ಸಕಲ ಸೇನಾ ಗೌರವದೊಂದಿಗೆ ಬಿಪಿನ್ ರಾವತ್ ದಂಪತಿ ಅಂತ್ಯಕ್ರಿಯೆ
ಮೈಸೂರು

ಸಕಲ ಸೇನಾ ಗೌರವದೊಂದಿಗೆ ಬಿಪಿನ್ ರಾವತ್ ದಂಪತಿ ಅಂತ್ಯಕ್ರಿಯೆ

December 11, 2021

ಅಂತಿಮ ಯಾತ್ರೆಯಲ್ಲಿ ಘೋಷಣೆ ಮೂಲಕ ನಮನ
ರಾವತ್ ನಿವಾಸದಲ್ಲೂ ಅಂತಿಮ ವಿಧಿ ವಿಧಾನ ಸಲ್ಲಿಕೆ
ಒಂದೇ ಚಿತೆಯಲ್ಲಿ ತಂದೆ ತಾಯಿಗೆ ಪುತ್ರಿಯರಿಂದ ಅಗ್ನಿಸ್ಪರ್ಶ

ನವದೆಹಲಿ, ಡಿ. ೧೦- ತಮಿಳುನಾಡಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತ ದಲ್ಲಿ ಸಾವನ್ನಪ್ಪಿದ ಭಾರತೀಯ ಸೇನಾಪಡೆ ಗಳ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಸಕಲ ಸೇನಾ ಗೌರವಗಳೊಂದಿಗೆ ಇಂದು ಸಂಜೆ ನೆರವೇರಿಸಲಾಯಿತು.

ದೆಹಲಿಯ ಕಂಟೋನ್ಮೆAಟ್ ಬ್ರಾರ್ ಸ್ಕೆ÷್ವÃರ್ ನಲ್ಲಿರುವ ಚಿತಾಗಾರದಲ್ಲಿ ೮೦೦ಕ್ಕೂ ಅಧಿಕ ಸೇನಾ ಸಿಬ್ಬಂದಿ ಮತ್ತು ಕೋಟ್ಯಾಂತರ ಜನರ ಆಶ್ರುತರ್ಪಣದ ನಡುವೆ ದಂಪತಿ ಪಾರ್ಥಿವ ಶರೀರವನ್ನು ಒಂದೇ ಚಿತೆಯಲ್ಲಿಟ್ಟು ಅಗ್ನಿಸ್ಪರ್ಶ ಮಾಡಲಾಯಿತು. ಪುತ್ರಿಯರಾದ ಕೃತಿಕಾ ಮತ್ತು ತಾರಿಣ , ತಮ್ಮ ತಂದೆ ತಾಯಿಯ ಅಂತಿಮ ವಿಧಿ-ವಿಧಾನಗಳನ್ನು
ನೆರವೇರಿಸಿದರು. ಗಾಳಿಯಲ್ಲಿ ೧೭ ಸುತ್ತು ಗುಂಡು ಹಾರಿಸುವ ಮೂಲಕ ಸೇನಾ ಗೌರವ ಸಲ್ಲಿಸಲಾಯಿತು.

ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಸೇನಾ ಸಿಬ್ಬಂದಿ ಮತ್ತು ಭೂಸೇನಾ, ವಾಯುಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರು, ಬಿಪಿನ್ ರಾವತ್ ಅವರ ಕುಟುಂಬ ಸದಸ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಗಲಿದ ವೀರ ಸೇನಾನಿ ಜನರಲ್ ಬಿಪಿನ್ ದಂಪತಿಗೆ ಅಂತಿಮ ನಮನ ಸಲ್ಲಿಸಿದರು.

ಇದಕ್ಕೂ ಮುನ್ನ ದೆಹಲಿಯ ಅವರ ನಿವಾಸದಿಂದ ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಅವರ ಪಾರ್ಥಿವ ಶರೀರವನ್ನು ನಾನಾ ಪುಷ್ಪಗಳಿಂದ ಅಲಂಕೃತಗೊAಡಿದ್ದ ಸೇನಾ ವಾಹನದಲ್ಲಿ ಮೆರವಣ ಗೆ ಮೂಲಕ ಕಂಟೋನ್ಮೆAಟ್‌ನ ಬ್ರಾರ್ ಸ್ಕೆ÷್ವÃರ್ ತರಲಾಯಿತು.

