ರಾಜ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚಳ: ಅರಣ್ಯದ ಹೊರಗೆ ಅಡ್ಡಾಡುತ್ತಿವೆ 400 ಆನೆಗಳು!
News

ರಾಜ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚಳ: ಅರಣ್ಯದ ಹೊರಗೆ ಅಡ್ಡಾಡುತ್ತಿವೆ 400 ಆನೆಗಳು!

December 15, 2022

ಬೆಂಗಳೂರು, ಡಿ.14-ಆನೆ-ಹುಲಿಗಳು ಹೆಚ್ಚಾಗಿರುವ ರಾಜ್ಯವೆಂಬ ಹೆಗ್ಗಳಿಕೆ ಪಾತ್ರ ವಾಗಿರುವ ಕರ್ನಾಟಕದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳ ಸಂಖ್ಯೆ ಯಲ್ಲಿ ಹೆಚ್ಚಳ ಕಂಡು ಬಂದಿದೆ.

ಈ ಸಂಘರ್ಷಗಳ ನಡುವೆಯೂ ರಾಜ್ಯದಲ್ಲಿ ಆನೆಗಳ ಗಣತಿಯಲ್ಲಿ ಹೆಚ್ಚಳ ಗಳು ಕಂಡು ಬಂದಿದ್ದು, 2017ರ ಸಮೀಕ್ಷಾ ವರದಿ ಪ್ರಕಾರ ರಾಜ್ಯದಲ್ಲಿ 6,049 ಆನೆ ಗಳಿದ್ದವು. ಇದೀಗ ಈ ಸಂಖ್ಯೆ 7,000-7,500ಕ್ಕೆ ಏರಿಕೆಯಾಗಿದೆ. ಇಷ್ಟೇ ಅಲ್ಲ, 400ಕ್ಕೂ ಹೆಚ್ಚು ಆನೆಗಳು ಅರಣ್ಯ ಪ್ರದೇ ಶಗಳ ಹೊರಗೆ ಅಡ್ಡಾಡುತ್ತಿದ್ದು, ಈ ಪ್ರದೇಶವನ್ನು ತನ್ನ ವಾಸಸ್ಥಳಗಳನ್ನಾಗಿ ಮಾಡಿಕೊಂಡಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

4000 ಆನೆಗಳ ಪೈಕಿ 200 ಆನೆಗಳು ಕೊಡಗು ಮತ್ತು ಸುತ್ತಮುತ್ತಲಿನ ಪ್ರದೇಶ ಗಳಲ್ಲಿವೆ. ಹಾಸನದಲ್ಲಿ 60-70 ಆನೆಗಳಿದ್ದು, 100-150 ಆನೆಗಳು ಕೃಷಿ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ. ಆನೆಗಳು ನೆಲೆಯೂ ರಲು ಕಾಡಿನ ಸಾಮರ್ಥ್ಯ ಕೂಡ ಕಡಿಮೆ ಯಿದೆ. ಕೆಲವು ಪ್ರದೇಶಗಳಲ್ಲಿ, ಒಂದು ಆನೆಯು 1-2 ಚದರ ಕಿಮೀ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಮಾನವ-ಪ್ರಾಣಿಗಳ ಸಂಘರ್ಷದ ಪ್ರಕರಣಗಳ ಸಮಸ್ಯೆಯನ್ನು ಪರಿಹರಿಸಲು, ರಾಜ್ಯ ಸರ್ಕಾರವು ಆನೆ ಸಂಘರ್ಷ ಕಾರ್ಯ ಪಡೆ ಮತ್ತು ಆನೆ ಕಾರಿಡಾರ್ ಎಂದು ಘೋಷಿಸಬಹುದಾದ ಪ್ರದೇಶಗಳನ್ನು ನಿರ್ಣಯಿಸಲು ವಿಶೇಷ ಸಮಿತಿಯನ್ನು ರಚಿಸಿದೆ. ಆನೆ ದಾಳಿಗೆ ಬಲಿಯಾದವರ ಕುಟುಂಬಗಳಿಗೆ ಹಾಗೂ ಬೆಳೆ ಹಾನಿ ಪರಿ ಹಾರವನ್ನು ಕೂಡ ಸರ್ಕಾರ ಹೆಚ್ಚಿಸಿದೆ. ಆದರೆ, ನಿಜವಾದ ಸಮಸ್ಯೆಗೆ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ಅಧಿಕಾರಿ ಗಳು ಮತ್ತು ತಜ್ಞರು ಹೇಳಿದ್ದಾರೆ.

ಎಲ್ಲೆಡೆ ಜನರು ಅರಣ್ಯವನ್ನು ಆಕ್ರಮಿಸು ತ್ತಿರುವುದರಿಂದ ಪ್ರಾಣಿಗಳು ನೆಲೆಸಲು ತಾಣವಿಲ್ಲದಂತಾಗುತ್ತಿದೆ. ಇದರಿಂದ ಅರಣ್ಯ ಪ್ರದೇಶಗಳ ಹೊರಗೆ ಆನೆಗಳು ಹೆಚ್ಚು ಅಲೆದಾಡುತ್ತಿವೆ. ವಯಸ್ಸಾದ ಆನೆಗಳು ಸಂಘರ್ಷಕ್ಕಿಳಿಯುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕರ್ನಾಟಕ, ಕೇರಳ ಮತ್ತು ತಮಿಳು ನಾಡಿನಲ್ಲಿ 12,000ಕ್ಕಿಂತ ಹೆಚ್ಚು ಆನೆಗಳಿವೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ತಿಳಿಸಿದೆ.

ಈ ಹಿಂದೆ ತಮಿಳುನಾಡು ಆನೆಗಳನ್ನು ತಮ್ಮ ಕಾಡಿನಿಂದ ಓಡಿಸುತ್ತಿತ್ತು. ಅಲ್ಲಿಂದ ಆನೆಗಳು ಕರ್ನಾಟಕಕ್ಕೆ ಬರುತ್ತಿದ್ದವು. ನಂತರ ಇಲ್ಲಿ ಸಂಘರ್ಷಕ್ಕಿಳಿಯುತ್ತಿತ್ತು. ಇದೀಗ ಕರ್ನಾಟಕದ ಅರಣ್ಯಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಇದಷ್ಟೇ ಅಲ್ಲದೆ, ಅರಣ್ಯದಲ್ಲಿರುವ ಹೆಣ್ಣು ಆನೆಗಳು ಗಂಡಾನೆಗಳನ್ನು ಸೆಳೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Translate »