ಅಂಗನವಾಡಿ, ಶಾಲಾ ಮಕ್ಕಳಿಗೆ ಸಾರವರ್ಧಿತ ಅಕ್ಕಿ ಪೂರೈಕೆ
ಮೈಸೂರು

ಅಂಗನವಾಡಿ, ಶಾಲಾ ಮಕ್ಕಳಿಗೆ ಸಾರವರ್ಧಿತ ಅಕ್ಕಿ ಪೂರೈಕೆ

December 12, 2021

ಮೈಸೂರು, ಡಿ.೧೧(ಎಸ್‌ಪಿಎನ್)- ಕೇಂದ್ರ ಸರ್ಕಾರದ ನಿರ್ದೇಶನದಂತೆ ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಕಳೆದ ಮರ‍್ನಾಲ್ಕು ತಿಂಗಳಿAದ `ಸಾರವರ್ಧಿತ’ ಅಕ್ಕಿ ಪೂರೈಕೆ ಮಾಡಲಾಗುತ್ತಿದ್ದು, ಪೋಷಕರು ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಸವರಾಜು ಸ್ಪಷ್ಟಪಡಿಸಿದರು.
ಈ ಸಂಬAಧ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಅವರು, ಸದ್ಯ ರಾಜ್ಯಾದಾದ್ಯಂತ ಶಾಲೆಗಳು ಆರಂಭವಾಗಿದ್ದು, ಇದರೊಂದಿಗೆ ಅಂಗನವಾಡಿಗಳು ತಮ್ಮ ಕಾರ್ಯ ಚಟುವಟಿಕೆ ಆರಂಭಿಸಿವೆ. ಜಿಲ್ಲೆಯಾದ್ಯಂತ ೨,೮೭೫ ಅಂಗನವಾಡಿಯ ೧.೪೫ ಲಕ್ಷ ಮಕ್ಕಳಿಗೂ ಈ ಅಕ್ಕಿಯನ್ನೇ ಪೂರೈಕೆ ಮಾಡಲಾಗಿದೆ ಎಂದರು.

ಮಮೂಲಿ ಅಕ್ಕಿಯ ಪ್ರತಿ ಕಿಂಟ್ವಾಲ್‌ಗೆ ೧೦ ಕೆ.ಜಿಯಂತೆ(ಶೇ.೧೦) ಬೆರೆಸಲಾಗುತ್ತಿದೆ. ಈ ಅಕ್ಕಿಯಲ್ಲಿ ಸಾರವರ್ಧಿತ ಕಾಳು, ಕಬ್ಬಿಣಾಂಶ, ಸತು, ಪೋಲಿಕ್ ಆ್ಯಸಿಡ್, ವಿಟಮಿನ್ ಎ, ವಿಟಮಿನ್ ಬಿ೧೨ ಮೊದಲಾದ ಅಂಶಗಳನ್ನು ಬೆರೆಸಿ ಅಕ್ಕಿ ಕಾಳಿನ ರೂಪ ಕೊಡಲಾಗುತ್ತದೆ. ನೋಡಲು ಸಾಮಾನ್ಯ ಅಕ್ಕಿಗಿಂತ ಕೊಂಚ ಉದ್ದ ಹಾಗೂ ದಪ್ಪವಿರುತ್ತದೆ. ಇದನ್ನು ದೇಶದ ನಾನಾ ಭಾಗಗಳ ಪ್ರಯೋಗಾಲಯದಲ್ಲಿ ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು. ಈ ಹಿಂದೆ ಹಾರೋಹಳ್ಳಿ ಅಂಗನವಾಡಿಯಲ್ಲಿ ಇಂತಹ ಸಮಸ್ಯೆ ಎದುರಾದಾಗ ಅಲ್ಲಿನ ಅಕ್ಕಿಯನ್ನು ಸ್ಯಾಂಪಲ್ ತೆಗೆದು ಸಿಎಫ್‌ಟಿಆರ್‌ಐ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಲಾಗಿತ್ತು. ಅದರಲ್ಲೂ ಯಾವುದೇ ಸಮಸ್ಯೆಯಿಲ್ಲ ಎಂಬ ವರದಿ ಬಂದಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ಎದುರಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪೂರೈಸುತ್ತಿದೆ. ಇದರ ಸೇವನೆಯಿಂದ ಮಕ್ಕಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೂ (೧-೮ನೇ ತರಗತಿ ಬಿಸಿಯೂಟ) ಪೂರೈಕೆ ಮಾಡುವ ಸಂಭವವಿದೆ. ಈಗಾಗಲೇ ಕೆಲವು ಕಡೆ ಪೂರೈಕೆ ಮಾಡಲಾಗುತ್ತಿದೆ. ಮೊದಲ ಬಾರಿಗೆ ಈ ಅಕ್ಕಿ ನೋಡವರಿಗೆ ಸ್ವಲ್ಪ ಗಾಬರಿಪಟ್ಟು ಕೊಳ್ಳುತ್ತಾರೆ. ಯಾರೂ ಇದರಿಂದ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.

Translate »