ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ೬,೭೮೭ ಮತದಾರರಲ್ಲಿ ೬,೭೬೯ ಮಂದಿ ಹಕ್ಕು ಚಲಾವಣೆ
ಮೈಸೂರು

ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ೬,೭೮೭ ಮತದಾರರಲ್ಲಿ ೬,೭೬೯ ಮಂದಿ ಹಕ್ಕು ಚಲಾವಣೆ

December 11, 2021

ಮೈಸೂರಲ್ಲಿ ಶೇ.೯೬.೭೩, ಚಾ.ನಗರದಲ್ಲಿ ಶೇ.೯೯.೬೯ರಷ್ಟು ಮತದಾನ

ಮತ ಹಾಕುವುದರಲ್ಲೂ ಮಹಿಳೆಯರೇ ಮೇಲುಗೈ,ಮಂಡ್ಯ ಶೇ.೯೯.೮೫ರಷ್ಟು ಮತದಾನ, ಕೊಡಗು ಶೇ.೯೯.೭೦ರಷ್ಟು ಮತದಾನ, ಹಾಸನ ಶೇ೯೯.೭೮ರಷ್ಟು ಮತದಾನ

ಮೈಸೂರು,ಡಿ.೧೦(ಎಂಟಿವೈ)-ಮೈಸೂರು-ಚಾಮ ರಾಜನಗರ ಸ್ಥಳೀಯ ಸಂಸ್ಥೆಗಳಿAದ ವಿಧಾನ ಪರಿಷತ್‌ನ ದ್ವಿಸದಸ್ಯ ಸ್ಥಾನಕ್ಕೆ ಇಂದು (ಡಿ.೧೦) ಶಾಂತಿಯುತವಾಗಿ ಮತದಾನ ನಡೆದಿದ್ದು, ಒಟ್ಟು ೬,೭೮೭ ಮತದಾರರ ಪೈಕಿ ೬,೭೬೯ ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಶೇ.೯೯.೭೩ರಷ್ಟು ಮತದಾನವಾಗಿದೆ.
ಇಂದು ಬೆಳಗ್ಗೆ ೮ ಗಂಟೆಯಿAದ ಸಂಜೆ ೪ ಗಂಟೆವರೆಗೂ ಮತದಾನ ನಡೆದಿದ್ದು, ಮಧ್ಯಾಹ್ನ ೨ ಗಂಟೆವರೆಗೂ ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ ನಂತರಷ್ಟೇ ಬಿರುಸಿನಿಂದ ನಡೆದು ಅಂತಿಮವಾಗಿ ಶೇ.೯೯.೭೩ರಷ್ಟು ಮತದಾನದಲ್ಲಿ ಪೂರ್ಣಗೊಂಡಿತು.

