚಿಯನ್ನು ಪರಿಪಾಲಿ ಸುವುದರೊಂದಿಗೆ ಸುರಕ್ಷಿತವಾಗಿ ತರಗತಿ ನಡೆಸುವಂತೆ ಸೂಚನೆ ನೀಡಿ, ಕೈ ತೊಳೆದುಕೊಂಡಿದೆ. ಇದರಂತೆ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಂಡಿರ ಬಹುದು. ಆದರೆ ಶಾಲೆಗೆ ಹೋಗಿಬರುವ ಸಂದರ್ಭ ದಲ್ಲಿ ಮಕ್ಕಳು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಆದರೆ ಶಿಕ್ಷಣ, ಸಾರಿಗೆ ಹಾಗೂ ಪೊಲೀಸರ ನಿರ್ಲಕ್ಷö್ಯದಿಂದಾಗಿ ಅಮಾಯಕ ಮಕ್ಕಳು ಅಪಾಯಕ್ಕೀಡಾಗುವ ಸಂಭವ ಇದೆ.

ಮಕ್ಕಳು ಕುರಿಗಳಲ್ಲ: ಮೈಸೂರಿನಲ್ಲಿ ಶಾಲೆ ಆರಂಭವಾಗುವ ಮುನ್ನ ಅಂದರೆ ಬೆಳಗ್ಗೆ ಸುಮಾರು ೯ ಗಂಟೆ ವೇಳೆಗೆ ಹಾಗೂ ಶಾಲೆ ಬಿಡುವ ಮುನ್ನ ಅಂದರೆ ಸಂಜೆ ೪ ಗಂಟೆ ಸಮಯಕ್ಕೆ ಖಾಸಗಿ ಶಾಲೆಗಳ ಬಳಿ ಹೋಗಿ ಗಮನಿಸಿದರೆ ಮಕ್ಕಳು ಎಂತಹ ಅಪಾಯ ಪರಿಸ್ಥಿತಿಯಲ್ಲಿ ಶಾಲೆಗೆ ಬಂದು ಹೋಗುತ್ತಿದ್ದಾರೆ ಎನ್ನುವುದು ಮನವರಿಕೆಯಾಗುತ್ತದೆ. ವಾಹನಗಳಲ್ಲಿ ಮಕ್ಕಳನ್ನು ಕುರಿಗಳಂತೆ ತುಂಬಿಕೊAಡು ಬರುವ ಹೀನಾಯ ದೃಶ್ಯ ಆತಂಕ ಮೂಡಿಸುತ್ತದೆ. ಪುಸ್ತಕಗಳು, ಕಲಿಕಾ ಸಾಮಗ್ರಿ ಗಳಿರುವ ತಮಗಿಂತ ಭಾರವಾದ ಬ್ಯಾಗ್, ಊಟದ ಡಬ್ಬಿ ಇರುವ ಮತ್ತೊಂದು ಬ್ಯಾಗ್ ಹಿಡಿದು ಒಬ್ಬರ ಹಿಂದೆ ಒಬ್ಬರು ವಾಹನದಿಂದ ಕೆಳಗಿಳಿಯುವುದನ್ನು ನೋಡಿದರೆ ಅವುಗಳ ನರಕಯಾತನೆ ಅರ್ಥವಾಗುತ್ತದೆ.

ನಿಯಮಕ್ಕೆ ಎಳ್ಳು-ನೀರು: ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಮಿತಿಮೀರಿದ ಸಂಖ್ಯೆಯಲ್ಲಿ ಕರೆದೊಯ್ಯುವ ಕೃತ್ಯ ಹೊಸತಲ್ಲ. ಈ ಹಿಂದೆ

ಸಾರಿಗೆ ಇಲಾಖೆ, ಸಂಚಾರ ಪೊಲೀಸರು ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಖಾಸಗಿ ವಾಹನಗಳ ಚಾಲಕರು ಹಾಗೂ ಮಾಲೀಕರಿಗೆ ಮಾರ್ಗಸೂಚಿ ನೀಡಿ, ಕಡ್ಡಾಯವಾಗಿ ಪರಿಪಾಲಿಸುವಂತೆ ಸೂಚಿಸಲಾಗಿತ್ತು. ನಿಯಮ ಮೀರಿದವರ ವಾಹನ ಪರವಾನಗಿ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ ದಿಢೀರ್ ತಪಾಸಣೆ ನಡೆಸಿ, ಕೆಲವರಿಗೆ ದಂಡ ಹಾಕಿ ಬಿಸಿಮುಟ್ಟಿಸಲಾಗಿತ್ತು.

