ಸ್ಥಳೀಯ ಸಂಸ್ಥೆಗಳಿಂದವಿಧಾನ ಪರಿಷತ್ ಚುನಾವಣೆ ಶಾಂತಿಯುತ ಶೇ.೯೯.೮೦ ಮತದಾನ
ಮೈಸೂರು

ಸ್ಥಳೀಯ ಸಂಸ್ಥೆಗಳಿಂದವಿಧಾನ ಪರಿಷತ್ ಚುನಾವಣೆ ಶಾಂತಿಯುತ ಶೇ.೯೯.೮೦ ಮತದಾನ

December 11, 2021

ಕೋಲಾರದಲ್ಲಿ ಅಧಿಕ ಶೇ.೯೯.೯೩, ಬೆಳಗಾವಿ ಕಡಿಮೆ ಶೇ.೯೯.೦೧ರಷ್ಟು ಮತ ಚಲಾವಣೆ

ರಾಜ್ಯಾದ್ಯಂತ ೧೦೬೫೮೭ಮತದಾರರಿಂದ ೯೯ ಮಂದಿ ಭವಿಷ್ಯ ನಿರ್ಧಾರ

ಬೆಂಗಳೂರು, ಡಿ.೧೦(ಕೆಎಂಶಿ)- ಸ್ಥಳೀಯ ಸಂಸ್ಥೆಗಳಿAದ ವಿಧಾನಪರಿಷತ್ತಿನ ೨೫ ಸ್ಥಾನಗಳಿಗೆ ಇಂದು ನಡೆದ ಚುನಾ ವಣೆ ಬಹು ತೇಕ ಶಾಂತಿಯುತವಾಗಿದ್ದು, ಶೇ.೯೯.೮೦ ರಷ್ಟು ಮತದಾನವಾಗಿದೆ.

ಸಂಸದರು, ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು, ಗ್ರಾಮ ಪಂಚಾ ಯಿತಿ ಸದಸ್ಯರು ಸೇರಿದಂತೆ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಸದಸ್ಯರು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಮತ ಚಲಾಯಿಸಿದರು. ಹೆಚ್ಚು ಸ್ಥಾನ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದ್ದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಇದೇ ಮೊದಲ ಬಾರಿಗೆ ಉಳ್ಳವರಿಗೆ ಅವ ಕಾಶ ನೀಡಿ, ವಿಧಾನಪರಿಷತ್ ಪ್ರವೇಶಿಸಲು ಅವಕಾಶ ನೀಡಿದ್ದರು. ಹಿಂದೆಲ್ಲ ಪಕ್ಷಕ್ಕೆ ದುಡಿದ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವ ರಿಗೆ ಟಿಕೆಟ್ ನೀಡಿ, ಗೆಲ್ಲಿಸಿಕೊಂಡು ಬರುತ್ತಿದ್ದ ರಾಜಕೀಯ ಪಕ್ಷಗಳು ಇದೀಗ ಬಂಡವಾಳಶಾಹಿ ಗಳಿಗೆ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದವು.

೨೦ ಕ್ಷೇತ್ರಗಳ ೨೫ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸದಸ್ಯರು ಭಾರೀ ಉತ್ಸಾಹದಿಂದ ಮತ ಚಲಾಯಿಸಿ, ಮಧ್ಯಾಹ್ನದ ವೇಳೆಗೆ ದಾಖಲೆ ಪ್ರಮಾಣದ ಮತದಾನವಾಗಿತ್ತು. ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ೨೦ ಅಭ್ಯರ್ಥಿಗಳನ್ನು ಕಣಕ್ಕಿಸಿದರೆ, ಜೆಡಿಎಸ್ ತನ್ನ ಪ್ರಾಬಲ್ಯ ಹೊಂದಿರುವ ಆರು ಕ್ಷೇತ್ರಗಳಲ್ಲಿ ಮಾತ್ರ ತನ್ನ ಉಮೇದು ವಾರರನ್ನು ಕಣಕ್ಕಿಳಿಸಿತು. ೨೦ ಕ್ಷೇತ್ರಗಳಲ್ಲಿ ೯೯೦೬೨ ಮತದಾ ರರು ಕಣದಲ್ಲಿರುವ ೯೦ ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ. ಡಿಸೆಂಬರ್ ೧೪ ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣ ಕೆ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಬಿ.ಎಸ್. ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಅಲ್ಲದೆ ಗ್ರಾಮೀಣ ಭಾಗವನ್ನು ಪ್ರತಿನಿಧಿಸುವ ಸಚಿವರು, ಶಾಸಕರು, ಸಂಸದರು ತಮ್ಮ ಊರುಗಳಲ್ಲಿ ಮತ ಚಲಾಯಿಸಿದರು.

ಮತದಾರರ ಅನುಕೂಲಕ್ಕಾಗಿ ರಾಜ್ಯದಲ್ಲಿ ೬೦೭೭ ಮತಗಟ್ಟೆಗಳ ಸ್ಥಾಪಿಸಿ, ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದಕ್ಕಾಗಿ ೨೩೦೬೫ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಈ ಬಾರಿಯ ಚುನಾವಣೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಸದಸ್ಯರಿಲ್ಲದ ಕಾರಣ ಗ್ರಾಮ ಪಂಚಾಯಿತಿ ಸದಸ್ಯರಿಗೆ ಭಾರೀ ಬೇಡಿಕೆ ಇತ್ತು.

Translate »