ಮೈಸೂರು ಜಿಲ್ಲೆಯಲ್ಲಿ ಶೇ.೯೬.೭೬ರಷ್ಟು ಮತದಾನ: ಮೈಸೂರು ಜಿಲ್ಲೆಯಲ್ಲಿ ಮೇಲ್ಮನೆ ಚುನಾವಣೆಗಾಗಿ ೨೫೯ ಮತಗಟ್ಟೆ ಸ್ಥಾಪಿಸಲಾಗಿತ್ತು. ೨೧೭೨ ಪುರುಷರು, ೨೩೩೯ ಮಹಿಳೆಯರು ಹಾಗೂ ಓರ್ವ ತೃತೀಯ ಲಿಂಗಿ ಸೇರಿದಂತೆ ಒಟ್ಟು ೪೫೧೨ ಮತದಾರರ ಪೈಕಿ ೨೧೬೨ ಪುರುಷ, ೨೩೩೮ ಮಹಿಳಾ ಹಾಗೂ ಓರ್ವ ತೃತೀಯ ಲಿಂಗಿ ಸೇರಿದಂತೆ ಒಟ್ಟು ೪೫೦೧ ಮಂದಿ ಹಕ್ಕನ್ನು ಚಲಾಯಿಸಿದ್ದು, ಒಟ್ಟಾರೆ ಶೇ.೯೯.೭೬ರಷ್ಟು ಮತದಾನ ನಡೆದಿದೆ. ಮೈಸೂರು ತಾಲೂ ಕಲ್ಲಿ ೫೮೬ ಮತಗಳ ಪೈಕಿ ೫೮೫ ಮತ ಚಲಾವಣೆಯಾ ಗಿದ್ದು, ಶೇ.೯೯.೮೩ರಷ್ಟು ಮತದಾನ ನಡೆದಿದೆ. ಪಿರಿಯಾ ಪಟ್ಟಣ ತಾಲೂಕಲ್ಲಿ ೫೭೫ ಮತದಾರರಲ್ಲಿ ೫೭೪ ಮಂದಿ ಮತ ಚಲಾಯಿಸಿದ್ದು, ಶೇ. ೯೯.೮೩ರಷ್ಟು, ಕೆ.ಆರ್.ನಗರ ತಾಲೂಕಲ್ಲಿ ೫೮೩ ಮತದಾರರ ಪೈಕಿ ೫೮೨ ಮಂದಿ ಮತ ಚಲಾಯಿಸಿದ್ದು, ಶೇ.೯೯.೮೩ರಷ್ಟು, ಹುಣಸೂರು ತಾಲೂಕಿನ ೬೩೪ ಮತಗಳ ಪೈಕಿ ೬೩೩ ಮತ ಚಲಾವಣೆ ಆಗಿದ್ದು, ಶೇ.೯೯.೮೪, ಹೆಚ್.ಡಿ.ಕೋಟೆ ತಾಲೂಕಿನ ೪೩೧ ಮತಗಳಲ್ಲಿ ೪೩೦ ಮತ ಚಲಾವಣೆಯಾಗಿದ್ದು, ಶೇ.೯೯.೭೭, ಸರಗೂರು ತಾಲೂಕಿನ ೨೦೪ ಮತಗಳ ಪೈಕಿ ೨೦೨ ಚಲಾವಣೆಯಾಗಿದ್ದು, ಶೇ.೯೯.೦೨, ನಂಜನಗೂಡು ತಾಲೂಕಲ್ಲಿ ೮೪೩ ಮತಗಳಲ್ಲಿ ೮೪೨ ಮತ ಚಲಾವಣೆಯಾಗಿದ್ದು, ಶೇ.೯೯.೮೮, ಟಿ.ನರಸೀಪುರ ತಾಲೂಕಿನ ೬೫೬ ಮತಗಳ ಪೈಕಿ ೬೫೩ ಚಲಾವಣೆಯಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಶೇ.೯೯.೬೯ ಮತದಾನ: ಆರಂಭದಿAದಲೂ ಚಾಮರಾಜನಗರ ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಚುರುಕಾಗಿ ನಡೆಯಿತು. ಜಿಲ್ಲೆಯಲ್ಲಿ ಒಟ್ಟು ೧೩೪ ಮತಗಟ್ಟೆ ತೆರೆಯಲಾಗಿತ್ತು. ೧೦೮೮ ಪುರುಷರು ಮತ್ತು ೧೧೮೭ ಮಹಿಳೆಯರು ಸೇರಿ ಜಿಲ್ಲೆಯಲ್ಲಿ ೨೨೭೫ ಮತದಾರರಿದ್ದರು. ಅವರಲ್ಲಿ ೧೦೮೨ ಪುರುಷರು, ೧೧೮೬ ಮಹಿಳಾ ಮತದಾರರು ಒಳಗೊಂಡAತೆ ೨೨೬೮ ಮತ ಚಲಾವಣೆಯಾಗಿ, ಚಾಮರಾಜ ನಗರ ಜಿಲ್ಲೆಯಲ್ಲಿ ಶೇ.೯೯.೬೯ರಷ್ಟು ಮತದಾನವಾಗಿದೆ. ಗುಂಡ್ಲುಪೇಟೆ ತಾಲೂಕಲ್ಲಿ ೫೨೧ ಮತದಾರರ ಪೈಕಿ ೫೨೦ ಮಂದಿ ಹಕ್ಕು ಚಲಾಯಿಸಿದ್ದು, ಶೇ.೯೯.೮೧, ಚಾಮರಾಜ ನಗರ ತಾಲೂಕಲ್ಲಿ ೭೭೮ ಮತದಾರರಲ್ಲಿ ೭೭೬ ಮಂದಿ ಮತದಾನ ಮಾಡಿದ್ದು, ಶೇ.೯೯.೭೪, ಯಳಂದೂರು ತಾಲೂಕಲ್ಲಿ ೨೦೫ ಮತಗಳ ಪೈಕಿ ೨೦೩ ಮತ ಚಲಾವಣೆ ಯಾಗಿದ್ದು, ಶೇ.೯೯.೦೨, ಕೊಳ್ಳೇಗಾಲ ತಾಲೂಕಲ್ಲಿ ೩೩೫ ಮತದಾರರಲ್ಲಿ ೩೩೪ ಮಂದಿ ಹಕ್ಕು ಚಲಾಯಿಸಿದ್ದು, ಶೇ.೯೯.೭೦, ಹನೂರು ತಾಲೂಕಲ್ಲಿ ೪೩೬ ಮತದಾರರಲ್ಲಿ ೪೩೫ ಮಂದಿ ಮತ ಚಲಾಯಿಸಿದ್ದು, ಶೇ.೯೯.೭೭ರಷ್ಟು ಮತದಾನ ನಡೆದಿದೆ.