ಈಗ ನಿರ್ಲಕ್ಷಿಸಲಾಗದು: ವಾಹನಗಳಲ್ಲಿ ಮಿತಿಮೀರಿದ ಸಂಖ್ಯೆಯಲ್ಲಿ ತುಂಬಿಕೊAಡರೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮವಾಗಬಹುದು, ಅಪಘಾತ ಸಂಭವಿಸುವ ಸಾಧ್ಯತೆಯೂ ಇರುತ್ತದೆ ಎಂಬ ಕಾರಣಕ್ಕೆ ಈ ಹಿಂದೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ತುಂಬಾ ಸೂಕ್ಷö್ಮವಾಗಿ ಪರಿಗಣಿಸಬೇಕು. ಕೊರೊನಾ ಸೋಂಕು ತಗ್ಗಿದ್ದರೂ ಇನ್ನೂ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ೧೮ ವರ್ಷದೊಳಗಿನವರಿಗೆ ಲಸಿಕೆಯನ್ನೂ ನೀಡಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲಾ-ಕಾಲೇಜು ಆರಂಭಿಸಲಾಗಿದ್ದರೂ ತುಂಬಾ ಎಚ್ಚರಿಕೆ ವಹಿಸುವುದು ಅವಶ್ಯವಾಗಿದೆ. ಆದರೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕರೆತರುವ ಖಾಸಗಿ ವಾಹನಗಳು ಸಾರಿಗೆ ಇಲಾಖೆ ನಿಯಮ ದಿಕ್ಕರಿಸಿ ಕುರಿಗಳಂತೆ ಮಕ್ಕಳನ್ನು ವಾಹನಗಳಲ್ಲಿ ತುಂಬಿಕೊAಡು ಬರುವ ಅತ್ಯಂತ ಹೀನಾಯ ಪರಿಸ್ಥಿತಿ ಮತ್ತೆ ಆರಂಭವಾಗಿದೆ. ಪುಟ್ಟ ಓಮಿನಿ ವ್ಯಾನ್‌ನಲ್ಲಿ ೨೦-೨೫ ಮಕ್ಕಳನ್ನು ತುಂಬಿಕೊAಡು ಬರುವುದು ಕಂಡುಬರುತ್ತಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕೆಂಬ ಸರ್ಕಾರದ ಗೀತೋಪದೇಶ ಮಾಯವಾಗಿದೆ. ಇದರಿಂದ ಸೋಂಕು ಹರಡುವ ಭೀತಿ ಪೋಷಕರಲ್ಲಿ ಹೆಚ್ಚಾಗಿದೆ.

ಲಿಖಿತ ದೂರು ಬೇಕಂತೆ: ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ವಹಿಸಿ, ತರಗತಿ ನಡೆಸುವಂತೆ ಸರ್ಕಾರ ಆದೇಶಿಸಿ, ನಂತರ ಮೌನವಾಗಿದೆ. ಇತ್ತ ಸರ್ಕಾರದ ಆದೇಶವನ್ನು ಜಾರಿಗೊಳಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳ ಇಂತಹ ಹೀನಾಯ ಪರಿಸ್ಥಿತಿ ಕಂಡೂ ಕಾಣದಂತಿದ್ದಾರೆ. ಪೊಲೀಸರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದರೆ `ಮಕ್ಕಳನ್ನು ಶಾಲೆಗೆ ಸುರಕ್ಷಿತವಾಗಿ ಕಳುಹಿಸುವುದು ಪೋಷಕರ ಜವಾಬ್ದಾರಿ. ಈ ವಿಷಯದಲ್ಲಿ ನಾವೇನು ಮಾಡಲಾಗದು’ ಎಂದು ನುಣುಚಿಕೊಳ್ಳುತ್ತಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರಿಗೆ ಈ ಗಂಭೀರ ಸಮಸ್ಯೆಯನ್ನು ತಿಳಿಸಿ, ಮೌಖಿಕವಾಗಿ ದೂರು ನೀಡಿದರೆ ಅವರು ಪರಿಗಣಿಸುತ್ತಿಲ್ಲ. ಕಚೇರಿ ಹಾಗೂ ಠಾಣೆಗೆ ಬಂದು ಲಿಖಿತವಾಗಿ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹಾಗೇನಾದರೂ ನಾವು ಲಿಖಿತ ದೂರು ನೀಡಿದರೆ ನಮ್ಮ ಮಕ್ಕಳಿಗೆ ಯಾವುದೇ ರೀತಿಯಲ್ಲಾದರೂ ತೊಂದರೆಯಾಗಬಹುದು ಎನ್ನುವ ಆತಂಕವಿದೆ. ಮಕ್ಕಳನ್ನು ಕರೆದೊಯ್ಯುವ ವಾಹನ ಚಾಲಕರಿಗೆ ಮನವರಿಕೆ ಮಾಡುವ ಪ್ರಯತ್ನವೂ ಸಫಲವಾಗಿಲ್ಲ ಎಂದು ಖಾಸಗಿ ಶಾಲೆಯೊಂದರ ಮಗುವಿನ ಪೋಷಕರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

 

Translate »