ಪಾರಂಪರಿಕ ಸ್ಮಾರಕ, ದೇವಾಲಯಗಳ ರಕ್ಷಣೆ ವಿಷಯದಲ್ಲಿ ಪುರಾತತ್ವ ಇಲಾಖೆ ನಿರ್ಲಕ್ಷ್ಯ
ಮೈಸೂರು

ಪಾರಂಪರಿಕ ಸ್ಮಾರಕ, ದೇವಾಲಯಗಳ ರಕ್ಷಣೆ ವಿಷಯದಲ್ಲಿ ಪುರಾತತ್ವ ಇಲಾಖೆ ನಿರ್ಲಕ್ಷ್ಯ

November 16, 2021

ಮೇಲುಕೋಟೆಯಲ್ಲಿ ಚಿತ್ರ ತಂಡಗಳಿAದ ಅಪಚಾರ ಆರೋಪ
ಕಲ್ಯಾಣ ಗಳ ನೀರು ಕಲುಷಿತ ಧಾರ್ಮಿಕ ಕ್ಷೇತ್ರದಲ್ಲಿ ಸ್ಮಾರಕಗಳಿಗೆ ಧಕ್ಕೆ

ಮೇಲುಕೋಟೆ, ನ. ೧೫- ಪಾರಂಪ ರಿಕ ಸ್ಮಾರಕಗಳನ್ನು ರಕ್ಷಿಸುವುದು ಪುರಾತತ್ವ ಇಲಾಖೆಯ ಆದ್ಯ ಕರ್ತವ್ಯ. ದೇಶದಲ್ಲಿರುವ ಸ್ಮಾರಕಗಳು ಹಾಗೂ ಪುರಾತನ ಕಾಲದ ದೇವಾಲಯಗಳನ್ನು ರಕ್ಷಿಸುವ ಸಲುವಾಗಿ ಸರ್ಕಾರ ಈ ಇಲಾಖೆಯನ್ನು ಅಸ್ತಿತ್ವಕ್ಕೆ ತಂದಿದೆ. ಆದರೆ, ಪುರಾತತ್ವ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಮೇಲುಕೋಟೆಯ ಪಾರಂಪರಿಕ ತಾಣಗಳಿಗೆ ಧಕ್ಕೆಯುಂಟಾಗುತ್ತಿದೆ.
ಸ್ಮಾರಕಗಳ ಮುಂಭಾಗ ಅದಕ್ಕೆ ಧಕ್ಕೆಯುಂಟು ಮಾಡಬಾರದೆಂದು ಫಲಕವೊಂದನ್ನು ಅಳವಡಿಸಿಬಿಟ್ಟರೆ ನಮ್ಮ ಕರ್ತವ್ಯ ಮುಗಿಯಿತು ಎಂದು ಅಧಿಕಾರಿಗಳು ನಿರ್ಧರಿಸಿದಂತಿದೆ. ಅಷ್ಟಾ ದರೂ ಪರವಾಗಿಲ್ಲ. ಆದರೆ, ಸ್ಮಾರಕ ಗಳಿಗೆ ಧಕ್ಕೆಯಾಗುವಂತಹ ಚಟುವಟಿಕೆ ಗಳಿಗೆ ತಿಳಿದೂ ತಿಳಿದು ಪುರಾತತ್ವ ಇಲಾಖೆಯಿಂದ ಅನುಮತಿ ನೀಡುವ ಮೂಲಕ ಅಧಿಕಾರಿಗಳು ಬೇಜವಾಬ್ದಾರಿ ತನ ಮೆರೆದಿದ್ದಾರೆ. ಅದಕ್ಕೆ ಉದಾಹರಣೆ ಎಂಬAತೆ ಮೇಲುಕೋಟೆಯ ಪುರಾತನ ಕಲ್ಯಾಣ ಯಲ್ಲಿ ತೆಲುಗು ನಾಯಕ ನಟ ನಾಗಚೈತನ್ಯ ನಟಿಸುತ್ತಿರುವ ‘ಬಂಗಾರ ರಾಜು-೨’ ಚಿತ್ರದ ಚಿತ್ರೀಕರಣಕ್ಕೆ ಪುರಾತತ್ವ ಇಲಾಖೆ ಮತ್ತು ಮಂಡ್ಯ ಜಿಲ್ಲಾಧಿಕಾರಿ ಗಳು ಅನುಮತಿ ನೀಡಿದ್ದಾರೆ. ಕಳೆದ ೨ ದಿನಗಳಿಂದ ಕಲ್ಯಾಣ ಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಭಾನುವಾರ ಚೆಲುವ ನಾರಾಯಣಸ್ವಾಮಿ ಅಷ್ಟ ತೀರ್ಥೋತ್ಸವ ನಡೆದಿದ್ದು, ಈ ಉತ್ಸವಕ್ಕೂ ಚಿತ್ರ ತಂಡ ಅಡ್ಡಿಪಡಿಸಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಕಲ್ಯಾಣ ಯ ನೀರಿಗೆ ಬಣ್ಣ ಬೆರೆಸಿ ಹಾಗೂ ಮೆಟ್ಟಲಿಗೆ ಬಣ್ಣ ಬಳಿದು ಚಿತ್ರೀಕರಣ ನಡೆಸುವ ಮೂಲಕ ಕಲ್ಯಾಣ ಯನ್ನು ಕಲುಷಿತಗೊಳಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಚಿತ್ರ ತಂಡವು ಕ್ರೇನ್ ಬಳಸಿ ಕಲ್ಯಾಣ ಯಲ್ಲಿ ಚಿತ್ರೀಕರಣ ನಡೆಸಿದ್ದು,
