ಮೇಲುಕೋಟೆ ಪುಣ್ಯಕ್ಷೇತ್ರದಲ್ಲಿ ಚಿತ್ರೀಕರಣ ನಿಷೇಧ
ಮೈಸೂರು

ಮೇಲುಕೋಟೆ ಪುಣ್ಯಕ್ಷೇತ್ರದಲ್ಲಿ ಚಿತ್ರೀಕರಣ ನಿಷೇಧ

November 16, 2021

ಮೇಲುಕೋಟೆ, ನ. ೧೫- ಮೇಲು ಕೋಟೆಯಲ್ಲಿ ಚಲನ ಚಿತ್ರಗಳ ಚಿತ್ರೀಕರಣ ನಿಷೇಧಿಸಲು ನಿರ್ಧ ರಿಸಲಾಗಿದೆ ಎಂದು ಪುರಾತತ್ವ ಸಂಗ್ರ ಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತೆ ಪೂಣ ðಮಾ ತಿಳಿಸಿದ್ದಾರೆ.
ತೆಲುಗು ಚಿತ್ರದ ಚಿತ್ರೀಕರಣದ ವೇಳೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರು ವುದು ಹಾಗೂ ಕಲ್ಯಾಣ ಕಲುಷಿತ ಗೊಂಡಿ ರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಅವರು ಪತ್ರಕರ್ತರು ಹಾಗೂ ಪರಿಸರ ಪ್ರೇಮಿಗಳಿಗೆ ಈ ಮಾಹಿತಿ ನೀಡಿದರು. ಇದಕ್ಕೂ ಮುನ್ನ ಚಿತ್ರತಂಡ ದಿಂದ ಉಂಟಾಗಿದ್ದ ಅವಾಂತರದ ಮಾಹಿತಿ ತಿಳಿಯುತ್ತಿದ್ದಂತೆಯೇ ತಮ್ಮ ಇಲಾಖೆಯ ಇಂಜಿನಿಯರ್ ಸುರೇಶ್ ಮತ್ತು ಆರ್ಕಿಯಾಲಜಿಸ್ಟ್ ಎನ್.ಎಲ್. ಗೌಡ ಅವರನ್ನು ಮೇಲುಕೋಟೆಗೆ ಕಳು ಹಿಸಿ ಅವರಿಂದ ಪ್ರಾಥಮಿಕ ವರದಿಯನ್ನು

ತರಿಸಿಕೊಂಡಿದ್ದರು. ಅಷ್ಠ ತೀರ್ಥೋತ್ಸವ ದಂದು ಚೆಲುವನಾರಾಯಣಸ್ವಾಮಿ ಉತ್ಸವಕ್ಕೆ ಚಿತ್ರ ತಂಡ ಅಡಚಣೆ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದೆ. ಇಲಾಖೆಯ ನಿಯಮ ಮೀರಿ ಸ್ಮಾರಕವಾಗಿರುವ ಕಲ್ಯಾಣ ಬಳಿ ಕ್ರೇನ್ ಬಳಸಿ ಚಿತ್ರೀಕರಣ ನಡೆಸಲಾ ಗಿದೆ. ಇನ್‌ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿಯವರು ಕಲ್ಯಾಣ ಜೀರ್ಣೋ ದ್ಧಾರ ಮಾಡಿ
ಗಾರ್ಡನ್‌ಗಾಗಿ ಮೀಸಲಿಟ್ಟಿದ್ದ ಸ್ಥಳಕ್ಕೆ ಧಕ್ಕೆಯುಂಟು ಮಾಡಲಾಗಿದೆ ಎಂಬ ಮಾಹಿತಿಗಳು ಬಂದಿವೆ. ಈ ಕಾರಣಕ್ಕಾಗಿ ಚಿತ್ರತಂಡಕ್ಕೆ ನೋಟಿಸ್ ನೀಡುವ ಜೊತೆಗೆ ಚಿತ್ರೀಕರಣಕ್ಕಾಗಿ ಅವರು ಪಾವತಿಸಿದ್ದ ಠೇವಣ ಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದರು.ಪುಣ್ಯ ಕ್ಷೇತ್ರವಾದ ಮೇಲುಕೋಟೆಯಲ್ಲಿ ಚಿತ್ರೀಕರಣ ತಂಡಗಳಿAದ ಪದೇ ಪದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುತ್ತಿದೆ. ಅಲ್ಲದೆ ಇಲಾಖೆ ನಿಯಮಗಳನ್ನು ಉಲ್ಲಂಘಿಸಿ ಚಿತ್ರೀಕರಣ ಮಾಡುತ್ತಿರುವುದರಿಂದ ಸ್ಮಾರಕಗಳಿಗೆ ಧಕ್ಕೆಯುಂಟಾಗುವ ಅಪಾಯವಿದೆ. ಹೀಗಾಗಿ ಸ್ಮಾರಕಗಳನ್ನು ಸಂರಕ್ಷಿಸಲು ಮೇಲುಕೋಟೆಯಲ್ಲಿ ಚಿತ್ರೀಕರಣವನ್ನೇ ನಿಷೇಧಿಸಲಾಗುತ್ತಿದೆ. ಇದರಿಂದ ಕ್ಷೇತ್ರದ ಪಾವಿತ್ರö್ಯತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಪೂಣ ðಮಾ ತಿಳಿಸಿದರು.

ಕಲ್ಯಾಣ ಯ ಯಾವುದೇ ಕಂಬಗಳಿಗೆ ಹಾನಿಯಾಗಿಲ್ಲ. ಚಿತ್ರೀಕರಣಕ್ಕೆ ಬಳಸಿದ್ದ ಕ್ರೇನ್, ಮಳೆಯಿಂದಾಗಿ ಹೂತು ಹೋಗಿದ್ದನ್ನು ನಮ್ಮ ಸಿಬ್ಬಂದಿ ತೆರವು ಮಾಡಿಸಿದ್ದಾರೆ. ಚಿತ್ರೀಕರಣದ ವೇಳೆ ಕಲ್ಯಾಣ ಯಲ್ಲಿ ಬಳಕೆ ಮಾಡಲಾಗಿದ್ದ ಹೂವು, ಬಾಳೆಗೊನೆ ಇತರ ತ್ಯಾಜ್ಯಗಳನ್ನು ತೆರವುಗೊಳಿಸಿ, ಕಲ್ಯಾಣ ಸ್ವಚ್ಛ ಮಾಡಲಾಗಿದೆ. – ಮಂಗಳಮ್ಮ, ಕಾರ್ಯನಿರ್ವಾಹಕ ಅಧಿಕಾರಿ, ಚೆಲುವನಾರಾಯಣಸ್ವಾಮಿ ದೇವಸ್ಥಾನ
ಮೇಲುಕೋಟೆಯಲ್ಲಿ ಚಿತ್ರೀಕರಣ ತಂಡಗಳು ಮಾಡುತ್ತಿರುವ ಎಡವಟ್ಟುಗಳನ್ನು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಮೇಲುಕೋಟೆಯಲ್ಲಿ ಚಿತ್ರೀಕರಣವನ್ನೇ ನಿಷೇಧಿಸುವುದಾಗಿ ಆಯುಕ್ತರು ಹೇಳಿದ್ದಾರೆ. ಸ್ಮಾರಕಗಳ ಸಂರಕ್ಷಣೆಗಾಗಿ ಅವರ ನಿರ್ಧಾರ ಸ್ವಾಗತಾರ್ಹ. – ಸಂತೋಷ್ ಕೌಲಗಿ, ಪರಿಸರ ಪ್ರೇಮಿ, ಮೇಲುಕೋಟೆ

Translate »