ಮಳೆಯಿಂದ ದೇವರಾಜ ಮಾರುಕಟ್ಟೆ ಮತ್ತಷ್ಟು ಶಿಥಿಲ ಯಾವಾಗ ಬೇಕಾದರೂ ಅಪಾಯ ಸಂಭವಿಸುವ ಆತಂಕ
ಮೈಸೂರು

ಮಳೆಯಿಂದ ದೇವರಾಜ ಮಾರುಕಟ್ಟೆ ಮತ್ತಷ್ಟು ಶಿಥಿಲ ಯಾವಾಗ ಬೇಕಾದರೂ ಅಪಾಯ ಸಂಭವಿಸುವ ಆತಂಕ

November 17, 2021

ಮೈಸೂರು, ನ.೧೬(ಜಿಎ)- ಮೈಸೂರಿನ ಹೃದಯ ಭಾಗದಲ್ಲಿರುವ ಪಾರಂಪರಿಕ ದೇವ ರಾಜ ಮಾರುಕಟ್ಟೆ ಸುರಿಯುತ್ತಿರುವ ಜಡಿ ಮಳೆಗೆ ಮತ್ತಷ್ಟು ಶಿಥಿಲಗೊಳ್ಳುತ್ತಿದ್ದು. ಯಾವಾಗ ಬೇಕಾದರೂ ಮತ್ತೆ ಕುಸಿದು ಬೀಳುವ ಆತಂಕ ಕಾಡುತ್ತಿದೆ.

ಸಾವಿರಾರು ವ್ಯಾಪಾರಸ್ಥರ ಜೀವನದ ಕೊಂಡಿಯಾಗಿರುವ ದೇವರಾಜ ಮಾರು ಕಟ್ಟೆ ಈಗಾಗಲೇ ಹಲವು ಬಾರಿ ಕುಸಿದು ಬಿದ್ದಿದ್ದು, ಮತ್ತೆ ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ. ದೇವರಾಜ ಮಾರುಕಟ್ಟೆಯಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಮಳೆ ನೀರು ಸರಾಗವಾಗಿ ಹರಿದು ಹೊರಹೋಗಲು ತಾವಿಲ್ಲದಂತಾಗಿದೆ.

ಸುರಿಯುತ್ತಿರುವ ಮಳೆಯ ನಡು ವೆಯೇ ವ್ಯಾಪಾರ-ವಹಿವಾಟು ನಡೆಯು ತ್ತಿದ್ದು, ಒಳಚರಂಡಿಯ ಹೂಳು ತೆಗೆಯದೆ ಇರುವುದರಿಂದ ಮಾರುಕಟ್ಟೆಯೊಳಗೆ ಎಲ್ಲೆಂ ದರಲ್ಲಿ ಮಳೆ ನೀರು ನಿಲ್ಲುತ್ತಿದೆ. ಜೋರು ಮಳೆ ಬಂದಾಗಲೆಲ್ಲಾ ಸುಮಾರು ಎರಡು ಅಡಿಯಷ್ಟು ನೀರು ನಿಲ್ಲುತ್ತದೆ ಎಂದು ದೇವರಾಜ ಮಾರುಕಟ್ಟೆಯ ಬಾಡಿಗೆ ದಾರರ ಸಂಘದ ಅಧ್ಯಕ್ಷ ಎಸ್.ಮಹದೇವ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಬೆಂಕಿಗಾಹುತಿ, ದ್ವಾರ ಕುಸಿತ: ಮಾರು ಕಟ್ಟೆಯಲ್ಲಿ ಇಲ್ಲಿಯವರೆಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸುಮಾರು ೩೦ ಅಂಗಡಿಗಳು ಬೆಂಕಿಗಾಹುತಿಯಾಗಿವೆ. ೨೦೧೬ರ ಆಗಸ್ಟ್ ನಲ್ಲಿ ನಡೆದ ನವೀಕರಣದ ವೇಳೆ ಉತ್ತರ ಪ್ರವೇಶ ದ್ವಾರವು ಕುಸಿದು ಬಿದ್ದಿತ್ತು. ಇಷ್ಟೆಲ್ಲಾ ಅನಾಹುತಗಳು ಉಂಟಾಗಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ನಮಗೂ-ಮಾರುಕಟ್ಟೆ ಅಭಿವೃದ್ಧಿಗೂ ಸಂಬAಧ ವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಹಲವು ದಿನಗಳಿಂದ ಮೈಸೂರು ನಗರದೆಲ್ಲೆಡೆ ಮಳೆ ಸುರಿಯುತ್ತಿದೆ. ಮಾರು ಕಟ್ಟೆಯೊಳಗಿನ ಒಳಚರಂಡಿಗಳು ಕಸದಿಂದ ತುಂಬಿಹೋಗಿದ್ದು, ಮಳೆ ನೀರು ಸರಾಗ ವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಮಳೆ ಬಂದಾಗಲೆಲ್ಲಾ ಸಾಕಷ್ಟು ಸಮಸ್ಯೆ ಯಾಗುತ್ತಿದೆ. ವ್ಯಾಪಾರ ಮಾಡುವುದೇ ಸಾಹಸವಾಗಿದೆ. ಮಳೆ ಜೋರಾದರೆ ಎಲ್ಲಿ ಕುಸಿದು ಬೀಳುತ್ತದೆಯೋ ಎಂಬ ಭಯ ದಲ್ಲಿಯೇ ವ್ಯಾಪಾರ ಮಾಡುತ್ತಿದ್ದೇವೆ ಎಂದು ಹೇಳಿದರು.
ಕೆಲವು ಮಳಿಗೆಗಳ ಮೇಲ್ಛಾ ವಣ ಕುಸಿದು ಬೀಳುತ್ತಿದೆ. ಭಯದಿಂದ ಕೆಲವರು ಮಾರು ಕಟ್ಟೆಯ ಹೊರಗೆ ಕುಳಿತು ಹಣ್ಣು-ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ದಸರಾ ಸಂದರ್ಭದಲ್ಲಿ ಇಡೀ ಮೈಸೂರೇ ಜಗಮಗಿಸು ವಂತೆ ಮಾಡುತ್ತಾರೆ. ಆದರೆ ಸಾವಿರಾರು ಜನರ ಜೀವನಕ್ಕೆ ಆಧಾರವಾಗಿರುವ ಮಾರುಕಟ್ಟೆಯ ಅಭಿವೃದ್ಧಿ ಕಡೆ ಮಾತ್ರ ಯಾರೂ ತಲೆಕಡೆಸಿಕೊಳ್ಳುತ್ತಿಲ್ಲ. ಮಳೆ ನೀರಿನ ಸೋರಿಕೆಯಿಂದ ಎಲ್ಲಾ ಗೋಡೆ ಗಳು ಕಪ್ಪು ಬಣ್ಣಕ್ಕೆ ತಿರುಗಿ ಹೋಗಿವೆ ಎಂದು ವಿಷಾದಿಸಿದರು.

 

Translate »