ಭಾನುವಾರ ಸಂಜೆ ಸುರಿದ ಭಾರೀ ಮಳೆಗೆ ಧಾರಾ ಮಂಟಪದ ಮುಂಭಾಗದಲ್ಲಿ ಹೂವಿನ ತೋಟಕ್ಕಾಗಿ ಮೀಸಲಿಟ್ಟಿದ್ದ ಸ್ಥಳದಲ್ಲಿ ಕ್ರೇನ್ ಹೂತುಕೊಂಡಿದೆ. ನಂತರ ಅದನ್ನು ಅಲ್ಲಿಂದ ತೆರವುಗೊಳಿ ಸಲಾಗಿದೆ. ಮೇಲುಕೋಟೆಯ ಕಲ್ಯಾಣ ಯನ್ನು ಇನ್‌ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿಯವರು ಜೀರ್ಣೋ ದ್ಧಾರ ಮಾಡಿದ್ದರು. ಈ ಕಲ್ಯಾಣ ಯನ್ನು ಕಲುಷಿತಗೊಳಿಸಿರುವುದಲ್ಲದೆ, ಗಾರ್ಡನ್ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದ ಸ್ಥಳಕ್ಕೂ ಧಕ್ಕೆ ಉಂಟು ಮಾಡಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ತAಗಿಯ ಕೊಳ: ಎರಡು-ಮೂರು ತಿಂಗಳ ಹಿಂದೆ ಚಿತ್ರೀಕರಣ ತಂಡವೊAದು ತಂಗಿಯ ಕೊಳದ ನೀರಿಗೆ ಬಣ್ಣ ಬೆರೆಸಿದ ಪರಿಣಾಮ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಗಿಯ ಕೊಳದ ನೀರು ಕಲು ಷಿತಗೊಂಡಿತ್ತು. ಅಕ್ಕ-ತಂಗಿ ಕೊಳಗಳು ಅಕ್ಕಪಕ್ಕದಲ್ಲಿದ್ದು, ತಂಗಿ ಕೊಳದ ನೀರು ಸಿಹಿಯಾಗಿರುತ್ತದೆ. ಆದರೆ, ಅಕ್ಕನ ಕೊಳದ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. ಇವೆರಡೂ ಕೊಳಗಳ ಬಗ್ಗೆ ಭಕ್ತಾದಿಗಳಲ್ಲಿ ಧಾರ್ಮಿಕ ನಂಬಿಕೆ ಇದೆ. ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಹೇಳುವಂತೆ ಈವರೆವಿಗೂ ತಂಗಿಯ ಕೊಳದ ನೀರು ಕಲುಷಿತಗೊಂಡ ನಿದರ್ಶನವೇ ಇಲ್ಲ. ಆದರೆ, ಚಿತ್ರೀಕರಣ ತಂಡ ಮಾಡಿದ ಎಡವಟ್ಟಿನಿಂದ ಪವಿತ್ರ ತಂಗಿ ಕೊಳದ ನೀರು ಕಲುಷಿತವಾಗಿದೆ. ಅದನ್ನು ಶುದ್ಧಪಡಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ಎರಡು ದಿನಗಳ ಹಿಂದೆಯಷ್ಟೇ ಶಾಸಕ ಪುಟ್ಟರಾಜು ಹೇಳಿಕೆ ನೀಡಿದ್ದರು.

Translate »