ನಾನೇ ಜೆಡಿಎಸ್ ಬಾಗಿಲು ಮುಚ್ಕೊಂಡು ಬಂದಿದ್ದೀನಿ, ಇವರೇನು ಮುಚ್ಚೋದು… ಮಾಜಿ ಸಿಎಂ ಹೆಚ್‌ಡಿಕೆಗೆ ಜಿಟಿಡಿ ಟಾಂಗ್
ಮೈಸೂರು

ನಾನೇ ಜೆಡಿಎಸ್ ಬಾಗಿಲು ಮುಚ್ಕೊಂಡು ಬಂದಿದ್ದೀನಿ, ಇವರೇನು ಮುಚ್ಚೋದು… ಮಾಜಿ ಸಿಎಂ ಹೆಚ್‌ಡಿಕೆಗೆ ಜಿಟಿಡಿ ಟಾಂಗ್

December 11, 2021

ಮೈಸೂರು, ಡಿ.೧೦(ಎಂಟಿವೈ)-`ನಾಯಕರ ವರ್ತನೆಯಿಂದ ನಾನೇ ಬೇಸತ್ತು ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರ ಮನೆ ಹಾಗೂ ಜೆಡಿಎಸ್ ಬಾಗಿಲನ್ನು ದಢಾರನೇ ಮುಚ್ಕೊಂಡು ಬಂದಿದ್ದೇನೆ. ಇನ್ನ ಅವರೇನು ಬಾಗಿಲು ಮುಚ್ಚುವ ಅವಶ್ಯಕತೆ ಯಿಲ್ಲ’ ಎಂದು ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಕಚೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿ.ಟಿ.ದೇವೇಗೌಡರಿಗೆ ಜೆಡಿಎಸ್ ಬಾಗಿಲು ಮುಚ್ಚಿದೆ ಎಂದು ಕುಮಾರಸ್ವಾಮಿ ನೀಡಿ ರುವ ಹೇಳಿಕೆಗೆ ಪ್ರತಿಕ್ರಿಯಿಸಿ, `ನನಗೇನು ಜೆಡಿಎಸ್ ಬಾಗಿಲು ಬಂದ್ ಮಾಡೋದು?, `ನಾನೇ ದೇವೇ ಗೌಡರ ಮನೆ ಹಾಗೂ ಜೆಡಿಎಸ್ ಬಾಗಿಲನ್ನು ದಢಾರಂತ ಮುಚ್ಕೊಂಡು ಬಂದಿz್ದೆÃನೆ.

ಅಂದಿನಿAದ ಬಾಗಿಲು ಹಾಕಿದ್ದಾರೋ, ತೆಗೆದಿz್ದÁರೋ ಎಂದು ನಾನ್ಯಾಕೆ ನೋಡಲಿ’ ಎಂದು ತಿರುಗೇಟು ನೀಡಿದರು. ವಿಧಾನಪರಿಷತ್ ಚುನಾವಣೆ ಫಲಿತಾಂಶ ಮೈಸೂರಿಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಒಂದು ಹೊಸ ಶಕ್ತಿ ತುಂಬಲಿದೆ. ಬಹುಮತ ಪಡೆದ ಪP್ಷÀಕ್ಕೆ ಒಂದು ಹೊಸ ಚೈತನ್ಯ ತುಂಬಲಿದೆ. ದ್ವಿಸದಸ್ಯತ್ವ ಕ್ಷೇತ್ರವಾದ ಕಾರಣಕ್ಕೆ ಮೈಸೂರಿನಲ್ಲಿ ಎರಡು ಮತ ಹಾಕಲು ಅವಕಾಶ ಇದೆ. ಹೀಗಾಗಿ, ನಾನು ಮೊದಲ, ಎರಡನೇ ಪ್ರಾಶಸ್ತ್ಯ ಮತ ಹಾಕಿದ್ದು, ಯಾರಿಗೆ ಎಂಬುದನ್ನು ಬಹಿರಂಗಪಡಿಸಿದರೆ ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದರು.

ಮೇಲ್ಮನೆಗೆ ವಿಷಯ ತಜ್ಞರು, ಬುದ್ಧಿಜೀವಿಗಳು ಆಯ್ಕೆಯಾಗಿ ಹೋಗಬೇಕು. ಆದರೆ, ಇದೀಗ ಹಿನ್ನೆಲೆ ಹೇಗೇ ಇದ್ದರೂ ದುಡ್ಡೊಂದಿದ್ದರೆ ಸಾಕು ಎನ್ನುವಂತಾಗಿದೆ. ಮೈಸೂರಿನಲ್ಲಿ ಮಂಜುನಾಥಸ್ವಾಮಿಯ ಬೆಳ್ಳಿಯ ಕಾಯಿನ್ ಜತೆಗೆ ಉಪ್ಪು, ಮಾರಿ ಕೂದಲು ಇಟ್ಟು ಆಣೆ ಪ್ರಮಾಣ ಮಾಡಿಸಲಾಗಿದೆ. ಇದನ್ನೆಲ್ಲ ನೋಡಿದರೆ ವಿಧಾನ ಪರಿಷತ್‌ನ ಪಾವಿತ್ರÈತೆಗೆ ಕಳಂಕ ಅಲ್ಲವೇ? ಎಂದು ಬೇಸರ ವ್ಯಕ್ತಪಡಿಸಿದರು.

Translate »