ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮೈಸೂರು ಪ್ರಶಸ್ತ
ಮೈಸೂರು

ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮೈಸೂರು ಪ್ರಶಸ್ತ

December 11, 2021

`ಮೈ ರಿಯಾಲಿಟಿ’ ಮೆಗಾ ಪ್ರಾಪರ್ಟಿ ಷೋಗೆ ಚಾಲನೆ ನೀಡಿ, ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್ ಅಭಿಮತ
ಮೈಸೂರು, ಡಿ.೧೦(ಆರ್‌ಕೆ)-ರಿಯಲ್ ಎಸ್ಟೇಟ್ ಉದ್ಯಮದ ಅಭಿವೃದ್ಧಿಗೆ ಮೈಸೂರು ಪ್ರಶಸ್ತವಾದ ನಗರ ಎಂದು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ (ಮುಡಾ) ಆಯುಕ್ತ ಡಾ. ಡಿ.ಬಿ.ನಟೇಶ್ ಅವರು ಇಂದಿಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಬಿಲ್ರ‍್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಃಂI), ಕಾನ್‌ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲರ‍್ಸ್ ಅಸೋ ಸಿಯೇಷನ್ ಆಫ್ ಇಂಡಿಯಾ (ಅಖಇಆಂI) ಸಂಸ್ಥೆಗಳು ಮೈಸೂರು ಬಿಲ್ರ‍್ಸ್ ಚಾರಿ ಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಮೈಸೂರಿನ ಕಾಸ್ಮೋಪಾಲಿಟನ್ ಕ್ಲಬ್ (ಸಿಸಿ ಕ್ಲಬ್) ಆವರಣದಲ್ಲಿ ಇಂದಿನಿAದ ಆಯೋಜಿಸಿರುವ ಮೂರು ದಿನಗಳ `ಮೈ ರಿಯಾಲಿಟಿ ೨೦೨೧’ ಮೆಗಾ ಪ್ರಾಪರ್ಟಿ ಷೋದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಬೆಂಗಳೂರನ್ನು ಹೊರತುಪಡಿಸಿದರೆ ಅತೀ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ ನಿವೇಶನ, ಮನೆ, ಪ್ಲಾಟ್ ಹೊಂದಬೇಕೆAದು ಎಲ್ಲರೂ ಬಯಸುತ್ತಿರು ವುದರಿಂದ ರಿಯಲ್ ಎಸ್ಟೇಟ್ ಕ್ಷೇತ್ರದ ಅಭಿ ವೃದ್ಧಿಗೆ ಪೂರಕವಾಗಿದೆ. ಮೈಸೂರು-ಬೆಂಗಳೂರು ದಶಪಥ ನಿರ್ಮಾಣ, ಮಂಡಕಳ್ಳಿಯ ವಿಮಾನ ನಿಲ್ದಾಣ, ರೈಲು ಜೋಡಿ ಹಳಿ ಮಾರ್ಗ, ರಿಂಗ್ ರಸ್ತೆ ಯಂತಹ ಮಹತ್ವದ ಯೋಜನೆಗಳು ಬಂದಿರುವುದರಿAದ ಮೈಸೂರು ಅತೀ ವೇಗವಾಗಿ ಬೆಳೆಯಲು ವಿಫುಲ ಅವಕಾಶವಿದೆ ಎಂದು ತಿಳಿಸಿದರು.
ಪೆನ್ಷರ‍್ಸ್ ಪ್ಯಾರಡೈಸ್ ಎಂದು ಕರೆಯ ಲ್ಪಡುವ ಸಾಂಸ್ಕೃತಿಕ ನಗರಿಯಲ್ಲಿ ವಾಸ ಮಾಡಲಿಚ್ಛಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಲ್ಲೊಂದು ಆಸ್ತಿ ಹೊಂದಬೇಕೆAದು ಬಯಸುತ್ತಿ ರುವುದರಿಂದ ನಾಗರಿಕರಿಗೆ ನಿವೇಶನ, ಮನೆ, ಅಪಾರ್ಟ್ಮೆಂಟ್‌ಗಳಲ್ಲಿನ ಪ್ಲಾಟ್‌ಗಳು, ವಸತಿ ಬಡಾವಣೆ ಕುರಿತಂತೆ ಮಾಹಿತಿ ನೀಡಿ ಸೌಲಭ್ಯ ಒದಗಿಸುವ ಅಗತ್ಯವಿದೆ ಎಂದು ಕಮೀಷನರ್ ತಿಳಿಸಿದರು.