ಇದಕ್ಕೂ ಮುನ್ನ ಇಂದು ಬೆಳಗ್ಗೆ ೧೧ ಗಂಟೆ ಸುಮಾರಿಗೆ ಕಾಮರಾಜ್ ಮಾರ್ಗ್ ನಿವಾಸದಲ್ಲಿ ರಾವತ್ ದಂಪತಿ ಭೌತಿಕ ಕಾರ್ಯಗಳು ನಡೆಯಿತು. ಮೂರು ಸೇನಾ ಪಡೆಗಳ ಬ್ಯಾಂಡ್ ಜೊತೆಗೆ ಮೆರವಣ ಗೆ ಮೂಲಕ ಮನೆಗೆ ಪಾರ್ಥಿವ ಶರೀರವನ್ನು ತರಲಾಯಿತು. ರಾವತ್ ದಂಪತಿಗೆ ನಮನ ಸಲ್ಲಿಸಲು ಬಂಧು-ಬಾAಧವರಿಗೆ ಮಧ್ಯಾಹ್ನ ೨ಗಂಟೆವರೆಗೂ ಅವಕಾಶ ನೀಡಲಾಗಿತ್ತು. ಈ ವೇಳೆ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು. ಮಧ್ಯಾಹ್ನ ೨ ಗಂಟೆಗೆ ಕಾಮರಾಜ್ ಮಾರ್ಗದಿಂದ ಬ್ರಾರ್ ವೃತ್ತದ ರುದ್ರಭೂಮಿವರೆಗೂ ರಾವತ್ ದಂಪತಿಯ ಮೆರವಣ ಗೆ ನಡೆಯಿತು.

ರಾವತ್ ನಿವಾಸದಿಂದ ಪಾರ್ಥಿವ ಶರೀರದ ಮೆರವಣ ಗೆಯನ್ನು ರಾಜಾಜಿ ಮಾರ್ಗ, ತೀನ್ ಮೂರ್ತಿ ಮಾರ್ಗ, ೧೧ ಮೂರ್ತಿ, ಸರ್ದಾರ್ ಪಟೇಲ್ ಮಾರ್ಗ, ದೌಲಾ ಖಾನ್ ಮೂಲಕ ದೆಹಲಿ ಕಟೋನ್ಮೆಂಟ್‌ನ ಬ್ರಾರ್ ಸ್ಕೆ÷್ವÃರ್ ಚಿತಾಗಾರದವರೆಗೆ ತರಲಾಯಿತು. ಚಿತಾಗಾರಕ್ಕೆ ಬರುತ್ತಿದ್ದಂತೆ ಪಾರ್ಥಿವ ಶರೀರವನ್ನು ೬ ಸೇನಾಧಿಕಾರಿಗಳು ಹೊತ್ತು ಸಾಗಿದರು. ತಲಾ ೯೯ ಮಂದಿ ಇರುವ ಭೂಸೇನೆ, ನೌಕಾ ಸೇನೆ, ವಾಯುಸೇನೆಯ ಬ್ಯಾಂಡ್‌ನಿAದ ಗೌರವ ನಮನ ಸಲ್ಲಿಸಲಾಯಿತು.

ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಪಾರ್ಥಿವ ಶರೀರದ ಮೆರವಣ ಗೆ ದೆಹಲಿ ಕಂಟೋನ್ಮೆAಟ್‌ನಲ್ಲಿರುವ ಬ್ರಾರ್ ಸ್ಕೆ÷್ವÃರ್ ಸ್ಮಶಾನದ ಕಡೆಗೆ ಸಾಗುತ್ತಿರುವಾಗ ಜನರು ಜಬ್ ತಕ್ ಸೂರಜ್ ಚಾಂದ್ ರಹೇಗಾ, ಬಿಪಿನ್ ಜಿ ಕಾ ನಾಮ್ ರಹೇಗಾ ಎಂಬ ಘೋಷಣೆಗಳನ್ನು ಕೂಗಿದರು.

ರಾವತ್ ನಿವಾಸದಿಂದ ೯ ಕಿ.ಮೀ. ಅಂತಿಮಯಾತ್ರೆ ಆರಂಭವಾಗುತ್ತಿದ್ದAತೆ ರಸ್ತೆಗಳ ಇಕ್ಕೆಲಗಳಲ್ಲಿ ಜನಸ್ತೋಮವೇ ಕೂಡಿತ್ತು. ಎಲ್ಲರೂ ಜಯಘೋಷ ಕೂಗುತ್ತಾ ದಂಡನಾಯನಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ೯೯ ಮಿಲಿಟರಿ ಧ್ವಜಧಾರಿಗಳು ಧ್ವಜ ಹೊತ್ತು ಮೆರವಣ ಗೆಯಲ್ಲಿ ಸಾಗಿದರು. ಸಂಜೆ ೫ ಗಂಟೆಗೆ ಧೌಲಾಖಾನ್‌ನ ಬ್ರಾರ್ ಚಿತಾಗಾರದಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಸಿಡಿಎಸ್ ದಂಪತಿ ಅಂತ್ಯಕ್ರಿಯೆ ನಡೆಯಿತು.