ಮತದಾನದಲ್ಲಿ ಹೆಂಗಸರೇ ಸ್ಟಾçಂಗ್: ವಿಧಾನ ಪರಿಷತ್ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಕೆ.ಆರ್.ನಗರ ತಾಲೂಕಲ್ಲಿ ಮಾತ್ರ ಶೇ.೧೦೦ರಷ್ಟು ಪುರುಷರು ಮತದಾನ ಮಾಡಿದ್ದರೆ, ಪಿರಿಯಾಪಟ್ಟಣ, ಹುಣಸೂರು, ಮೈಸೂರು, ಹೆಚ್.ಡಿ.ಕೋಟೆ, ಸರಗೂರು, ನಂಜನಗೂಡು, ಟಿ.ನರಸೀಪುರ ತಾಲೂಕಲ್ಲಿ ಮಹಿಳಾ ಮತದಾರರು ಶೇ.೧೦೦ರಷ್ಟು ಮತ ಚಲಾವಣೆ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಯಾವ ತಾಲೂಕಲ್ಲೂ ಪುರುಷರು ಶೇ.೧೦೦ರ ದಾಖಲೆ ಮಾಡಿಲ್ಲ. ಆದರೆ ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಹನೂರು ತಾಲೂಕಲ್ಲಿ ಶೇ.೧೦೦ರಷ್ಟು ಮಹಿಳೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಕಣದಲ್ಲಿದ್ದವರು: ಈ ದ್ವಿಸದಸ್ಯ ಕ್ಷೇತ್ರದಲ್ಲಿ ಬಿಜೆಪಿಯಿಂದ ರಘು ಕೌಟಿಲ್ಯ, ಕಾಂಗ್ರೆಸ್‌ನಿAದ ಡಾ.ಡಿ.ತಿಮ್ಮಯ್ಯ, ಜೆಡಿಎಸ್‌ನಿಂದ ಸಿ.ಎನ್.ಮಂಜೇಗೌಡ, ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್, ಪಕ್ಷೇತರರಾಗಿ ಅಭ್ಯರ್ಥಿಯಾಗಿ ಗುರುಲಿಂಗಯ್ಯ, ಕೆ.ಸಿ.ಬಸವರಾಜಸ್ವಾಮಿ ಹಾಗೂ ಆರ್.ಮಂಜುನಾಥ್ ಸೇರಿದಂತೆ ೭ ಮಂದಿ ಸ್ಪರ್ಧಿಸಿದ್ದಾರೆ. ಡಿ.೧೪ರಂದು ಬೆಳಗ್ಗೆ ೮ ಗಂಟೆಗೆ ಮತ ಎಣ ಕೆ ಪ್ರಕ್ರಿಯೆ ಆರಂಭವಾಗಲಿದ್ದು, ೨ ಸ್ಥಾನಗಳಲ್ಲಿ ಯಾರಿಗೆ ವಿಜಯಲಕ್ಷಿö್ಮÃ ಒಲಿಯುತ್ತದೆ ಎಂದು ಕಾದು ನೋಡಬೇಕಾಗಿದೆ.

Translate »