ಬದಲಾದ ಜೀವನ ಶೈಲಿಯಿಂದ ಯುವಜನರಲ್ಲೂ ಹೆಚ್ಚುತ್ತಿರುವ ಹೃದ್ರೋಗ
ಮೈಸೂರು

ಬದಲಾದ ಜೀವನ ಶೈಲಿಯಿಂದ ಯುವಜನರಲ್ಲೂ ಹೆಚ್ಚುತ್ತಿರುವ ಹೃದ್ರೋಗ

December 12, 2021

ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್.ಸದಾನಂದ ಆತಂಕ

ಮೈಸೂರು, ಡಿ.೧೧(ಆರ್‌ಕೆ)-ಬದಲಾ ಗುತ್ತಿರುವ ಜೀವನ ಶೈಲಿಯಿಂದಾಗಿ ಇಂದು ಯುವ ಜನರಲ್ಲೂ ಹೃದಯ ಸಂಬAಧಿ ಕಾಯಿಲೆ ಕಾಣ ಸಿಕೊಳ್ಳುತ್ತಿದೆ ಎಂದು ಮೈಸೂರಿನ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್.ಸದಾನಂದ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಸ್ಥೆ ಸಹಯೋಗದೊಂದಿಗೆ ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಶ್ರೀ ಜಯದೇವ ಆಸ್ಪತ್ರೆಯಲ್ಲಿ ಪತ್ರಕರ್ತ ರಿಗೆ ಇಂದು ಏರ್ಪಡಿಸಿದ್ದ ಉಚಿತ ಹೃದಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಶ್ರಮ ರಹಿತ ಬದುಕು, ದೇಹಕ್ಕೆ ಅಗತ್ಯ ವ್ಯಾಯಾಮ ಇಲ್ಲದಿರುವುದು, ಜûಂಕ್ ಫುಡ್ ಅತಿ ಯಾದ ಸೇವನೆ, ಕಾರ್ಯದೊತ್ತಡ ಹಾಗೂ ದೇಹದ ರಕ್ತದೊತ್ತಡ, ಸಕ್ಕರೆ ಪ್ರಮಾಣ ಹೆಚ್ಚಾಗುವುದರಿಂದಲೂ ಹೃದಯ ಖಾಯಿಲೆ ಕಾಣ ಸಿಕೊಳ್ಳುತ್ತಿದ್ದು, ಈ ಬಗ್ಗೆ ಎಚ್ಚರದಿಂದಿದ್ದು, ಆಗಿಂದಾಗ್ಗೆ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಿ ಕೊಂಡಿರಬೇಕು. ಅತಿಯಾದ ಚಳಿ ವಾತಾವರಣವು ಹೃದ್ರೋಗಿಗಳಿಗೆ ಅಪಾಯ ಕಾರಿ. ಹೃದಯಾಘಾತವು ಹಠಾತ್ ಬರುವ ಖಾಯಿಲೆ. ವಿಪರೀತ ಬೆವರು, ತಲೆ ಸುತ್ತು, ಆಯಾಸ, ಎದೆ ನೋವು ಇದರ ಲಕ್ಷಣಗಳಾಗಿದ್ದು, ಆ ಸಂದರ್ಭ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದು ಕೊಳ್ಳಬೇಕೆಂದು ಡಾ. ಸದಾನಂದ ತಿಳಿಸಿದರು.

ಶ್ರೀ ಜಯದೇವ ಆಸ್ಪತ್ರೆಗಳಿಗೆ ನಿರ್ದೇ ಶಕರಾದ ಡಾ. ಮಂಜುನಾಥ್ ಅವರು ಆಧಾರಸ್ತಂಭವಾಗಿದ್ದು, ಅವರ ಪರಿ ಶ್ರಮದ ಫಲವಾಗಿ ಸಂಸ್ಥೆ ಹೆಮ್ಮರವಾಗಿ ಬೆಳೆದು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಾ ಬಂದಿದೆ ಎಂದು ಅವರು ಇದೇ ವೇಳೆ ನುಡಿದರು.

ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ. ಎಂ.ಪಶುಪತಿ, ಸಾರ್ವಜನಿಕ ಸಂಪರ್ಕಾ ಧಿಕಾರಿಗಳಾದ ವಾಣ ಮೋಹನ್, ಚಂಪಕ, ನರ್ಸಿಂಗ್ ಸೂಪರಿಂಟೆAಡೆAಟ್ ಗಳಾದ ಹರೀಶ ಕುಮಾರ್, ಶಂಕರ್, ಸಿಬ್ಬಂದಿಗಳಾದ ರಮೇಶ, ಶರತ್, ತಾರಾ, ಪುನೀತ್, ಮಧು, ಮೀನಾಕ್ಷಿ, ಮೋಹಿನಿ, ಕಾವ್ಯ ಸೇರಿದಂತೆ ಹಲವರು ಶಿಬಿರದಲ್ಲಿ ಸಹಕಾರ ನೀಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಉಪಾಧ್ಯಕ್ಷ ಎಂ.ಎಸ್.ಅನುರಾಗ್ ಬಸವರಾಜ್, ನಗರ ಕಾರ್ಯದರ್ಶಿ ಪಿ.ರಂಗಸ್ವಾಮಿ, ಗ್ರಾಮಾಂತರ ಕಾರ್ಯ ದರ್ಶಿ ಮಹದೇವು, ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಶ್, ಮಾಚಮ್ಮ ಮಲ್ಲಿಗೆ, ನಾರಾಯಣ, ರವಿಕುಮಾರ್, ರಘು, ಗಣೇಶ, ಕೃಷ್ಣ ಸೇರಿದಂತೆ ೧೬೦ಕ್ಕೂ ಹೆಚ್ಚು ಪತ್ರಕರ್ತರು ಶಿಬಿರದಲ್ಲಿ ಭಾಗವಹಿಸಿ, ಹೃದಯ ತಪಾಸಣೆ ಮಾಡಿಸಿಕೊಂಡರು.

Translate »