ಇದಕ್ಕೂ ಮುನ್ನ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್‌ಸಿಂಗ್ ಧಾಮಿ, ಡಿಎಂಕೆ ನಾಯಕ ಎ. ರಾಜಾ, ಕನಿಮೋಳಿ ಸೇರಿದಂತೆ ನೂರಾರು ಗಣ್ಯರು ರಾವತ್ ದಂಪತಿಯ ಅಂತಿಮ ದರ್ಶನ ಪಡೆದರು.
ಅಂತ್ಯಕ್ರಿಯೆಯಲ್ಲಿ ನೇಪಾಳ, ಶ್ರೀಲಂಕಾ, ಭೂತಾನ್‌ನ ಸೇನಾಧಿಕಾರಿಗಳು, ಕೇಂದ್ರ ಸಚಿವರು, ಸೇನಾಧಿಕಾರಿಗಳು ಮತ್ತು ಗಣ್ಯರು ಭಾಗವಹಿಸಿದ್ದರು. ಉಳಿದ ಹುತಾತ್ಮರ ಪಾರ್ಥಿವ ಶರೀರಗಳನ್ನು ಅವರವರ ಸ್ವಗ್ರಾಮಗಳಿಗೆ ಕಳುಹಿಸಲಾಗಿದೆ.

ತಮಿಳುನಾಡಿನ ಕೂನೂರು ಬಳಿಯ ಅರಣ್ಯ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ದಂಡನಾಯಕ ಬಿಪಿನ್ ರಾವತ್, ಪತ್ನಿ ಸೇರಿ ೧೩ ಮಂದಿ ಹುತಾತ್ಮರಾಗಿದ್ದರು. ಕ್ಯಾಪ್ಟನ್ ವರುಣ್ ಸಿಂಗ್ ಒಬ್ಬರು ತೀವ್ರ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾತನಿಂದ ಆಶೀರ್ವಾದ ಪಡೆದ ಮೊಮ್ಮಗ
ಇಂದು ಜನರಲ್ ಬಿಪಿನ್ ರಾವತ್ ಅವರ ಅಂತ್ಯ ಸಂಸ್ಕಾರದ ವೇಳೆ ಹೃದಯಸ್ಪರ್ಶಿ ಘಟನೆಯೊಂದು ನಡೆಯಿತು.
ಬಿಪಿನ್ ರಾವತ್‌ರ ಪಾರ್ಥಿವ ಶರೀರವನ್ನು ಅವರ ಮೊಮ್ಮಗು ತಾಯಿಯ ಸಹಾಯದಿಂದ ಸ್ಪರ್ಶಿಸಿ, ಅಂತಿಮ ಆಶೀರ್ವಾದ ಪಡೆದದ್ದು ಹೃದಯ ಕಲಕುವಂತಿತ್ತು.
ಕAಟೋನ್ಮೆAಟ್ ಬ್ರಾರ್ ಸ್ಕೆ÷್ವÃರ್‌ನ ಚಿತಾಗಾರದಲ್ಲಿ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿತ್ತು. ಈ ವೇಳೆ ಬಿಪಿನ್ ರಾವತ್ ಅವರ ಪುತ್ರಿ ತಮ್ಮ ಪುಟ್ಟ ಮಗು (ಬಿಪಿನ್ ರಾವತ್ ಅವರ ಮೊಮ್ಮಗು)ವನ್ನು ಎತ್ತಿಕೊಂಡು ಬಂದು, ರಾವತ್ ಅವರ ಪಾರ್ಥಿವ ಶರೀರದ ಬಳಿ ತಮ್ಮ ತಂದೆಯ ತಲೆಯ ಭಾಗದಲ್ಲಿ ಮಗುವಿನ ಕೈ ಸ್ಪರ್ಶಿಸಿ, ನಿಮ್ಮ ಆಶೀರ್ವಾದ ನನ್ನ ಮಗುವಿನ ಮೇಲೆ ಇರಲಿ ಎಂದು ಪ್ರಾರ್ಥಿಸಿದರು.

ಈ ವೇಳೆ ರಾವತ್ ಅವರ ಪುತ್ರಿ ದುಃಖವನ್ನು ತಡೆಯಲಾಗದೆ ತಮ್ಮ ಮಗು (ತಾತನಿಂದ ಆಶೀರ್ವಾದ ಪಡೆದ ಮಗು)ವನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ಆಗ ಕುಟುಂಬಸ್ಥರು ಅವರನ್ನು ಸಮಾಧಾನಪಡಿಸಿದರು. ಈ ದೃಶ್ಯವನ್ನು ಕಂಡು ಸೈನಿಕರ ಕಣ್ಣಾಲಿಗಳಲ್ಲಿ ನೀರು ಜಿನುಗಿತು.

 

Translate »