ಕೋವಿಡ್-೧೯ ಭೀತಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಕ್ಷೀಣ ಸಿದ್ದ ರಿಯಲ್ ಎಸ್ಟೇಟ್ ಉದ್ಯಮ ಈಗ ತಾನೇ ಚೇತರಿಸಿ ಕೊಳ್ಳುತ್ತಿದೆ. ಮೈ ರಿಯಾಲಿಟಿ ಷೋ ಕಾರ್ಯಕ್ರಮವನ್ನು ವರ್ಷಕ್ಕೊಮ್ಮೆ ಬದಲು ಪ್ರತೀ ತಿಂಗಳು ರಜಾ ದಿನಗಳಲ್ಲಿ ಆಯೋ ಜಿಸಿದರೆ ಮೈಸೂರಿಗೆ ಭೇಟಿ ನೀಡುವವರಿಗೆ ಪ್ರಾಪರ್ಟಿ ಹೊಂದುವ ಕುರಿತಂತೆ ಅಗತ್ಯ ಮಾಹಿತಿ ನೀಡಿ ದಂತಾಗಲಿದೆ ಎಂದ ಡಾ. ನಟೇಶ್, ವಸತಿ ಬಡಾವಣೆ, ಅಪಾರ್ಟ್ ಮೆಂಟ್ ನಿರ್ಮಿಸುವ ಸಂಬAಧ ಪ್ಲಾನ್ ಅನುಮೋದನೆಯಂತಹ ಪ್ರಕ್ರಿಯೆಗೆ ಮುಡಾ ಸಂಪೂರ್ಣ ಸಹಕಾರ ನೀಡಲಿದೆ ಎಂದು ಇದೇ ಸಂದರ್ಭ ಭರವಸೆ ನೀಡಿದರು.

ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್ ಮಾದರಿ ಯಲ್ಲಿ ಗುಂಪು ಮನೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ವಿತರಿಸಲು ಉದ್ದೇಶಿಸಿದ್ದು, ಆ ಮೂಲಕ ವಸತಿ ರಹಿತರಿಗೆ ಆಶ್ರಯ ಒದಗಿಸಲಾ ಗುವುದು ಎಂದು ಅವರು ನುಡಿದರು.

ರಿಯಾಲಿಟಿ ಷೋ ಉದ್ಘಾಟಿಸಿ ಮಾತನಾಡಿದ ಎನ್.ಆರ್.ಗ್ರೂಪ್ ಅಧ್ಯಕ್ಷ ಆರ್.ಗುರು ಅವರು, ಪ್ರತಿಷ್ಠಿತ ಬಿಲ್ರ‍್ಸ್, ಅಪಾರ್ಟ್ಮೆಂಟ್ ಹಾಗೂ ಲ್ಯಾಂಡ್ ಡೆವಲರ‍್ಸ್ಗಳು ಒಟ್ಟಿಗೆ ಸೇರಿ ಒಂದೇ ಸೂರಿನಡಿ ರಿಯಲ್ ಎಸ್ಟೇಟ್ ಉದ್ಯಮದ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಉತ್ತಮ ಕೆಲಸ ಎಂದು ಪ್ರಶಂಸಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಸಿ ಕ್ಲಬ್ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಬಿಎಐ ಕ್ರೆಡಾಯ್, ಮೈಸೂರ್ ಬಿಲ್ರ‍್ಸ್ ಚಾರಿಟಬಲ್ ಟ್ರಸ್ಟ್ ಹಾಗೂ ಸ್ಫೂರ್ತಿ ಮಹಿಳಾ ಘಟಕದವರು ಒಟ್ಟಿಗೆ ಸೇರಿ ಉದ್ಯಮದ ಅನುಕೂಲಗಳನ್ನು ನಾಗರಿಕರಿಗೆ ತಿಳಿಸುವ ಇಂತಹ ಒಳೆಯ ಕಾರ್ಯಕ್ರಮ ಸಿಸಿ ಕ್ಲಬ್‌ನಲ್ಲಿ ನಡೆಯುತ್ತಿ ರುವುದು ಹೆಮ್ಮೆ ಎನಿಸಿದೆ. ಪ್ರತೀ ವರ್ಷವೂ ನಮ್ಮ ಸಂಸ್ಥೆಯಲ್ಲೇ ಏರ್ಪಡಿಸಿದರೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಕ್ರೆಡಾಯ್ ರಾಜ್ಯಾಧ್ಯಕ್ಷ ಚೈತನ್ಯ ಕುಲಕಣ ð, ಮೈಸೂರು ಚಾಪ್ಟರ್ ಅಧ್ಯಕ್ಷ ಎನ್.ಎಸ್.ಮುರಳೀಧರ, ಕಾರ್ಯದರ್ಶಿ ಹರೀಶ್ ಶೆಣೈ, ಬಿಎಐ ಮೈಸೂರು ಸೆಂಟರ್ ಅಧ್ಯಕ್ಷ ಕೆ.ಅಜಿತ್ ನಾರಾಯಣ್, ಕಾರ್ಯದರ್ಶಿ ಎ.ಎಸ್.ಯೋಗಾ ನರಸಿಂಹ, ಮೈ ರಿಯಾಲಿಟಿ ಅಧ್ಯಕ್ಷ ಟಿ.ಎನ್. ಪಾರ್ಥಸಾರಥಿ, ಕಾರ್ಯದರ್ಶಿ ಉದಯ್ ಎಸ್. ಕುಮಾರ್, ಸ್ಫೂರ್ತಿ ಘಟಕದ ಪದಾಧಿಕಾರಿಗಳು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ಲಾಟಿನA ಪ್ರಾಯೋಜಕರಾದ ಮೆ| ಬ್ರಿಗೇಡ್ ಎಂಟರ್ ಪ್ರೆöÊಸಸ್, ಮೆ| ಪಾರಾ ಮೌಂಟ್, ಮೆ| ಕೆಎನ್‌ಎಸ್, ಇನ್‌ಫ್ರಾ, ಗೋಲ್ಡ್ ಪ್ರಾಯೋಜಕರಾದ ಸ್ಕಿಲ್ ಟೆಕ್, ಮೆ| ಈಗಲ್ ಬರ್ಗ್ ಇಂಡಿಯಾ ಪ್ರೆöÊ.ಲಿ., ಸಿಲ್ವರ್ ಪ್ರಾಯೋಜಕರುಗಳಾದ ರೈ ಎಸ್ಟೇಟ್, ಕ್ಯಾಲಿಬರ್ ಹಾಗೂ ಭೀಮಾ ಪ್ರಾಪರ್ಟೀಸ್ ಸೇರಿದಂತೆ ಹಲವು ಡೆವ ಲಪರ್ ಕಂಪನಿಗಳು ಮೈ ರಿಯಾಲಿಟಿ ಯಲ್ಲಿ ಪಾಲ್ಗೊಂಡಿವೆ. ಪ್ರತಿ ದಿನ ಬೆಳಗ್ಗೆ ೧೦ ರಿಂದ ರಾತ್ರಿ ೯ ಗಂಟೆವರೆಗೆ ತೆರೆದಿರುವ ಷೋಗೆ ಉಚಿತ ಪ್ರವೇಶ ವಿದ್ದು, ಭಾನುವಾರ ರಾತ್ರಿ ಅಂತ್ಯಗೊಳ್ಳಲಿದೆ.

Translate »